Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
ಸರಕಾರ ರಚನೆಗೆ ಹಕ್ಕು ಮಂಡಿಸಿದ ಮಹಾಯುತಿ ನಾಯಕರು, ಸಿಎಂ, ಡಿಸಿಎಂ ಹುದ್ದೆಗಳ ಬಗ್ಗೆ ದೇವೇಂದ್ರ ಹೇಳಿದ್ದೇನು?
Team Udayavani, Dec 4, 2024, 7:40 PM IST
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಮಹಾಯುತಿ (ಬಿಜೆಪಿ, ಶಿಂಧೆ ಶಿವಸೇನೆ, ಅಜಿತ್ ಪವಾರ್ ಎನ್‌ಸಿಪಿ) ಕೂಟವು ಫಲಿತಾಂಶ ಬಂದ ಎರಡು ವಾರಗಳ ಬಳಿಕ ರಾಜ್ಯಪಾಲ ಸಿ. ಪಿ.ರಾಧಾಕೃಷ್ಣನ್ ರನ್ನು ಭೇಟಿಯಾಗಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇತೃತ್ವದಲ್ಲಿ ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಆಯ್ಕೆಯಾದ ನಂತರ ರಾಜ್ಯಪಾಲರ ಭೇಟಿಯಾದರು. ಉಸ್ತುವಾರಿ ಸಿಎಂ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ರಾಜ್ಯಪಾಲರ ಭೇಟಿಯಾದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ 11 ದಿನಗಳ ಕುತೂಹಲಕ್ಕೆ ಬುಧವಾರ ತೆರೆ ಬಿದ್ದಿದೆ. 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಏಕನಾಥ ಶಿಂಧೆ, ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಶಪಥ ಸ್ವೀಕರಿಸಲಿದ್ದಾರೆ.
ಮೂರು ಪಕ್ಷಗಳ ಶಾಸಕರ ಬೆಂಬಲ ಪತ್ರ ಹಸ್ತಾಂತರ:
ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾವು ಮೂವರೂ ಸರ್ಕಾರವನ್ನು ನಡೆಸುತ್ತೇವೆ”. ‘ಸಿಎಂ ಮತ್ತು ಡಿಸಿಎಂ ಹುದ್ದೆಗಳು ಕೇವಲ ತಾಂತ್ರಿಕ ಹುದ್ದೆಗಳಷ್ಟೆ. ನಾವೆಲ್ಲರೂ ಮಹಾರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂಬರುವ ಸಭೆಗಳಲ್ಲಿ ಇತರ ಸಚಿವರ ನಿರ್ಧರಿಸಲಾಗುವುದು. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ ಮತ್ತು ಮೂರು ಪಕ್ಷಗಳ ಶಾಸಕರ ಬೆಂಬಲ ಪತ್ರವನ್ನು ನೀಡಿದ್ದೇವೆ. ನಾನು ಮಹಾಯುತಿ ಸರ್ಕಾರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ನಮ್ಮ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ರಾಜ್ಯಪಾಲರಿಗೆ ಮನವಿ ಮಾಡಿವೆ ಎಂದರು.
“ನಾನು ವಿಶೇಷವಾಗಿ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕನಾಥ ಶಿಂಧೆ ಅವರಿಗೆ ಸರ್ಕಾರದ ಭಾಗವಾಗಿರುವಂತೆ ಮನವಿ ಮಾಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.
“ಶಿವಸೇನೆಯ ಅಧ್ಯಕ್ಷ ಮತ್ತು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿ ಪತ್ರ ನೀಡಿದ್ದಾರೆ. ಇದರೊಂದಿಗೆ ಎನ್ ಸಿಪಿ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಕೂಡ ಇದೇ ರೀತಿಯ ಪತ್ರವನ್ನೂ ನೀಡಿದ್ದಾರೆ… ನಮ್ಮೊಂದಿಗಿರುವ ಪಕ್ಷೇತರ ಶಾಸಕರು ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ ಎಂದರು.
