ಗೆಸ್ಟ್ ಹೌಸ್ನಲ್ಲಿ ಲೈಂಗಿಕ ಕಿರುಕುಳ: ರಿಸೆಪ್ಶನಿಸ್ಟ್ ಸೆರೆ
Team Udayavani, Dec 19, 2017, 3:24 PM IST
ಗುರುಗ್ರಾಮ : ತರಬೇತಿ ನಿರತ ವಿಮಾನ ಪರಿಚಾರಿಕೆಯೋರ್ವಳಿಗೆ ಇಲ್ಲಿನ ಡಿಎಫ್ಎಲ್ ಪ್ರದೇಶದಲ್ಲಿನ ಗೆಸ್ಟ್ ಹೌಸ್ ಒಂದರಲ್ಲಿ ಅಲ್ಲಿನ ರಿಸೆಪ್ಶನಿಸ್ಟ್ ಲೈಂಗಿಕ ಕಿರುಕುಳ ನೀಡಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
22ರ ಹರೆಯದ ಸಂತ್ರಸ್ತೆಯು ಕಳೆದ ಭಾನುವಾರ ಬೆಳಗ್ಗೆ 2 ಗಂಟೆಯ ಹೊತ್ತಿಗೆ ಗೆಸ್ಟ್ ಹೌಸ್ನಿಂದ ಚೆಕ್ ಔಟ್ ಆಗುತ್ತಿದ್ದಾಗ ಆಕೆಗೆ ಅಲ್ಲಿನ ರಿಸೆಪ್ಶನಿಸ್ಟ್ ಲೈಂಗಿಕ ಕಿರುಕುಳ ನೀಡಿದ ಎನ್ನಲಾಗಿದೆ.
ತಾನು ಕೊಠಡಿಯಿಂದ ಚೆಕ್ ಔಟ್ ಆಗುತ್ತಿದ್ದೇನೆ ಎಂದು ಮಹಿಳೆಯು ತಿಳಿಸಿದಾಗ 24ರ ಹರೆಯದ, ಉತ್ತರ ಪ್ರದೇಶದ ಮೈನ್ಪುರಿ ನಿವಾಸಿಯಾಗಿರುವ ರಿಸೆಪ್ಶನಿಸ್ಟ್ ಶಿವ ಕುಮಾರ್ ಎಂಬಾತ ಆಕೆಯ ಕೊಠಡಿಗೆ ನುಗ್ಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಎಂದು ಡಿಎಲ್ಎಫ್ 2ನೇ ಹಂತದ ಪೊಲೀಸ್ ಠಾಣಾಧಿಕಾರಿ ಸುದೀಪ್ ಕುಮಾರ್ ತಿಳಿಸಿದರು.
ವಾಯುಯಾನ ಪರಿಚಾರಿಕೆ ತರಬೇತಿನಿರತ ಮಹಿಳೆಗೆ ಆಕೆಯ ಏರ್ ಲೈನ್ಸ್ ತರಬೇತಿ ಅವಧಿಗೆಂದು ಈ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯವನ್ನು ಕಲ್ಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.