ಮಗನ ಮೊದಲ ಹುಟ್ಟುಹಬ್ಬದಂದೇ ನಡೆದ ಮಹಾರಾಷ್ಟ್ರ ಯೋಧನ ಅಂತ್ಯಕ್ರಿಯೆ
Team Udayavani, Jun 24, 2017, 5:41 PM IST
ಪುಣೆ : ಜಮ್ಮು ಕಾಶ್ಮೀರದಲ್ಲಿ ನಿನ್ನೆ ಗುರುವಾರ ಹುತಾತ್ಮರಾಗಿದ್ದ ಮಹಾರಾಷ್ಟ್ರದ ಜವಾನ ನಾಯಕ್ ಸಂದೀಪ್ ಜಾಧವ್ ಅವರ ಅಂತ್ಯಕ್ರಿಯೆ ಇಂದು ತಮ್ಮ ಮಗನ ಮೊದಲ ಹುಟ್ಟುಹಬ್ಬದ ದಿನದಂದೇ ನಡೆದಿರುವುದು ವಿಧಿಯ ವಿಪರ್ಯಾಸವೆನಿಸಿತು.
ಇಲ್ಲಿಂದ ಸುಮಾರು 230 ಕಿ.ಮೀ. ದೂರದಲ್ಲಿರುವ ಮಧ್ಯ ಮಹಾರಾಷ್ಟ್ರದ ಸಿಲೋಡ್ ತಾಲೂಕಿನ ಕೇಲ್ ಗಾಂವ್ನಲ್ಲಿ ಇಂದು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಯೋಧ ಸಂದೀಪ್ ಜಾಧವ್ ಅವರ ಅಂತ್ಯಕ್ರಿಯೆ ನಡೆದಾಗ ಅವರ ಒಂದು ವರ್ಷ ಪ್ರಾಯದ ಪುತ್ರ ಶಿವಂ ನ ಮುದ್ದು ಮುಖದಲ್ಲಿ ನಗೆಯೇ ಇರಲಿಲ್ಲ. ತಂದೆಯ ಪಾರ್ಥಿವ ಶರೀರ ಅಗ್ನಿಯಲ್ಲಿ ಬೆಂದು ಹೋಗುವುದಕ್ಕೆ ಆತನ ಹನಿಗೂಡಿದ ಕಣ್ಣುಗಳು ಸಾಕ್ಷಿಯಾದ ದೃಶ್ಯ ಅತ್ಯಂತ ಹೃದಯ ವಿದ್ರಾವಕವಾಗಿತ್ತು.
15 ಮರಾಠಾ ಲೈಟ್ ಇನ್ಫೆಂಟ್ರಿಗೆ ಸೇರಿದ 34ರ ಹರೆಯದ ಸಂದೀಪ್ ಜಾಧವ್ ಮತ್ತು 24ರ ಹರೆಯದ ಕೊಲ್ಲಾಪುರ ಮೂಲದ ಸಿಪಾಯಿ ಶ್ರವಣ್ ಮಾನೆ ಇವರು ಪಾಕಿಸ್ಥಾನದ ವಿಶೇಷ “ಬ್ಯಾಟ್’ ಪಡೆಯ ದಾಳಿಗೆ ಎರಡು ದಿನಗಳ ಹಿಂದೆ ಹುತಾತ್ಮರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.