![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 22, 2024, 1:42 AM IST
ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ದೇಗುಲದ ಮೆಟ್ಟಿಲ ಬಳಿಯೇ ಮಾಂಸ ಬೇಯಿಸಿದ ವ್ಯಕ್ತಿಯೊಬ್ಬನನ್ನು ಭಕ್ತರೆಲ್ಲ ಸೇರಿ ಥಳಿಸಿದ್ದು, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬರಸಾನಾದ ಲಾಡ್ಲಿ ಮಂದಿರದ ಮೆಟ್ಟಿಲುಗಳ ಬಳಿ ಸಂಜಯ್ ಎಂಬಾತ ಮಾಂಸ ಬೇಯಿಸಿದ್ದಾನೆ. ಈತ ಕೆಲವು ವರ್ಷಗಳಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ. ಮಾಂಸ ಬೇಯಿಸಿದ್ದನ್ನು ಕಂಡ ಭಕ್ತರು ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಧಾರ್ಮಿಕ ಸ್ಥಳವನ್ನು ಅಪವಿತ್ರಗೊಳಿಸಿದ್ದಕ್ಕೆ ಪೊಲೀಸರು ಸಂಜಯ್‌ನನ್ನು ಬಂಧಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.