ವಿಶ್ವದ 5ನೇ ಹಾಟ್‌ಸ್ಪಾಟ್‌ಗಿಂತಲೂ ಹೆಚ್ಚು ಕೇಸುಗಳು ಮಹಾರಾಷ್ಟ್ರ ದೃಢ
Team Udayavani, Aug 19, 2020, 6:37 AM IST
ಸಾಂದರ್ಭಿಕ ಚಿತ್ರ
ಮುಂಬಯಿ/ಹೊಸದಿಲ್ಲಿ: ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ 5ನೇ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ದಕ್ಷಿಣ ಆಫ್ರಿಕಾವನ್ನೇ ಈಗ ಮಹಾರಾಷ್ಟ್ರ ಹಿಂದಿಕ್ಕಿದೆ! ಅಚ್ಚರಿಯಾದರೂ ಇದು ಸತ್ಯ. ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ 5,89,886 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ. ಹೀಗಾಗಿ, ರಾಜ್ಯವೊಂದು ಸೋಂಕಿತರ ಸಂಖ್ಯೆಯಲ್ಲಿ ದೇಶವೊಂದನ್ನು ಹಿಂದಿಕ್ಕಿದೆ.
5ನೇ ಸ್ಥಾನದಲ್ಲಿದೆ ದ.ಆಫ್ರಿಕಾ: ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವೆಂದರೆ ಅಮೆರಿಕ. ಬ್ರೆಜಿಲ್ ಎರಡನೇ ಸ್ಥಾನ, ಭಾರತ 3ನೇ, ರಷ್ಯಾ 4ನೇ, ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.
9 ದಿನಗಳಲ್ಲಿ ಲಕ್ಷ ಪ್ರಕರಣ: ಆಗಸ್ಟ್ 8ರಂದು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿತ್ತು. ಇದಾದ ಒಂಭತ್ತೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕೇರಿತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಲು 96 ದಿನಗಳು ತಗುಲಿದ್ದವು. ನಂತರ 22 ದಿನಗಳಲ್ಲಿ 2 ಲಕ್ಷ, 14 ದಿನಗಳಲ್ಲಿ 3 ಲಕ್ಷ, 11 ದಿನಗ ಳಲ್ಲಿ 4 ಲಕ್ಷ ಮತ್ತು 10 ದಿನಗಳಲ್ಲಿ 5 ಲಕ್ಷ ಪ್ರಕರಣಗಳು ಪತ್ತೆಯಾದವು.ಲಾಕ್‌ಡೌನ್ ನಿರ್ಬಂಧಗಳು ತೆರವಾದ ಬೆನ್ನಲ್ಲೇ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ವ್ಯಾಪಿಸುವಿಕೆ ಹೆಚ್ಚಾಯಿತು ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ| ಸುಭಾಷ್ ಸಾಲುಂಖೆ ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ ವಹಿಸೋಣ: ಮಳೆಗಾಲ ಹೆಚ್ಚುತ್ತಿರುವುದರಿಂದ ಈ ಸಮಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಟ್ವಿಟರಿನಲ್ಲಿ ಸಲಹೆ ನೀಡಿದ್ದಾರೆ.
