ಬೂಟ್ ಮೇಲಿನ ಎಂಜಲು ನೆಕ್ಕುವ ಬಲವಂತಕ್ಕೆ ವ್ಯಕ್ತಿ ಆತ್ಮಹತ್ಯೆ
Team Udayavani, Feb 12, 2018, 12:23 PM IST
ಮುಂಬಯಿ : ನಾಲ್ಕು ಮಂದಿ ದುರುಳರಿಂದ ತೀವ್ರ ಹಲ್ಲೆಗೆ ಗುರಿಯಾಗಿರುವ ಅವರಲ್ಲಿ ಒಬ್ಟಾತ ತನ್ನ ಬೂಟಿನ ಮೇಲೆ ಉಗುಳಿದ ಎಂಜಲನ್ನು ನೆಕ್ಕುವಂತೆ ಬಲವಂತಪಡಿಸಿದ ಕಾರಣಕ್ಕೆ 35ರ ಹರೆಯದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ವರದಿಯಾಗಿದೆ.
ದಕ್ಷಿಣ ಮುಂಬಯಿಯ ಕಫ್ಪರೇಡ್ ಪ್ರದೇಶದಲ್ಲಿ ಮಾರ್ಕೆಟ್ ಒಂದರ ಸಮೀಪ ಕಾಸಿಂ ಶೇಖ್ ಎಂಬಾತನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದರು. ಬಳಿಕ ಅವರು ಬೂಟಿನ ಮೇಲಿನ ಎಂಜಲು ನೆಕ್ಕುವ ಶಿಕ್ಷೆಯನ್ನು ಆತನಿಗೆ ನೀಡಿದರು.
ಆ ಸಂದರ್ಭದಲ್ಲಿ ಶೇಖ್ ಹೇಗೋ ದಾಳಿಕೋರರ ಕೈಯಿಂದ ಬಿಡಿಸಿಕೊಂಡು ಓಡಿ ಹೋಗಲು ಸಫಲನಾದ. ಆದರೆ ತನಗಾದ ಸಾರ್ವಜನಿಕ ಅವಮಾನವನ್ನು ಸಹಿಸದೆ ಕಫ್ ಪರೇಡ್ ಪ್ರದೇಶದಲ್ಲಿನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ.
ಪೊಲೀಸರಿಗೆ ಶೇಖ್ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿತು. ಆ ಪ್ರಕಾರ ಅವರು ಇಸ್ಮಾಯಿಲ್ ಶೇಖ್ 47, ಅಕ್‌ಬರ್ ಶೇಖ್ 35, ಕರಿಯಾ ಪಾವಸೆ 35, ಮತ್ತು ಅಫ್ಜಲ್ ಕುರೇಶಿ 44 ಎಂಬ ಆರೋಪಿಗಳನ್ನು ಬಂಧಿಸಿದರು. ಇವರ ವಿರುದ್ಧ ಪೊಲೀಸರು ಐಪಿಸಿ ಸೆ.306 (ಆತ್ಮಹತ್ಯೆಗೆ ಚಿತಾವಣೆ) ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.