ಇನ್ನು ಮುಂಬಯಿ – ಪುಣೆ ಪ್ರಯಾಣ 35 ನಿಮಿಷ ಮಾತ್ರ
ಹೈಪರ್ ಲೂಪ್ ಗೆ ಮಹಾರಾಷ್ಟ್ರ ಸರಕಾರದ ಹಸಿರು ನಿಶಾನೆ
Team Udayavani, Aug 1, 2019, 5:45 PM IST
ಮುಂಬಯಿ: ಇನ್ನು ಮುಂಬಯಿ ಪುಣೆ ಮಧ್ಯೆ ಕೇವಲ 35 ನಿಮಿಷದಲ್ಲಿ ಪ್ರಯಾಣ ಸಾಧ್ಯವಾಗಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಅಮೆರಿಕದ ವರ್ಜಿನ್ ಗ್ರೂಪ್ ಒನ್ ನಿರ್ಮಿಸಲಿರುವ ಹೈಪರ್‌ಲೂಪ್ ಅನ್ನು ಸ್ಥಾಪನೆ ಮಾಡಲಾಗುವುದು. ಇದಕ್ಕೆ ಮಹಾರಾಷ್ಟ್ರ ಸರಕಾರ ಈಗ ಹಸಿರು ನಿಶಾನೆ ತೋರಿದೆ ಇದರಿಂದ ಮಹಾರಾಷ್ಟ್ರದ ಈ ಭಾಗದಲ್ಲಿ 2.52 ಲಕ್ಷ ರೂ.ಗಳಷ್ಟು ಆರ್ಥಿಕ ಪ್ರಯೋಜನ ನೂರಾರು ಉದ್ಯೋಗ ಸೃಷ್ಟಿಯಾಗಲಿವೆ. ಡಿ.ಪಿ. ವರ್ಲ್ಡ್ ಹೆಸರಿನ ಭಾರತೀಯ ಸರಕು ನಿರ್ವಹಣೆ ಕಂಪೆನಿ ಮೊದಲ ಹಂತದಲ್ಲಿ 3500 ಕೋಟಿ ರೂ.ಗಳನ್ನು ಇದರಲ್ಲಿ ಹೂಡಿಕೆ ಮಾಡಲಿದೆ.
ಸದ್ಯ ಮುಂಬಯಿ ಪುಣೆ ಮಧ್ಯೆ ರಸ್ತೆ ಸಂಚಾರಕ್ಕೆ 147 ಕಿ.ಮೀ.ಗೆ 3.5 ಗಂಟೆ ಸಮಯ ತಗಲುತ್ತದೆ. ಹೈಪರ್ ಲೂಪ್ ನಲ್ಲಿ ಇದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಎರಡೂ ನಗರಗಳ ಮಧ್ಯೆ ಈಗ ವಾರ್ಷಿಕ 7.5 ಕೋಟಿ ಮಂದಿ ಪ್ರಯಾಣ ನಡೆಸುತ್ತಿದ್ದರೆ, 2026ರ ವೇಳೆ ಇದು 13 ಕೋಟಿ ಆಗಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೈಪರ್ ಲೂಪ್ ಮಹತ್ವ ಪಡೆದಿದೆ.
ಏನಿದು ಹೈಪರ್ ಲೂಪ್?
ನಿರ್ವಾತ ಟ್ಯೂಬ್ ಒಳಗಡೆ ಸಂಚರಿಸುವ ಒಂದು ಕ್ಯಾಪ್ಸೂಲ್ ಮಾದರಿಯ ಭವಿಷ್ಯದ ಪ್ರಯಾಣಿಕ ವ್ಯವಸ್ಥೆ. ಇದರಲ್ಲಿ ಗಂಟೆಗೆ 1100 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸಬಹುದು. ಸಂಪೂರ್ಣ ಮುಚ್ಚಿರುವ ಕೊಳವೆಯಲ್ಲಿ ಈ ಕ್ಯಾಪ್ಸೂಲ್ ಗಳು ಸಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.