Maharashtra Polls: ಘರ್ಷಣೆ, ವಾಗ್ವಾದ ನಡುವೆ ಮಹಾರಾಷ್ಟ್ರ ಮತ ಕುಸಿತ
ಹೃದಯಘಾತದಿಂದ ಪಕ್ಷೇತರ ಅಭ್ಯರ್ಥಿ ಸಾವು
Team Udayavani, Nov 21, 2024, 8:25 AM IST
ಮುಂಬಯಿ: ಮಹಾಯುತಿ ಮತ್ತು ಮಹಾ ಅಘಾಡಿಗಳ ಘರ್ಷಣೆ, ವಾಗ್ವಾದದ ನಡುವೆಯೇ ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಮತ ಪ್ರಮಾಣ ಕುಸಿತವಾಗಿದೆ. ರಾಜ್ಯದ 288 ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನವಾಗಿದ್ದು, ಶೇ. 60ರಷ್ಟು ಮತದಾನವಾಗಿದೆ. 2019ರಲ್ಲಿ ಶೇ.61.74ರಷ್ಟು ಮತದಾನ ದಾಖಲಾಗಿತ್ತು.
ಮತದಾನಕ್ಕೆ ತೆರೆ ಬೀಳುವ ಮೂಲಕ ರಾಜ್ಯದ 4,136 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆಯಲ್ಲಿ ಭದ್ರವಾ ದಂತಾಗಿದೆ. ನ.23ರಂದು ಫಲಿತಾಂಶ ಪ್ರಕಟವಾಗ ಲಿದೆ. ಕೆಲವೆಡೆ ವಾಗ್ವಾದ ಘರ್ಷಣೆಗಳೂ ಉಂಟಾಗಿ ದೆ. ಉಳಿದಂತೆ ಮತದಾನ ಶಾಂತಿಯುತವಾಗಿತ್ತು.
ಬಾಲಿವುಡ್ ನಟ ನಟಿಯರಾದ ಅಕ್ಷಯ ಕುಮಾರ್, ಶಾರುಖ್ , ರಣಬೀರ್ ಕಪೂರ್, ಸೇರಿ ಪಮುಖರು ಹಕ್ಕು ಚಲಾ ವಣೆ ಮಾಡಿದ್ದಾರೆ. ಗಡಿcರೋಲಿಯಲ್ಲಿ ಶೇ. 69 ಮತದಾನವಾಗಿದ್ದು, ಇದು ರಾಜ್ಯದಲ್ಲೇ ಅತೀಹೆಚ್ಚು ಮತದಾನ ದಾಖಲಾದ ಜಿಲ್ಲೆಯಾಗಿದೆ.
ಶತಾಯುಷಿಗಳ ಮತದಾನ: ಮಲಬಾರ್ ಹಿಲ್‌ನಲ್ಲಿ 113 ವರ್ಷದ ಹಾಗೂ 103 ವರ್ಷದ ಮತದಾರರು ಗಾಲಿಕುರ್ಚಿಯಲ್ಲಿ ತೆರಳಿ ಮತ ಚಲಾಯಿಸಿದ್ದಾರೆ.
ನಾಂದೇಡ್ ಉಪ ಚುನಾವಣೆ, ಶೇ.53 ಮತದಾನ: ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, ಶೇ.53.78 ರಷ್ಟು ಮತದಾನವಾಗಿದೆ.
ಎನ್‌ಸಿಪಿ ನಾಯಕನ ಮೇಲೆ ಹಲ್ಲೆ, ಮತಗಟ್ಟೆ ಧ್ವಂಸ!
ಪರ್ಲಿ ಕ್ಷೇತ್ರದ ಘಟಂದೂರ್ ಮತಗಟ್ಟೆಗೆ ಲಗ್ಗೆ ಇಟ್ಟು, ಇವಿಎಂ ಎಸೆದು, ಮತಗಟ್ಟೆ ಧ್ವಂಸಗೊಳಿಸಿ, ಶರದ್ ಪವರ್ ಬಣದ ನಾಯಕ ಮಾಧವ್ ಜಾಧವ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ದ್ದಾರೆ. ಹಾಳಾದ ಇವಿಎಂಗಳ ಮೂಲಕ ಈಗಾ ಗಲೇ ಚಲಾವಣೆಯಾದ ಮತ ಸುರಕ್ಷಿ ತ ವಾ ಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೃದಯಘಾತದಿಂದ ಪಕ್ಷೇತರ ಅಭ್ಯರ್ಥಿ ಸಾವು
ಮತ ಚಲಾಯಿಸಲು ಸರದಿಯಲ್ಲಿ ಕಾಯುತ್ತಿದ್ದ ಮಹಾರಾಷ್ಟ್ರದ ಬೀಡ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಾಳಾಸಾಹೇಬ್ ಶಿಂಧೆ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ. ನೆಲದ ಮೇಲೆ ಕುಸಿದು ಬಿದ್ದ ಶಿಂಧೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು
Tragedy: ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ.. 5 ತಿಂಗಳ ಮಗು ಸೇರಿ ಐವರು ದುರ್ಮರಣ
Bitcoin Scam: ಬಿಟ್‌ಕಾಯಿನ್ ವಿವಾದ… ಧ್ವನಿ ಸುಪ್ರಿಯಾದ್ದೆ ಎಂದ ಅಜಿತ್
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.