ಜವಾಬ್ದಾರಿ ಹೆಚ್ಚಿದೆ:
“ನಮ್ಮ ಮೇಲಿನ ಜವಾಬ್ದಾರಿ ಈಗ ಮತ್ತಷ್ಟು ಹೆಚ್ಚಾಗಿದೆ. ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಜನರು ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಹುಸಿಯಾಗಲು ಬಿಡುವುದಿಲ್ಲ. ಬಿಜೆಪಿ 2019ರಲ್ಲಿ ಜನಾದೇಶ ಹೊಂದಿತ್ತು. ಆದರೆ ಅದನ್ನು ಕಸಿದುಕೊಳ್ಳಲಾಯಿತು. ಬಳಿಕ ನಮ್ಮನ್ನು ಗುರಿಯಾಗಿಸಿ ಟೀಕೆ ಮಾಡಲಾಯಿತು. ಆದರೂ ಯಾವೊಬ್ಬ ಶಾಸಕರೂ ಪಕ್ಷ ತೊರೆಯಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ ನನ್ನನ್ನು ಸಿಎಂ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಫಡ್ನವೀಸ್ ಹೇಳಿದ್ದಾರೆ.
#Live l 04-12-2024
📍राजभवन, मुंबईमा. राज्यपाल महोदयांच्या भेटीप्रसंगी – लाईव्ह https://t.co/zlpfrLh5MD
— Eknath Shinde – एकनाथ शिंदे (@mieknathshinde) December 4, 2024
ಪಕ್ಷಗಳ ಬಲಾಬಲ:
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯುತಿ ಕೂಟವು 230 ಸ್ಥಾನಗಳ ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ಕೇವಲ 50 ಸ್ಥಾನಗಳಿಗೆ ಸೀಮಿತವಾಯಿತು. ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏಕನಾಥ್ ಶಿಂಧೆಯವರ ಶಿವಸೇನೆ 57 ಸ್ಥಾನಗಳು ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳ ಪಡೆದಿದೆ. ಬಿಜೆಪಿಗೆ ಐವರು ಸ್ವತಂತ್ರ ಶಾಸಕರ ಬೆಂಬಲವೂ ದೊರೆತಿದೆ.
ನಾಳೆ ಸಂಜೆ ಪ್ರಮಾಣ ವಚನ ಸಮಾರಂಭ, ಗಣ್ಯರ ಆಗಮನ:
ಮುಂಬೈಯ ಆಜಾದ್ ಮೈದಾನದಲ್ಲಿ ನಾಳೆ ಸಂಜೆ 5.30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಸೇರಿದಂತೆ ಹಲವು ರಾಷ್ಟ್ರೀಯ ಬಿಜೆಪಿ ನಾಯಕರು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
4000 ಮಂದಿ ಪೊಲೀಸ್:
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಭದ್ರತೆ ಒದಗಿಸಲು 4000 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆ, ಕ್ವಿಕ್ ರೆಸ್ಪಾನ್ಸ್ ಟೀಮ್, ಗಲಭೆ ನಿಯಂತ್ರಣ ತಂಡ, ಡೆಲ್ಟಾ, ಬಾಂಬ್ ಪತ್ತೆ ದಳವನ್ನು ನಿಯೋಜನೆ ಮಾಡಲಾಗಿದೆ.
🕞 04-12-2024📍Mumbai.
LIVE | Press Conference#Maharashtra #Mumbai https://t.co/zuwHasElpB
— Devendra Fadnavis (@Dev_Fadnavis) December 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
Earthquake Strikes: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಭೂಕಂಪ
Railway: ಎಸಿ ಬೋಗಿಗಳ ಬದಲು ಸಾಮಾನ್ಯ ಬೋಗಿ ಸೇರ್ಪಡೆ ಹೆಚ್ಚಳಕ್ಕೆ ಕ್ರಮ: ರೈಲ್ವೇ ಸಚಿವ
Panaji: ಸಂತ ಫ್ರಾನ್ಸಿಸ್ ಜೇವಿಯರ್ ಹಬ್ಬ ಆಚರಣೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Lokasabha: ಸ್ಪೀಕರ್ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
Earthquake Strikes: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಭೂಕಂಪ
Railway: ಎಸಿ ಬೋಗಿಗಳ ಬದಲು ಸಾಮಾನ್ಯ ಬೋಗಿ ಸೇರ್ಪಡೆ ಹೆಚ್ಚಳಕ್ಕೆ ಕ್ರಮ: ರೈಲ್ವೇ ಸಚಿವ
Asia Cup Cricket: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್: ಸೆಮಿಫೈನಲ್ ಪ್ರವೇಶಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.