ಮಮತಾ ಧರಣಿ ವಾಪಸ್
Team Udayavani, Feb 6, 2019, 12:30 AM IST
ಹೊಸದಿಲ್ಲಿ/ಕೋಲ್ಕತ್ತಾ: ಸಿಬಿಐ-ಮಮತಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಕೆಲವು ಗಂಟೆಗಳ ಬಳಿಕ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಧರಣಿ ಹಿಂಪಡೆದಿದ್ದಾರೆ. ಆದೇಶ ಪ್ರಕಟವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಅವರು ಇದೊಂದು ನೈತಿಕ ಜಯ. ದೇಶದ ಜನರಿಗೆ ಸಂದ ಜಯವಿದು. ಕೇಂದ್ರದ ಪಡೆಗಳು ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ರಾಜೀವ್ ಕುಮಾರ್‌ಗಾಗಿ ಈ ಹೋರಾಟ ಮಾಡುತ್ತಿಲ್ಲ. ಸಾವಿರಾರು ಜನರಿಗಾಗಿ ಧರಣಿ ಕೂತಿದ್ದೆ’ ಎಂದಿದ್ದಾರೆ.
ಅಲ್ಲದೆ, ಬಂದೂಕು ಮತ್ತು ಗೋರಕ್ಷಕರು ದೇಶ ಆಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಲೇವಡಿ ಮಾಡಿದ ಮಮತಾ, ಸಿಬಿಐ ಕ್ರಮ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಜತೆಗೆ ಆಸ್ಸಾಂನ ಹಾಲಿ ಪ್ರಭಾವಿ ಸಚಿವ, ಬಿಜೆಪಿ ನಾಯಕ ಹಿಮಾಂತ ಬಿಸ್ವ ಶರ್ಮಾ 3 ಕೋಟಿ ರೂ. ಪಡೆದು ವಂಚಿಸಿದ್ದರು ಎಂದು 2013ರಲ್ಲಿ ಶಾರದಾ ಚಿಟ್ ಫಂಡ್ ಮುಖ್ಯಸ್ಥ ಸುದಿಪೊ¤à ಸೆನ್ ಬರೆದಿದ್ದ ಪತ್ರವನ್ನು ಮಮತಾ ಬಿಡುಗಡೆ ಮಾಡಿದ್ದಾರೆ. ಜತೆಗೆ ಅವರನ್ನು ಬಂಧಿಸುವಂತೆ ಆದೇಶ ನೀಡಲು ಮೋದಿ, ಶಾಗೆ ಧೈರ್ಯವಿದೆಯೇ ಎಂದು ಸವಾಲು ಹಾಕಿದ್ದಾರೆ.
ನಿಧಿ ಸಂಗ್ರಹಕ್ಕೆ ಮಾರಾಟ: ಚುನಾವಣೆಯಲ್ಲಿ ನಿಧಿ ಸಂಗ್ರಹಿಸಲು ತಾವು ಬರೆದ ಚಿತ್ರಗಳನ್ನು ಮಾರಲಾಗಿತ್ತು. “ಆಹಾರ ಸೇವಿಸಿದ್ದಿ ಮತ್ತು ಚಪ್ಪಲಿ ಧರಿಸಿದ್ದಿ ಎಂಬ ಆರೋಪ ಹೊರಿಸಿ ನಾಳೆ ನನ್ನನ್ನೂ ಸಿಬಿಐನವವರು ಬಂಧಿಸುವ ಸಾಧ್ಯತೆ ಇದೆ’ ಎಂದು ದೀದಿ ಟೀಕಿಸಿದ್ದಾರೆ. ಇದಕ್ಕಿಂತ ಮೊದಲು ಸಿಬಿಐ ವಿರುದ್ಧ ಯಾವುದೇ ತಪ್ಪು ಅಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಮಂಗಳವಾರ ಮಮತಾ ಇರುವ ಸ್ಥಳಕ್ಕೆ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆೆ. ಜತೆಗೆ ಕೇಂದ್ರ ಸರಕಾರದ ನಿಲುವುಗಳನ್ನು ಪ್ರಶ್ನಿಸಿದ್ದಾರೆ.
