ಹಿರಿಯ ಪತ್ರಕರ್ತ ಮನೋಹರ್ ಅಂಧಾರೆ ಅನಾರೋಗ್ಯದಿಂದ ನಿಧನ
Team Udayavani, Apr 30, 2021, 9:57 PM IST
ಮಹಾರಾಷ್ಟ್ರ : ಹಿರಿಯ ಪತ್ರಕರ್ತ ಮನೋಹರ್ ಅಂಧಾರೆ ಅನಾರೋಗ್ಯದ ಕಾರಣದಿಂದಾಗಿ ಶುಕ್ರವಾರ(ಏ.30) ನಿಧನರಾಗಿದ್ದಾರೆ.
ನಾಗ್ಪುರ ಮೂಲದ ಅಂಧಾರೆ (87) ಮಹಾರಾಷ್ಟ್ರ ಮಾಧ್ಯಮ ವಲಯಗಳಲ್ಲಿ ಮೇರು ಸ್ಥಾನದಲ್ಲಿದ್ದವರು ಮತ್ತು ಪತ್ರಕರ್ತರಿಗೆ ಮೊದಲ ವೇತನ ಮಂಡಳಿಯ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರಾಗಿದ್ದರು.
ಅವರು ಇಂದು ಹೈದರಾಬಾದ್ ನಲ್ಲಿ ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಇಹ ಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಸಲಿಂಗಕಾಮ ತೀರ್ಪು: ತಾನೇ ಶಿಕ್ಷಣ ಪಡೆಯಲು ನಿರ್ಧರಿಸಿದ ನ್ಯಾಯಮೂರ್ತಿ!
ನಾಗ್ಪುರದ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪತ್ರಕರ್ತರನ್ನು ಒಳಗೊಂಡ 103 ಫ್ಲಾಟ್ “ಪತ್ರಕರ್ ಸಾಹ್ನಿವಾಸ್” ಹೌಸಿಂಗ್ ಕಾಲೋನಿಯ ಹಿಂದಿನ ಶಕ್ತಿ ಅಂಧಾರೆ.
ಅವರು ನಾಲ್ಕು ದಶಕಗಳ ಸುದೀರ್ಘ ಮಾಧ್ಯಮ ವೃತ್ತಿಜೀವನವನ್ನು ಯುಗ್ಧರ್ಮ ಹಿಂದಿ ದಿನಪತ್ರಿಕೆಯಲ್ಲಿ ಕಳೆದರು ಮತ್ತು ಅದು ನಷ್ಟ ಅನುಭವಿಸಿದಾಗ ಸಹಕಾರಿ ಉದ್ಯಮದಲ್ಲಿ ಸ್ವಲ್ಪ ಸ್ವಲ್ಪ ಸಮಯದ ತನಕ ಕಾರ್ಯ ನಿರ್ವಹಿಸಿದ್ದರು.
ಇನ್ನು, ಹಿರಿಯ ಪತ್ರಕರ್ತ ಅಂಧಾರೆ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮನೋಹರ್ ಅಂಧಾರೆ ಅವರ ಸಾವು ಬೇಸರ ತಂದಿದೆ, ಅವರ ಸಾವಿನ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುದ್ದಿ ಸಂಸ್ಥೆ ಪಿಟಿಐ ಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಚಾ.ನಗರ : ಅಡ್ಡದಾರಿಗಳನ್ನು ಬಂದ್ ಮಾಡಿದ ಬಡಾವಣೆ ನಿವಾಸಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.