Maldives; ಭಾರತದ ಸಹೋದರ-ಸಹೋದರಿಯರೆ…: ವಿಮಾನ ಬುಕ್ಕಿಂಗ್ ತೆರೆಯಲು ಮನವಿ ಮಾಡಿದ ಮಾಲ್ಡೀವ್ಸ್
Team Udayavani, Jan 10, 2024, 10:47 AM IST
ನವದೆಹಲಿ: ವಿನಾಕಾರಣ ಭಾರತದ ವಿರುದ್ಧ ಕಾಲು ಕೆರೆದು ಬಂದ ಮಾಲ್ಡೀವ್ಸ್ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಪ್ರವಾಸೋದ್ಯಮವನ್ನೇ ನಂಬಿರುವ ದೇಶವು ಇದೀಗ ಭಾರತದ ವಿರೋಧ ಕಟ್ಟಿಕೊಂಡಿದೆ. ಭಾರತದಿಂದ ಲಕ್ಷಾಂತರ ಪ್ರವಾಸಿ ಬುಕ್ಕಿಂಗ್ ಗಳು ರದ್ದಾದ ಬಳಿಕ ಇದೀಗ ಎಚ್ಚೆತ್ತುಕೊಂಡಿದ್ದು, ಮಾಲ್ಡೀವಿಯನ್ ಪ್ರವಾಸೋದ್ಯಮ ಸಂಸ್ಥೆಯು ಭಾರತ ಮೂಲದ ಟ್ರಾವೆಲ್ ಅಗ್ರಿಗೇಟರ್ EaseMyTrip ಗೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ದ್ವೀಪ ರಾಷ್ಟ್ರಕ್ಕೆ ವಿಮಾನ ಬುಕಿಂಗ್ ಅನ್ನು ಮರು-ತೆರೆಯಲು ಮನವಿ ಮಾಡಿದೆ.
ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರ್ ಮತ್ತು ಟ್ರಾವೆಲ್ ಆಪರೇಟರ್ಸ್, (MATATO) ಮಂಗಳವಾರ EaseMyTrip ಗೆ ಸಚಿವರ “ವಿಷಾದನೀಯ” ಕಾಮೆಂಟ್‌ಗಳನ್ನು ನಿರ್ಲಕ್ಷಿ, ಅವು ಸಾಮಾನ್ಯ ಮಾಲ್ಡೀವಿಯನ್ನರ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು. EaseMyTrip ಸಿಇಒ ನಿಶಾಂತ್ ಪಿಟ್ಟಿ ಅವರನ್ನು ಉದ್ದೇಶಿಸಿ ಹೇಳಿಕೆಯು, ಕೋವಿಡ್ ನಂತರದ ಮಾಲ್ಡೀವಿಯನ್ ಆರ್ಥಿಕತೆಗೆ ವಿದೇಶಿ ಆಗಮನದಲ್ಲಿ ಅಗ್ರಸ್ಥಾನದಲ್ಲಿರುವ ಭಾರತೀಯ ಪ್ರವಾಸಿಗರ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ.
“ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ನಿರಂತರ ಸ್ನೇಹ ಮತ್ತು ಪಾಲುದಾರಿಕೆಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ನಮ್ಮ ರಾಷ್ಟ್ರಗಳ ರಾಜಕೀಯವನ್ನು ಮೀರಿದ ಬಾಂಧವ್ಯವನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ನಮ್ಮ ಭಾರತೀಯ ಸಹವರ್ತಿಗಳನ್ನು ಪ್ರೀತಿಪಾತ್ರ ಸಹೋದರರು ಮತ್ತು ಸಹೋದರಿಯರಂತೆ ಪರಿಗಣಿಸುತ್ತೇವೆ” ಎಂದರು.
ಇದನ್ನೂ ಓದಿ:Tragedy: ರಾತ್ರಿ ಮಲಗಿದ್ದ 7ಮಂದಿಯಲ್ಲಿ ಬೆಳಗಾಗುತ್ತಲೇ ಐವರು ಶವವಾಗಿ ಪತ್ತೆ, ಇಬ್ಬರು ಗಂಭೀರ
“ಪ್ರವಾಸೋದ್ಯಮವು ಮಾಲ್ಡೀವ್ಸ್ ನ ಜೀವನಾಡಿಯಾಗಿದೆ, ಅದು ನಮ್ಮ ಜಿಡಿಪಿಯ ಮೂರನೇ ಎರಡರಷ್ಟು ಕೊಡುಗೆ ನೀಡುತ್ತಿದೆ. ಈ ವಲಯದಲ್ಲಿ ಕೆಲಸ ಮಾಡುವ ಸುಮಾರು 44,000 ಮಾಲ್ಡೀವಿಯನ್ನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಪ್ರವಾಸೋದ್ಯಮದ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮವು ನಮ್ಮ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ” ಎಂದು ಮಾಲ್ಡೀವಿಯನ್ ಪ್ರವಾಸೋದ್ಯಮ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.
ಭಾರತೀಯ ಪ್ರವಾಸಿಗರನ್ನು “ಮಾಲ್ಡೀವಿಯನ್ ಪ್ರವಾಸೋದ್ಯಮ ಕ್ಷೇತ್ರದ ಯಶಸ್ಸಿನಲ್ಲಿ ಅನಿವಾರ್ಯ ಶಕ್ತಿ. ಅತಿಥಿ ಗೃಹಗಳಿಗೆ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರಮುಖ ಬೆಂಬಲವನ್ನು ಒದಗಿಸುವವರು” ಎಂದು MATATO ಹೇಳಿದೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಕಳೆದ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯರು ಆ ದೇಶಕ್ಕೆ ಭೇಟಿ ನೀಡಿದ್ದರು. ಕಳೆದ ಎರಡು ವರ್ಷಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ಜನರು ಮಾಲ್ಡೀವ್ಸ್ ಗೆ ಪ್ರಯಾಣಿಸಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರವಾಸಿಗರಿಗೆ ಮುಕ್ತವಾಗಿದ್ದ ಕೆಲವೇ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಒಂದಾಗಿತ್ತು. ಆ ಸಮಯದಲ್ಲಿ ಸುಮಾರು 63,000 ಭಾರತೀಯರು ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.