ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!
ಸುನಿಲ್ ದೇಶ್ ಮುಖ್ ರೊಂದಿಗೆ 18 ಬಿಜೆಪಿ ಕಾರ್ಪೋರೇಟರ್ ಗಳು ಕಾಂಗ್ರೆಸ್ ಗೆ ಸೇರ್ಪಡೆ
Team Udayavani, Jun 19, 2021, 5:29 PM IST
ನವ ದೆಹಲಿ : ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್ ಇಂದು ಬಿಜೆಪಿ ಪಕ್ಷವನ್ನು ತೊರೆದು ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
2014 ರಲ್ಲಿ ಕಾಂಗ್ರೆಸ್ ನನ್ನು ತೊರೆದು ಬಿಜೆಪಿ ಸೇರಿದ್ದ ದೇಶ್ ಮುಖ್, ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನ್ಮ ದಿನದಂದು ಮತ್ತೆ ಮಾತೃ ಪಕ್ಷಕ್ಕೆ ಮಹಾರಾಷ್ಟ್ರ ಕಾಂಗ್ರಸ್ ಮುಖ್ಯಸ್ಥ ನಾನಾ ಪಟೋಲೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎಚ್. ಕೆ ಪಾಟೀಲ್ ಮುಂದಾಳತ್ವದಲ್ಲಿ ಸೇರ್ಪಡೆಗೊಂಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : ಸದಾನಂದಗೌಡರಿಗೆ ಅವಮಾನ ಮಾಡುವ ಕೆಲಸವನ್ನು ವಿರೋಧ ಪಕ್ಷ ಮಾಡಿದೆ : ಕಟ್ಟಾ ಸುಬ್ರಹ್ಮಣ್ಯ
2014 ರ ತನಕ ಕಾಂಗ್ರೆಸ್ ಪಕ್ಷದಲ್ಲಿದ್ದ ದೇಶ್ ಮುಖ್, ಮಹಾರಾಷ್ಟ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 2004 ರಲ್ಲಿ ಮಹಾರಾಷ್ಟರದಲ್ಲಿ ಕಾಂಗ್ರಸ್ ಆಡಳಿತದ ಸಂದರ್ಭದಲ್ಲಿ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2014 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.
ಇನ್ನು, ತಿರೋರಾ ಕ್ಷೇತ್ರದ ಮಾಜಿ ಎನ್ ಸಿ ಪಿ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ) ಶಾಸಕ ದಿಲೀಪ್ ಬನ್ಸೋಡ್ ಮತ್ತು ಅಮರಾವತಿ ಪುರಸಭೆಯ 18 ಬಿಜೆಪಿ ಕಾರ್ಪೋರೇಟರ್ ಗಳು ಸಹ ಇಂದು(ಶನಿವಾರ, ಜೂನ್ 19) ಕಾಂಗ್ರೆಸ್ ಸೇರಿದ್ದಾರೆ.
ಈ ಬಗ್ಗೆ ತಮ್ಮ ವೈಯಕ್ತಿಕ ಟ್ವಿಟ್ ಖಾತೆಯ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯ ಆದಿತ್ಯ ಗೋಸ್ವಾಮಿ, “ಡಾ. ಸುನೀಲ್ ದೇಶ್ ಮುಖ್ ಅವರೊಂದಿಗೆ, ತಿರೋರಾ ಕ್ಷೇತ್ರದ 18 ಬಿಜೆಪಿ ಕಾರ್ಪೋರೇಟರ್ ಗಳು ಮತ್ತು ಮಾಜಿ ಎನ್ ಸಿ ಪಿ ಶಾಸಕ ಎಸ್. ದಿಲೀಪ್ ಬನ್ಸೋಡ್ ಅವರು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ” ಎಂದು ತಿಳಿಸಿದ್ದಾರೆ.
Big Blowback to Maharashtra BJP
Former Finance Minister (State) in Maharashtra Govt and BJP MLA from Amravati constituency, Dr Sunil Deshmukh joins Congress in the presence of Maharashtra Congress chief Sh Nana Patole, AICC General Secretary Sh HK Patil and other senior leaders. pic.twitter.com/MixSkm9YM6
— Aditya Goswami (@AdityaGoswami_) June 19, 2021
ಇದನ್ನೂ ಓದಿ : ರಾಜೀನಾಮೆ ನೀಡದೆ ಬಿಜೆಪಿಗೆ ಸೇರಿರುವ 10 ಶಾಸಕರನ್ನ ಪಕ್ಷಕ್ಕೆ ಸೇರಿಸಲ್ಲ : ಗುಂಡೂರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.