‘ಮಹಾರಾಷ್ಟ್ರದಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಸಿದ್ಧತೆ ‘
Team Udayavani, Nov 24, 2019, 7:53 PM IST
ಮುಂಬಯಿ: ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಹಾಗೂ ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಅವರಿಗೆ ಬಿಜೆಪಿಯ ಶಾಸಕರಿಂದ ಅಭಿನಂದನೆ ಸಭೆ ರವಿವಾರ ದಾದರ್‌ನ ವಸಂತ್ ಮೆಮೋರಿಯಲ್ಲಿ ನಡೆಯಿತು.
ಸಭೆಯ ಅನಂತರ ಮಾಧ್ಯಮಗಳ ಜತೆ ಮಾತಾಡಿದ ಬಿಜೆಪಿ ಶಾಸಕ ಆಶಿಶ್ ಶೇಲಾರ್ ಅವರು, ಇಂದಿನ ಸಭೆಯಲ್ಲಿ ನ. 30ರಂದು ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸ ಮತದ ವೇಳೆ ಪಕ್ಷ ಬಹುಮತ ಸಾಬೀತುಪಡಿಸಲು ಹಾಗೂ ಗೆಲ್ಲುವ ಕುರಿತು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು.
ನವೆಂಬರ್ 30 ರಂದು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ಇಂದು ಸಭೆ ಆಯೋಜಿಸಿ ನಿರ್ಣಯವನ್ನು ಪಡೆಯಲಾಯಿತು ಎಂದು ಆಶಿಶ್ ಶೇಲಾರ್ ಹೇಳಿದರು.
ಸಂತೋಷದ ವಾತಾವರಣ
ರಾಜ್ಯದಲ್ಲಿ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಸ್ಥಿರ ಮತ್ತು ಪ್ರಬಲ ಸರಕಾರ ನೀಡಲಾಗುವುದು. ರಾಜ್ಯದ ಅಭಿವೃದ್ಧಿ ವೇಗವಾಗಲಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಫಡ್ನವೀಸ್ – ಪವಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದ ಜನರಲ್ಲಿ ಸಂತೋಷದ ವಾತಾವರಣವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರನ್ನು ಎಲ್ಲಿಗೂ ಸ್ಥಳಾಂತರಿಸುವುದಿಲ್ಲ
ಬಿಜೆಪಿ ನಾಯಕರನ್ನು ಎಲ್ಲಿಗೂ ಸ್ಥಳಾಂತರಿಸುವುದಿಲ್ಲ. ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆಯಿದೆ. ಅವರಿಗೆ ಪಕ್ಷದ ಬಗ್ಗೆ ನಿಷ್ಠೆ ಇದೆ. ಆದರೆ ಬೇರೆ ಪಕ್ಷಗಳ ನಾಯಕರಿಗೆ ತಮ್ಮ ಶಾಸಕರ ಮೇಲೆ ವಿಶ್ವಾಸವಿಲ್ಲ. ಆದ್ದರಿಂದ ಹೊಟೇಲ್‌ಗಳಿಗೆ ಕರೆದುಕೊಂಡು ಹೋಗಿ ಇರಿಸಲಾಗುತ್ತದೆ. ಎನ್‌ಸಿಪಿ – ಶಿವಸೇನೆ ಶಾಸಕರನ್ನು ಹೊಟೇಲ್‌ಗಳಲ್ಲಿ ಬಂಧಿ ಮಾಡಿದೆ. ಆದರೆ ಬಿಜೆಪಿ ಶಾಸಕರನ್ನು ಎಲ್ಲಿಗೂ ಸ್ಥಳಾಂತರಗೊಳಿಸುವುದಿಲ್ಲ ಎಂದು ಹೇಳಿದರು.
ಆಪರೇಷನ್ ಇಲ್ಲ
ರಾಜ್ಯದಲ್ಲಿ ಆಪರೇಷನ್ ಕಮಲ ಆಗಲಿ, ಆಪರೇಶನ್ ದೇವೇಂದ್ರ ಆಗಲಿ ಮತ್ತು ಆಪರೇಷನ್ ಅಜಿತ್ ಪವಾರ್ ರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಶಾಸಕರ ಸಭೆಯ ಬಗ್ಗೆ ಹೇಳುವ ಜತೆಗೆ, ಮಾತನಾಡಿದ ಆಶಿಶ್ ಶೇಲಾರ್ ಅವರು, ಸುಧೀರ್ ಮುಂಗಂತಿವಾರ್ ಮಗಳ ಮದುವೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಾಗೆಯೇ ಶಾಸಕ ಸುರೇಶ್ ಖಾಡೆ ಅವರ ಸಹೋದರ ನಿಧನರಾಗಿದ್ದರಿಂದ ಸಭೆಯಲ್ಲಿ ಗೈರು ಆಗಿದ್ದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.