Tragedy: ಪಾಮ್ ಬೀಚ್ ಬಳಿ ಅಪಘಾತ… ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಮೃತ್ಯು
Team Udayavani, Feb 29, 2024, 9:18 AM IST
ಮುಂಬಯಿ: ಪೆಂಟಿಯಮ್ ಪ್ರೊಸೆಸರ್‌ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ನಾಯಕತ್ವದ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಪ್ರಮುಖ ಟೆಕ್ ಕಂಪನಿ ಇಂಟೆಲ್‌ನ ದಕ್ಷಿಣ ಏಷ್ಯಾ ವಿಭಾಗದ ಮಾಜಿ ನಿರ್ದೇಶಕ ಅವತಾರ್ ಸಿಂಗ್ ಸೈನಿ(೬೮) ಅವರು ಬುಧವಾರ ಮುಂಜಾನೆ ಪಾಮ್ ಬೀಚ್ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ವೇಗವಾಗಿ ಬಂದ ಟ್ಯಾಕ್ಸಿಯೊಂದು ಸೈನಿ ಅವರ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈನಿ ಅವರು ಮುಂದಿನ ತಿಂಗಳು ಯುಎಸ್‌ಗೆ ಹಿಂತಿರುಗಬೇಕಿತ್ತು ಆದರೆ ಅದಕ್ಕೂ ಮೊದಲೇ ಅಪಘಾತ ಸಂಭವಿಸಿದೆ.
ಅಮೆರಿಕದಲ್ಲಿ ನೆಲೆಸಿರುವ ಅವರ ಮಗ ಮತ್ತು ಮಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು ಇದೀಗ ಅವರು ಭಾರತಕ್ಕೆ ಹೊರಟಿದ್ದಾರೆ ಎನ್ನಲಾಗಿದೆ. ಮುಂಬೈ ಹೊರ ಭಾಗದಲ್ಲಿ ನೆಲೆಸಿರುವ ಸೈನಿ ಅವರ ಇತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು ಮೃತದೇಹವನ್ನು ಪಡೆಯಲು ಆಸ್ಪತ್ರೆಗೆ ಬಂದಿದ್ದಾರೆ ಎನ್ನಲಾಗಿದೆ.
ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದ ಸೈನಿ, ಮುಂಬೈಗೆ ಬಂದಾಗ ಚೆಂಬೂರಿನಲ್ಲಿ ಒಬ್ಬಂಟಿಯಾಗಿ ಉಳಿದುಕೊಳ್ಳುತ್ತಿದ್ದರು ”ಎಂದು ಎನ್‌ಆರ್‌ಐ ಕರಾವಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ಕುರಿತು ಹೇಳಿಕೆ ನೀಡಿದ ಸೈಕ್ಲಿಸ್ಟ್ ಯಶ್ ಥೋರಟ್, ಸೈನಿ ಅವರ ಪರಿಚಯ ನನಗೆ ಇರಲಿಲ್ಲ ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ನನಗೆ ಶುಭೋದಯ ಎಂದು ಹೇಳಿದ್ದರು ಇದಾದ ಬಳಿಕ ಸೈಕಲ್ ನಲ್ಲಿ ತೆರಳಿದ ಅವರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಕೆಲ ದೂರ ಎಳೆದುಕೊಂಡು ಹೋಗಿದೆ ಕೂಡಲೇ ನಾನು ಮತ್ತು ಇತರ ಸೈಕ್ಲಿಸ್ಟ್‌ಗಳು ಸೇರಿ ಅವರನ್ನು ನೋಡಿದ ವೇಳೆ ಸ್ವಲ್ಪ ಪ್ರಜ್ಞೆ ಇತ್ತು ಹಾಗಾಗಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು ಆದರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Gangavati: ಹೈದರಾಬಾದ್ ನಿಂದ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ; 10 ಜನರಿಗೆ ಗಾಯ
Shocked to hear the news about Avtar Saini, General Mgr & Chief Designer of the Pentium processor passed away this morning. He was riding his cycle on Palm Beach Road in Navi Mumbai this morning and was hit by a taxi.@intel @IntelIndia
Below with @jayantmurty – Feb 14th 2024 pic.twitter.com/UXsW4Exg7C
— Shrikant Patil (@sjpatil) February 28, 2024
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.