ಜಯ ಪುತ್ರ ಎಂದವನ ಜೈಲಿಗಟ್ಟಲು ಆದೇಶ
Team Udayavani, Mar 28, 2017, 9:15 AM IST
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ತಮಿಳು ನಟ ಶೋಬನ್ ಬಾಬು ಪುತ್ರ ತಾನು ಎಂದು ಹೇಳಿಕೊಂಡಿದ್ದ ಜೆ.ಕೃಷ್ಣಮೂರ್ತಿ ಎಂಬಾತನ ಬಂಧನಕ್ಕೆ ಮದ್ರಾಸ್ ಹೈಕೋರ್ಟು ಸೋಮವಾರ ಆದೇಶ ನೀಡಿದೆ. ಪೊಯೆಸ್ ಗಾರ್ಡನ್ ಸೇರಿ ಜಯಲಲಿತಾರ ಎಲ್ಲ ಆಸ್ತಿ ತನಗೇ ಸೇರಬೇಕು. ಈ ಬಗ್ಗೆ ಆದೇಶ ನೀಡಲು ಕೋರಿ ಈತ ದಾಖಲೆಗಳನ್ನು ಸಲ್ಲಿಸಿದ್ದ. ಅದನ್ನು ಪರಿಶೀಲಿಸುವಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ನ್ಯಾ.ಆರ್.ಮಹದೇವನ್ ನೇತೃತ್ವದ ಪೀಠ ಆದೇಶಿಸಿತ್ತು. ಅವರು ದಾಖಲೆಗಳೆಲ್ಲ ನಕಲಿ ಎಂದು ವರದಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೃಷ್ಣಮೂರ್ತಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ. ಜತೆಗೆ ನ್ಯಾಯಾಲಯಕ್ಕೆ ವಂಚನೆ ಮಾಡಲು ಯತ್ನಿಸಿದ್ದಾನೆ. ಹೀಗಾಗಿ ಆತನನ್ನು ಕೂಡಲೇ ಬಂಧಿಸಲು ನ್ಯಾ.ಮಹದೇವನ್ ಆದೇಶಿಸಿ, ಮುಂದಿನ ವಿಚಾರಣೆಯನ್ನು ಏ.17ಕ್ಕೆ ನಿಗದಿಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ
Delhi; ನಿರಾಶ್ರಿತರಿಂದ ನಾಗರಿಕರು: ಮೊದಲ ಬಾರಿ ಮತ ಚಲಾಯಿಸಲಿರುವ ಪಾಕಿಸ್ಥಾನಿ ಹಿಂದೂಗಳು
Rahul Gandhi; ಬಿಜೆಪಿ-ಕಾಂಗ್ರೆಸ್ ವಾಕ್ಸಮರಕ್ಕೆ ಕಾರಣವಾದ ರಾಹುಲ್ ವಿಯೇಟ್ನಾಂ ಪ್ರವಾಸ
Delhi poll: ಅರ್ಚಕರಿಗೆ ತಿಂಗಳಿಗೆ 18000 ಗೌರವಧನ ಘೋಷಣೆ ಮಾಡಿದ ಕೇಜ್ರಿವಾಲ್, ಆದರೆ…
Shocking: 9 ದಿನದ ಮಗುವನ್ನೇ 60 ಸಾವಿರಕ್ಕೆ ಮಾರಾಟ ಮಾಡಿ ಬೈಕ್ ಖರೀದಿಸಿದ ಪೋಷಕರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.