ಸಿನಿಮೀಯ ಸನ್ನಿವೇಶ: ಸ್ಟ್ರೆಚರ್ಲ್ಲಿ ಮಲಗಿ ಸಾಕ್ಷಿ ಹೇಳಿದ!
Team Udayavani, Oct 8, 2017, 12:56 PM IST
ಥಾಣೆ: ಥಾಣೆ ಜಿಲ್ಲಾ ನ್ಯಾಯಾಲಯ ವ್ಯಕ್ತಿಯೊಬ್ಬರು ಸ್ಟ್ರೆಚರ್ ಮೇಲೆ ಮಲಗಿ ಸಾಕ್ಷಿ ಹೇಳಿದ ಸಿನಿಮೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕಾಲುಗಳಿಗೆ ಬ್ಯಾಂಡೇಜ್ ಹಾಕಿದ್ದ ಸಾಹಿಬ್ ಮುಕಿಂ ಅನ್ಸಾರಿ ತನ್ನ ಮೇಲೆ ಹಲ್ಲೆ ಮಾಡಿ ಸಾಯಿಸಲೆತ್ನಿಸಿದ ನಾಲ್ಕು ಮಂದಿಯ ವಿರುದ್ಧ ಸಾಕ್ಷಿ ಹೇಳಿದರು. ಥಾಣೆ ಜಿಲ್ಲಾ ನ್ಯಾಯಾಲಯ ಈ ರೀತಿಯ ಸಿನಿಮೀಯ ಸನ್ನಿವೇಶವನ್ನು ನೋಡಿದ್ದು ಇದೇ ಮೊದಲು.
ಹಲ್ಲೆಗೊಳಗಾದ ವ್ಯಕ್ತಿ ಸ್ಟ್ರೆಚರ್ ಮೇಲೆ ಮಲಗಿ ಕೊಂಡೇ ಸಾಕ್ಷಿ ಹೇಳಿ ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡುವ ದೃಶ್ಯವನ್ನು ನೋಡಲು ವಕೀಲರು ಮತ್ತು ಜನರು ಜಮಾಯಿಸಿದ ಕಾರಣ ನ್ಯಾಯಾಲಯದ ಕೊಠಡಿ ಕಿಕ್ಕಿರಿದು ತುಂಬಿತ್ತು.
ಗುಜರಿ ವ್ಯಾಪಾರಿಯಾಗಿರುವ ಅನ್ಸಾರಿ ಸಮಾಜ ಸೇವಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ನಾಲ್ಕು ಮಂದಿ ಇತ್ತೀಚೆಗೆ ಅವರನ್ನು ಅಪಹರಿಸಿ ಕಬ್ಬಿಣದ ರಾಡ್ಗಳಿಂದ ಹಲ್ಲೆ ಮಾಡಿ ರಿಕ್ಷಾದಿಂದ ಹೊರಗೆಸೆದ ಪರಿಣಾಮವಾಗಿ ಅವರ ಎರಡೂ ಕಾಲುಗಳು ಮುರಿದಿವೆ. ಅನ್ಸಾರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಏಳು ಸಲ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದಾರೆ. ಆದರೆ ಇನ್ನೂ ನಡೆದಾಡುವ ಸ್ಥಿತಿಯಲ್ಲಿಲ್ಲ.
ನಿನ್ನೆ ಕೋರ್ಟಿನಲ್ಲಿ ಸರಕಾರಿ ಅಭಿ ಯೋಜಕರು ಅನ್ಸಾರಿಯ ಹೇಳಿಕೆ ದಾಖಲಿಸಿ ಕೊಂಡ ಬಳಿಕ ಪ್ರತಿವಾದಿ ವಕೀಲರು ಅವರನ್ನು ಪಾಟೀ ಸವಾಲಿಗೊಳಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.