Maharashtra Horror: ಗುಂಡೇಟು ಬಿದ್ದರೂ ಡಕಾಯಿತರಿಂದ 35 ಪ್ರಯಾಣಿಕರ ಜೀವ ಉಳಿಸಿದ ಚಾಲಕ
Team Udayavani, Mar 12, 2024, 10:42 PM IST
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಮಿನಿ ಬಸ್ ಚಾಲಕನೊಬ್ಬನ ಸಮಯ ಪ್ರಜ್ಞೆ ಮತ್ತು ಸಾಹಸದಿಂದ 35 ಪ್ರಯಾಣಿಕರ ಜೀವ ಉಳಿದಿದೆ. ತನ್ನ ಕೈಗೆ ಗುಂಡು ತಾಗಿದರೂ, 30 ಕಿ.ಮೀ. ವಾಹನ ಚಲಾಯಿಸಿ ಆ ಚಾಲಕನು, ಡಕಾಯಿತರಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಕೋಮ್‌ದೇವ್ ಕವಡೆ ಸಾಹಸ ತೋರಿದ ಚಾಲಕ. 35 ಪ್ರಯಾಣಿಕರಿದ್ದ ಮಿನಿ ಬಸ್ ಭಾನುವಾರ ಶೆಗಾಂವ್‌ನಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ಅಮರಾವತಿ-ನಾಗ್ಪುರ ಹೆದ್ದಾರಿಯಲ್ಲಿ ಡಕಾಯಿತರು ಬಸ್ ಅನ್ನು ತಡೆಯಲು ಪ್ರಯತ್ನಿಸಿದರು. ನಂತರ ಬಸ್ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಡಕಾಯಿತರು ಹಾರಿಸಿದ 4 ಗುಂಡುಗಳ ಪೈಕಿ, 1 ಗುಂಡು ಬಸ್ ಚಾಲಕನ ಕೈಗೆ ತಾಗಿತು.
ಒಂದೆಡೆ, ಚಾಲಕನ ಕೈಯಲ್ಲಿ ರಕ್ತ ಸುರಿಯುತ್ತಿದ್ದರೆ, ಮತ್ತೂಂದೆಡೆ ಡಕಾಯಿತರು ಬೆಂಬಿಡದೆ ಬಸ್ ಅನ್ನು ಚೇಸ್ ಮಾಡುತ್ತಿದ್ದರು. ಈ ವೇಳೆ, ತನ್ನ ಪ್ರಾಣವನ್ನೂ ಲೆಕ್ಕಿಸದೇ ಸಮಯಪ್ರಜ್ಞೆ ಮತ್ತು ಸಾಹಸ ತೋರಿದ ಚಾಲಕ, ಸುಮಾರು 30 ಕಿ.ಮೀ.ವರೆಗೂ ಬಸ್ ಚಲಾಯಿಸಿ, ಟಿಯೋಸಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಈ ಮೂಲಕ ಬಸ್ಸಲ್ಲಿದ್ದ ಎಲ್ಲ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಬಳಿಕ ಪೊಲೀಸರು, ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಕಾಯಿತರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.