ಚಾಂಪಿಯನ್ಸ್ ಅರ್ಥ್ ಗೆ ಮಹಾತ್ಮ ಅರ್ಹ: ಪ್ರಧಾನಿ ಮೋದಿ
Team Udayavani, Oct 1, 2018, 4:00 AM IST
ರಾಜ್ಕೋಟ್: ಮಹಾತ್ಮ ಗಾಂಧಿಯವರ ಬದುಕಿನಲ್ಲಿ ಸ್ವಚ್ಛತೆ ಅತ್ಯಂತ ಮಹತ್ವದ ಭಾಗವಾಗಿತ್ತು. ಹೀಗಾಗಿ ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದಿ ಅರ್ಥ್ ಪುರಸ್ಕಾರಕ್ಕೆ ಮಹಾತ್ಮ ಗಾಂಧಿಯೇ ಹೆಚ್ಚು ಅರ್ಹರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸೌರ ಒಕ್ಕೂಟ ರಚನೆ ಮಾಡಿದ್ದಕ್ಕೆ ಮೆಚ್ಚುಗೆ ಸೂಚಿಸಿ ವಿಶ್ವಸಂಸ್ಥೆ ಈ ಪುರಸ್ಕಾರವನ್ನು ಕೆಲವೇ ದಿನಗಳ ಹಿಂದೆ ಮೋದಿಗೆ ನೀಡಿತ್ತು. ರವಿವಾರ ರಾಜ್ಕೋಟ್ನಲ್ಲಿ ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟನೆ ಮಾಡಿದ ಮೋದಿ, ಸ್ವಚ್ಛತೆ ಮತ್ತು ಸ್ವಾತಂತ್ರ್ಯದ ಪೈಕಿ ಯಾವುದನ್ನು ಆರಿಸಿಕೊಳ್ಳುತ್ತೀರಿ ಎಂದು ಮಹಾತ್ಮ ಗಾಂಧಿಯವರನ್ನು ಕೇಳಿದರೆ, ಸ್ವಚ್ಛತೆಯನ್ನೇ ಆರಿಸಿಕೊಳ್ಳುತ್ತಿದ್ದರು. ಇದು ಸ್ವಚ್ಛತೆಯ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ದೇಶದ ನೈರ್ಮಲ್ಯವು 2014ರ ವೇಳೆಗೆ ಶೇ.35ರಷ್ಟಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಇದು ಶೇ. 95ಕ್ಕೆ ಏರಿಕೆಯಾಗಿದೆ. ಸ್ವತ್ಛತಾ ಕಾರ್ಯಕ್ರಮದಿಂದಾಗಿ 3 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದಕ್ಕಿಂತ ದೊಡ್ಡ ಮಾನವೀಯ ಕೆಲಸ ಯಾವುದಿದೆ ಎಂದು ಮೋದಿ ಕೇಳಿದ್ದಾರೆ.
ಗುಜರಾತ್ನ ಅಂಜಾರ್ನಲ್ಲಿ ಮೂರು ನೈಸರ್ಗಿಕ ಅನಿಲ ಯೋಜನೆಗಳನ್ನು ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಮೋದಿ, ಯಾವುದೇ ದೇಶಕ್ಕೆ ಇಂಧನ ಅತ್ಯಂತ ಅಗತ್ಯದ್ದು. ಸಾಕಷ್ಟು ಇಂಧನ ಇಲ್ಲದೇ ದೇಶ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಬಡತನವನ್ನೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಯಲ್ಲಿ ನಾವು ಇಂಗ್ಲೆಂಡ್ ಅನ್ನು ಮೀರಿಸುವ ದಿನ ದೂರವಿಲ್ಲ ಎಂದು ಹೇಳಿದರು. ಕಳೆದ 60 ವರ್ಷಗಳಲ್ಲಿ 13 ಕೋಟಿ ಕುಟುಂಬಗಳಿಗೆ ನೈಸರ್ಗಿಕ ಅನಿಲ ಸಂಪರ್ಕ ನೀಡಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲೇ 10 ಕೋಟಿ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ ಎಂದು ಅವರು ಸರಕಾರದ ಸಾಧನೆ ಬಗ್ಗೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.