INDIA bloc ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ
Team Udayavani, Jan 13, 2024, 3:21 PM IST
ಹೊಸದಿಲ್ಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ‘ಇಂಡಿಯಾ ಬ್ಲಾಕ್’ನ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ವರದಿ ತಿಳಿಸಿವೆ.
ಸೀಟು ಹಂಚಿಕೆ ಕಾರ್ಯಸೂಚಿ, ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವಿಕೆ ಮತ್ತು ಮೈತ್ರಿಗೆ ಸಂಬಂಧಿಸಿದ ಇತರ ವಿಷಯಗಳನ್ನು ಪರಿಶೀಲಿಸಲು ಇಂಡಿಯಾ ಬ್ಲಾಕ್ ನ ನಾಯಕರು ಇಂದು ವರ್ಚುವಲ್ ಸಭೆಯನ್ನು ನಡೆಸಿದ್ದು, ಈ ಬೆಳವಣಿಗೆ ನಡೆದಿದೆ.
ಏತನ್ಮಧ್ಯೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂಚಾಲಕ ಸ್ಥಾನಕ್ಕೆ ಹೆಸರಿಸಲಾಯಿತು. ಆದರೆ, ನಿತೀಶ್ ಕುಮಾರ್ ಅವರು ಯಾವುದೇ ಸ್ಥಾನಮಾನದ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚಿಸಿದ ನಂತರ ಸಂಚಾಲಕ ಹುದ್ದೆಯ ಅಂತಿಮ ಕರೆಯನ್ನು ತೆಗೆದುಕೊಳ್ಳಲಾಗುವುದು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Davanagere; ರಾಮ ವಿರೋಧ ಮಾಡುತ್ತಿದ್ದ ಕಾಂಗ್ರೆಸ್ ಗೆ ತಪ್ಪಿನ ಅರಿವಾಗಿದೆ: ರೇಣುಕಾಚಾರ್ಯ
ಕಳೆದ ವರ್ಷ ಡಿಸೆಂಬರ್ ನಲ್ಲಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಪ್ರಸ್ತಾಪಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಪ್ರಸ್ತಾವನೆಯನ್ನು ಬೆಂಬಲಿಸಿದ್ದರು.
ಶುಕ್ರವಾರ, ಖರ್ಗೆ ಅವರು ಹಲವು ರಾಜ್ಯಗಳ ಪಕ್ಷದ ಲೋಕಸಭೆ ಸಂಯೋಜಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವಂತೆ ಸೂಚಿಸಿದರು.
ಮೊದಲ ಸಭೆಯು ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಗೋವಾ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುಗೆ ನಡೆದರೆ, ಎರಡನೇ ಸಭೆಯು ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ ಸಂಯೋಜಕರೊಂದಿಗೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.