ಹಣ ಕದ್ದು ವಂಚಿಸಿದ ಆರೋಪಿ ಕೊಲೆ ಅಪರಾಧಿ ಎಂದು ಬಯಲಾಯಿತು
Team Udayavani, Jan 3, 2018, 12:17 PM IST
ಥಾಣೆ : ಬ್ಯಾಂಕ್ ಗ್ರಾಹಕರಿಗೆ ನೆರವಾಗುವ ನೆಪದಲ್ಲಿ ಅವರ ಬಳಿ ಇದ್ದ ಹಣ ಕದ್ದು ವಂಚಿಸಿದ ಆರೋಪದಲ್ಲಿ ಇತರಿಬ್ಬರೊಂದಿಗೆ ಬಂಧಿಸಲ್ಪಟ್ಟ 28ರ ಹರೆಯದ ಕಳ್ಳನೋರ್ವ ತನಿಖೆಯ ವೇಳೆ ಗುಜರಾತ್‌ನಿಂದ ಪರಾರಿಯಾಗಿರುವ ಕೊಲೆ ಅಪರಾಧಿಎಂದು ಗೊತ್ತಾಯಿತು ಎಂಬುದಾಗಿ ಮಹಾರಾಷ್ಟ್ರದ ಪಾಲಗಢ ಪೊಲೀಸರು ತಿಳಿಸಿದ್ದಾರೆ.
ಮಿತೇಶ್ ಅಲಿಯಾಸ್ ರಾಹುಲ್ ಅಲಿಯಾಸ್ ಖಾತಿಯಾವಾಡಿ ವಾಮನ ರಾಠೊಡ್ ಎಂಬಾತನು ಮೂಲತಃ ಭಾವನಗರದವ. ಆತನನ್ನು 2009ರಲ್ಲಿ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಜೈಲಿಗೆ ಹಾಕಲಾಗಿತ್ತು ಎಂದು ಪಾಲಗಢ ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ರಾಜ್ ತಿಲಕ್ ರೋಶನ್ ತಿಳಿಸಿದ್ದಾರೆ.
2,000 ಮತ್ತು 500 ರೂ. ನೋಟುಗಳನ್ನು ಖಾತೆಗೆ ಜಮೆ ಮಾಡುವ ಮುನ್ನ ಅವುಗಳ ಸೀರಿಯಲ್ ನಂಬರ್ ಬರೆದುಕೊಡಲು ನೆರವಾಗುವ ನೆಪದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಗ್ರಾಹಕರನ್ನು ವಂಚಿಸಿದ್ದರೆಂಬ ಬಗ್ಗೆ ಪಾಲಗಢ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕೊಲೆ ಅಪರಾಧಿ ಮಿತೇಶ್ ಅಲಿಯಾಸ್ ರಾಹುಲ್ ಅಲಿಯಾಸ್ ಖಾತಿಯಾವಾಡಿ ವಾಮನ ರಾಠೊಡ್ ಸಿಕ್ಕಿಬಿದಿದ್ದ.
ಈತನೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಇನ್ನಿಬ್ಬರೆಂದರೆ ಚಂದ್ರಕಾಂತ ದಾಸವತೆ 28, ಮತ್ತು ವಿಷ್ಣುದತ್ ಅಲಿಯಾಸ್ ಸಂಜಯ್ ಶುಕ್ಲಾ 27.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.