ಸರಕಾರದಿಂದ ದೊಡ್ಡ ಮಟ್ಟದ ಆರ್ಥಿಕ ಸುಧಾರಣೆ: ಪ್ರಧಾನಿ ಮೋದಿ
Team Udayavani, Feb 4, 2018, 12:59 PM IST
ಗುವಾಹಾಟಿ: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ದೊಡ್ಡ ಪ್ರಮಾಣದ ಆರ್ಥಿಕ ಸುಧಾರಣ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ವಿಶ್ವದಲ್ಲಿ ಬಂಡವಾಳ ಹೂಡಿಕೆ ಮಾಡುವ ರಾಷ್ಟ್ರಗಳಿಗೆ ಭಾರತ ಅತ್ಯಂತ ಪ್ರಶಸ್ತ ತಾಣ ಎಂಬ ಭಾವನೆ ಬರುವಂತೆ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ಮೂರೂವರೆ ವರ್ಷಗಳ ಅವಧಿಯಲ್ಲಿ ಸರಕಾರ ಹಲವು ರೀತಿಯ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. 2016-17ನೇ ಸಾಲಿನಲ್ಲಿ 3.84 ಲಕ್ಷ ಕೋಟಿ ರೂ. (60 ಅಮೆರಿಕನ್ ಬಿಲಿಯನ್ ಡಾಲರ್)ಗಳಷ್ಟು ವಿದೇಶಿ ನೇರ ಬಂಡವಾಳ ಹರಿದು ಬಂದಿದೆ’ ಎಂದರು. ಗುವಾ ಹಾಟಿಯಲ್ಲಿ ಅಸ್ಸಾಂ ಸರಕಾರ ಆಯೋಜಿಸಿರುವ 2 ದಿನಗಳ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮೋದಿ ಮಾತನಾಡಿದರು. “ಎನ್‌ಡಿಎ ಸರಕಾರ ಸರಕಾರಿ ವ್ಯವಸ್ಥೆ ಅತ್ಯಂತ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತೆ ಬದಲಾವಣೆ ತಂದಿದೆ. ನಾವು ಜಾರಿ ಮಾಡಿರುವ ಯೋಜನೆಗಳು ನಿಗದಿತ ಗುರಿಗಿಂತ ಮೊದಲೇ ಪೂರ್ಣವಾಗಬೇಕು. ಈಶಾನ್ಯ ರಾಜ್ಯಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತ ಸರಿಯಾದ ರೀತಿಯಲ್ಲಿ ಅಭಿವೃದ್ಧಿಯ ವೇಗ ಪಡೆಯಲಿದೆ’ ಎಂದರು. “ಕೇಂದ್ರ ಸರಕಾರ ಪೂರ್ವದತ್ತ ನೋಟ ನೀತಿಯನ್ನು ಜಾರಿಗೆ ತಂದಿದೆ. ಈಶಾನ್ಯ ರಾಜ್ಯಗಳೇ ಅದರ ಕೇಂದ್ರ ಬಿಂದು. ಪೂರ್ವದಲ್ಲಿನ ರಾಷ್ಟ್ರಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿನ ಜನರ ನಡುವೆ ಸಂಬಂಧ, ವ್ಯಾಪಾರ ವಹಿವಾಟು ವೃದ್ಧಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು’ ಎಂದಿದ್ದಾರೆ ಪ್ರಧಾನಿ.
ಐದು ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಗಳು ಅಸ್ಸಾಂನಲ್ಲಿ 15 ಸಾವಿರ ಕಿ.ಮೀ. ಪೈಪ್‌ಲೈನ್ ಅಳವಡಿಸಲಿದ್ದು, ಈಶಾನ್ಯ ರಾಜ್ಯಗಳಿಗೆ ಅನಿಲ ಪೂರೈಕೆಗೆ ಇದು ನೆರವಾಗಲಿದೆ. ಅದಕ್ಕೆ 6 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ಧರ್ಮೇಂದ್ರ ಪ್ರಧಾನ್, ಕೇಂದ್ರ ಪೆಟ್ರೋಲಿಯಂ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.