ಕೇಂದ್ರದ ಸ್ವಾಗತ: ಸುಪ್ರೀಂಕೋರ್ಟ್ ಆದೇಶವನ್ನು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಮತ್ತು ಜವಳಿ ಸಚಿವೆ ಸ್ಮತಿ ಇರಾನಿ ಅವರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಸ್ವಾಗತಿಸಿದ್ದಾರೆ. ರವಿಶಂಕರ ಪ್ರಸಾದ್ ಮಾತನಾಡಿ, ಸಿಬಿಐಗೆ ಈ ಪ್ರಕರಣ ನೈತಿಕ ವಿಜಯ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನೆಯಾಗಿದೆ. ಮಮತಾ ಬ್ಯಾನರ್ಜಿ ಸರಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ ಎಂದಿದ್ದಾರೆ. ಲಕ್ಷಾಂತರ ಮಂದಿ ಸಣ್ಣ ಉಳಿತಾಯಗಾರರಿಗೆ ನಷ್ಟವಾಗಿದೆ. ಅದರ ವಿರುದ್ಧ ತನಿಖೆ ನಡೆಯಬೇಕು. ಈ ಬಗ್ಗೆ ಮಮತಾ ಬ್ಯಾನರ್ಜಿ ಯಾಕೆ ಮೌನವಾಗಿದ್ದಾರೆಂದು ಪ್ರಶ್ನಿಸಿದ್ದಾರೆ.
ಕ್ರಮ ಕೈಗೊಳ್ಳಲು ಸೂಚನೆ: ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುತ್ತಲೇ ಕೇಂದ್ರ ಗೃಹ ಸಚಿವಾಲಯ ಪೊಲೀಸ್ ಆಯುಕ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಬಂಗಾಲ ಸರಕಾರಕ್ಕೆ ಪತ್ರ ಬರೆದಿದೆ. “ಕೆಲ ಪೊಲೀಸ್ ಅಧಿಕಾರಿಗಳ ಜತೆಗೆ ಮತ್ತು ಮುಖ್ಯಮಂತ್ರಿ ಜತೆಗೆ ಮೆಟ್ರೋ ಹಾಲ್ ಬಳಿ ಧರಣಿ ಕುಳಿತುಕೊಳ್ಳುವ ಮೂಲಕ ಅಖೀಲ ಭಾರತ ಸೇವಾ ನಿಯಮಗಳನ್ನು ಉಲ್ಲಂ ಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅದರಲ್ಲಿ ಪ್ರಸ್ತಾಪಿಸಲಾಗಿದೆ.
ಸಂಸತ್‌ನಲ್ಲಿ ಕೋಲಾಹಲ: ಲೋಕಸಭೆ, ರಾಜ್ಯಸಭೆಗಳಲ್ಲಿಯೂ ಮಂಗಳವಾರ ಪೊಲೀಸ್ ಆಯುಕ್ತರ ನಿವಾಸಕ್ಕೆ ಸಿಬಿಐ ಅಧಿಕಾರಿ ಗಳು ತೆರಳಿದ ವಿಚಾರ ಕೋಲಾಹಲ ಸೃಷ್ಟಿಸಿತು. ಹಲವಾರು ಬಾರಿ 2 ಸದನಗಳ ಕಲಾಪ ಮುಂದೂಡಿಕೆಯಾಯಿತು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿಯನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ವೇಳೆ ಸರಕಾರ ಮತ್ತು ಪ್ರತಿಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಅಧಿಕಾರ ಕಸಿಯುವ ಗುಂಪಿಗೆ ಬೆಂಬಲವೇ?: ಮಮತಾ ಧರಣಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಕಟುವಾಗಿ ಟೀಕಿಸಿದ್ದಾರೆ. “ಧರಣಿ ನಡೆಸಿರುವ ಕ್ರಮ ಅಗತ್ಯಕ್ಕಿಂತ ಹೆಚ್ಚಿನ ಪ್ರತಿಭಟನೆ ಮತ್ತು ಅದಕ್ಕೆ ಬೆಂಬಲ ನೀಡಿರುವ ಪ್ರತಿಪಕ್ಷಗಳ ಇತರ ನಾಯಕರ ಕ್ರಮ ದೇಶದ ಅಧಿಕಾರ ಕಸಿದುಕೊಂಡು ಆಡಳಿತ ನಿರ್ವಹಿಸುವ ಗುಂಪು ಕ್ಲೆಪ್ಟೋಕ್ರಸಿ ಕ್ಲಬ್‌ನವರಂತೆ ವರ್ತಿಸುತ್ತಿದೆೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿರುವ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ರಕ್ಷಣೆಯೇ ಆದ್ಯತೆ : ಯೋಗಿ ಆದಿತ್ಯನಾಥ್
ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವುದೇ ಸಿಎಂ ಮಮತಾ ಬ್ಯಾನರ್ಜಿ ಆದ್ಯತೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೊಂಡು ಧರಣಿ ನಡೆಸಿದ ಅವರ ಕ್ರಮ ನಾಚಿಕೆಗೇಡಿನದ್ದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪುರೂಲಿಯಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದರು. ಯಾವ ಕಾರಣಕ್ಕಾಗಿ ಐಪಿಎಸ್ ಅಧಿಕಾರಿಯನ್ನು ಮುಖ್ಯಮಂತ್ರಿ ರಕ್ಷಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಆಯುಕ್ತರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದರಿಂದ ರಹಸ್ಯ ಬೇರೆಯೇ ಇದೆ ಎನ್ನುವುದು ಸ್ಪಷ್ಟ ಎಂದಿದ್ದಾರೆ. ಮಂಗಳವಾರ ಪುರೂಲಿಯಾದಲ್ಲಿ ಯೋಗಿ ಕಾಪ್ಟರ್ ಇಳಿಯಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಬೊಕಾರೋಗೆ ತೆರಳಿ ಅಲ್ಲಿಂದ ಕಾರಿನಲ್ಲಿ ಪುರೂಲಿಯಾಗೆ ತೆರಳಿದರು.
