ಯೆರವಡಾ ಜೈಲಿನ ಕೈದಿಗಳಿಂದ ಪರಿಸರ ಸ್ನೇಹಿ ಗಣಪತಿ ರಚನೆ
ಇದೇ ಮೊದಲ ಬಾರಿ ಇಲ್ಲಿ ವಿಗ್ರಹ ರಚನೆ - ನಾಸಿಕ್ ಕೈದಿಗಳಿಂದ ತರಬೇತಿ
Team Udayavani, Aug 27, 2022, 7:45 PM IST
ಪುಣೆ: ಯೆರವಡಾ ಸೆಂಟ್ರಲ್ ಜೈಲಿನ ಕೈದಿಗಳು ಇದೇ ಮೊದಲ ಬಾರಿ ಪರಿಸರಸ್ನೇಹಿ ಗಣಪನ ವಿಗ್ರಹ ನಿರ್ಮಾಣ ಮಾಡಿದ್ದು, ಇದಕ್ಕೆ ಭಾರೀ ಬೇಡಿಕೆ ಕುದುರಿದೆ.
ಈ ಜೈಲಿನ ಕೈದಿಗಳು ಬೇರೆ ಬೇರೆ ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಇದೇ ಮೊದಲ ಬಾರಿಗೆ ಇಲ್ಲಿ ಗಣಪತಿ ವಿಗ್ರಹ ರಚನೆ ಬಗ್ಗೆ ಚಿಂತಿಸಲಾಗಿದ್ದು, ಅದಕ್ಕಾಗಿ ನಾಸಿಕ್ ಜೈಲಿನಿಂದ ಇಬ್ಬರು ಕೈದಿಗಳನ್ನು ಕರೆದುಕೊಂಡು ಬಂದು ಇಲ್ಲಿನ ಕೈದಿಗಳಿಗೆ ತರಬೇತಿ ನೀಡಲಾಗಿತ್ತು. ಪ್ರಸ್ತುತ ಇವರ ರಚಿಸಿರುವ ಗಣಪತಿ ವಿಗ್ರಹಗಳು ಜೈಲಿನ ಮಾರಾಟ ಮಳಿಗೆಯಲ್ಲಿ ಬಿಕರಿಯಾಗುತ್ತಿವೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಪ್ರತಿವರ್ಷ ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಮಾತ್ರವೇ ಗಣಪತಿ ವಿಗ್ರಹ ರಚನೆ ಮಾಡಲಾಗುತ್ತಿತ್ತು. ಈ ಬಾರಿ ಅಲ್ಲಿಂದ ಪರಿಣಿತ ಇಬ್ಬರು ಕೈದಿಗಳನ್ನು ಕರೆದುಕೊಂಡು ಬಂದು ಯೆರವಡಾ ಜೈಲಿನ 15 ಕೈದಿಗಳಿಗೆ ವಿಗ್ರಹ ರಚನೆಯ ತರಬೇತಿ ನೀಡಲಾಗಿದೆ. ಇವರು ಕಿರು ಅವಧಿಯಲ್ಲಿ ವಿಗ್ರಹ ರಚನೆ ಬಗ್ಗೆ ಕಲಿತುಕೊಂಡಿದ್ದಾರೆ ಎಂದು ಜೈಲಿನ ಸೂಪರಿಂಟೆಂಡೆಂಟ್ ರಾಣಿ ಭೊನ್ಸಾಲೆ ಅವರು ತಿಳಿಸಿದ್ದಾರೆ.
ಕೇವಲ ಆವೆ ಮಣ್ಣನ್ನು ಬಳಸಿ ವಿಗ್ರಹ ರಚಿಸಲಾಗಿರುವ ಕಾರಣ ಇವು ಪರಿಸರಸ್ನೇಹಿಯಾಗಿವೆ. ಈ ಬಾರಿ 250ಕ್ಕೂ ಮಿಕ್ಕಿ ಆಕರ್ಷಕ ವಿಗ್ರಹ ರಚಿಸಲಾಗಿದ್ದು, ಇವು ಜೈಲಿನ ಮಾರಾಟ ಮಳಿಗೆಯಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇವುಗಳಿಗೆ ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ 400ರಿಂದ 15 ಸಾವಿರ ರೂಪಾಯಿ ತನಕ ಬೆಲೆ ನಿಗದಿ ಮಾಡಲಾಗಿದೆ ಎಂದು ಭೊನ್ಸಾಲೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.