ನಾವು ವಾಸಿಸುವ ಪರಿಸರದ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಮೂಲಕ ಸೊಳ್ಳೆಗಳಿಂದ ಹಬ್ಬುವ ರೋಗಗಳನ್ನು ನಿಯಂತ್ರಿಸಬ ಹುದು ಎಂಬ ಸಂದೇಶ ಸಾರುವ ವಿಡಿಯೊವನ್ನೂ ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ಮಾನ್ಸೂನ್ ಸಾಂಕ್ರಾ ಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಸರಕಾರ ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತಿದೆ. ರೋಗಪೀಡಿ ತರಿಗೆ ಉತ್ತಮ ಚಿಕಿತ್ಸೆಗೂ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಯುವಕರಲ್ಲೂ ಸೋಂಕು ಅಧಿಕ: “ವಿಶ್ವದಲ್ಲಿ ಯುವಕ ರಿಗೆ ಕೊರೊನಾ ಸೋಂಕು ತಗುಲುತ್ತಿರುವುದು ಹೆಚ್ಚಾಗು ತ್ತಿದ್ದು, 20, 30 ಹಾಗೂ 40 ವರ್ಷ ವಯಸ್ಸಿನ ವರೂ ಈ ಸೋಂಕಿನಿಂದ ಬಳಲಿರುವ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕಳವಳ ವ್ಯಕ್ತಪಡಿಸಿದೆ. ಡಬ್ಲೂéಎಚ್‌ಒನ ವೆಸ್ಟರ್ನ್ ಪೆಸಿಫಿಕ್ ವಿಭಾಗದ ಮುಖ್ಯಸ್ಥರಾದ ಟಕೇಶಿ ಕಸಯ್ ಅವರು ಮಾತನಾಡಿ, ಕೊರೊನಾ ಸೋಂಕಿನ ಲಕ್ಷಣಗಳು ದಿನಗಳೆದಂತೆ ಬದಲಾ ಗುತ್ತಿದೆ. ಈ ಮೊದಲು, ಕೊರೊನಾ ಸೋಂಕು ಮಕ್ಕಳು, ಹಿರಿಯ ನಾಗರಿಕರಲ್ಲಿ ಬೇಗನೇ ಕಾಣಿಸಿಕೊಳ್ಳುತ್ತದೆ ಎಂದು ತಿಳಿಯಲಾಗಿತ್ತು. ಆದರೀಗ, ಯುವಕರೂ ಈಗ ಅಪಾಯದ ಪರಿಧಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೋಂಕು ಇಳಿಮುಖ
ಆ.13ರಿಂದೀಚೆಗೆ ದೈನಂದಿನ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಕರಣಗಳು ಇಳಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ. ಆದರೆ, ಇಳಿಮುಖವಾಗುತ್ತಿರುವುದನ್ನು ನೋಡಿ ನಿರ್ಲಕ್ಷ್ಯ ವಹಿಸಿದರೆ ಖಂಡಿತಾ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆಯನ್ನೂ ರವಾನಿಸಿದೆ. ಆ.13ಕ್ಕೆ 64 ಸಾವಿರದಷ್ಟಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಈಗ 55 ಸಾವಿರಕ್ಕಿಳಿದಿದೆ. ಈ ಅವಧಿಯಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಂತ, 5 ದಿನಗಳ ಲೆಕ್ಕಾಚಾರವನ್ನು ನೋಡಿದರೆ ಸಾಲುವುದಿಲ್ಲ. ಯಾವುದೇ ನಿರ್ಲಕ್ಷ್ಯ ವಹಿಸಿದೇ, ಸೋಂಕಿಗೆ ಕಡಿವಾಣ ಹಾಕುವ ಕ್ರಮಗಳನ್ನು, ಪರೀಕ್ಷೆಯನ್ನು ಮುಂದುವರಿಸಲೇಬೇಕು ಎಂದು ಸಚಿವಾಲಯ ಹೇಳಿದೆ.
ಗುಣಮುಖ: ಹೊಸ ದಾಖಲೆ
ಕೇವಲ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 57,937 ಸೋಂಕಿತರು ಗುಣಮುಖರಾಗಿದ್ದು, ವಾಸಿ ಯಾದವರ ಸಂಖ್ಯೆ 19.77 ಲಕ್ಷ ದಾಟಿದೆ. ಅಲ್ಲದೆ, ಕೋವಿಡ್ ಗುಣಮುಖ ಪ್ರಮಾಣ ದೇಶದಲ್ಲಿ ಶೇ.73.18ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 3.09 ಕೋಟಿ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದ್ದು, ಮಂಗಳವಾರ ಒಂದೇ ದಿನ ದಾಖಲೆಯ 8.99 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ ನಡೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ 55,079 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 876 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಮರಣ ಪ್ರಮಾಣವು ಶೇ.1.92ಕ್ಕಿಳಿಕೆಯಾಗಿದೆ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.