ಸುಪ್ರೀಂನಿಂದ ನೋಟಿಸ್
ಪಶ್ಚಿಮ ಬಂಗಾಲ ಸರಕಾರದ ಪರ ವಾದಿಸಿದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ, ವಕೀಲ ಎ.ಎಂ.ಸಿಂ Ì, “ರಾಜೀವ್ ಕುಮಾರ್ ಹಾಗೂ ಪ.ಬಂಗಾಲ ಪೊಲೀಸರು ಸಿಬಿಐಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಲ್ಲದೆ, ತನಿಖೆಗೆ ಸಂಬಂಧಿಸಿ ಡಿಜಿಪಿ ಈಗಾಗಲೇ 5 ಪತ್ರಗಳನ್ನು ಕೂಡ ಸಿಬಿಐಗೆ ಬರೆದಿದ್ದಾರೆ. ರಾಜೀವ್ ಅವರು ಸಾಕ್ಷ್ಯ ನಾಶ ಮಾಡಿದ್ದೇ ಆದಲ್ಲಿ, 5 ವರ್ಷಗಳಾದರೂ ಅವರ ವಿರುದ್ಧ ಸೆಕ್ಷನ್ 201ರ ಅನ್ವಯ ಎಫ್ಐಆರ್ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ “ನೀವು ಬಹಳ ವಿಚಾರಗಳನ್ನು ಯೋಚಿಸುತ್ತೀರಿ. ನೀವು ತನಿಖೆಯಲ್ಲಿ ಸಹಕರಿಸಬಹುದಲ್ಲವೇ? ಏನಾದರೂ ಸಮಸ್ಯೆ ಇದೆಯೇ?’ ಎಂದು ಕೇಳಿದರು. ಅಲ್ಲದೆ, ಪಶ್ಚಿಮ ಬಂಗಾಲ ಮುಖ್ಯ ಕಾರ್ಯದರ್ಶಿ, ಡಿಜಿಪಿ ನ್ಯಾಯಾಂಗ ನಿಂದನೆ ಮಾಡಿದ್ದರೆಂಬ ಆರೋಪಕ್ಕೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ಫೆ.18ರೊಳಗಾಗಿ ಉತ್ತರವನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ನೀಡುವಂತೆ ಸೂಚಿಸಿತು. ಅವರು ಅದನ್ನು ಪರಿಶೀಲಿಸಿ ಇಬ್ಬರು ಖುದ್ದಾಗಿ ಫೆ.20ಕ್ಕೆ ಹಾಜರಾಗಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸಿ ಮಾಹಿತಿ ನೀಡುತ್ತಾರೆಂದು ಹೇಳಿ ವಿಚಾರಣೆ ಮುಂದೂಡಿತು.
ಮಮತಾ ಬ್ಯಾನರ್ಜಿಯವರ ರಾಜಕೀಯ ಪ್ರೇರಿತ ನಾಟಕಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ಮುಖ್ಯಮಂತ್ರಿ ಅರಾಜಕತಾವಾದಿ ಯಾಗಿದ್ದು, ಸಾಕ್ಷ್ಯ ಸಂಗ್ರಹಿಸುವ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ.
ಸ್ಮತಿ ಇರಾನಿ, ಕೇಂದ್ರ ಜವಳಿ ಸಚಿವೆ
ನನ್ನ ವಿರುದ್ಧ ಮಮತಾ ಮಾಡಿದ ಆರೋಪ ಸುಳ್ಳು. ನಿಮ್ಮ ಪೊಲೀಸ್ ಆಯುಕ್ತನಷ್ಟು ಅದೃಷ್ಟ ನನಗಿಲ್ಲ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೆ.
ಹಿಮಾಂತ ಬಿಸ್ವಾ ಶರ್ಮಾ, ಅಸ್ಸಾಂನ ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.