ಎಂಟು ವರ್ಷದ ಸ್ವಂತ ಮಗಳ ಮೇಲೆ ಕಾಮುಕ ಅಪ್ಪನಿಂದ ರೇಪ್
Team Udayavani, Mar 27, 2018, 5:36 PM IST
ಜಬಲ್ಪುರ, ಮಧ್ಯಪ್ರದೇಶ : ಎಂಟು ವರ್ಷ ಪ್ರಾಯದ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕಾಮುಕ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಾರ್ಚ್ 25ರ ರಾತ್ರಿ ಈ ಆಘಾತಕಾರಿ ಘಟನೆಯು ಜಬಲ್ಪುರ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದ ಕುಸನೇರ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಕಾಮುಕ ಅಪ್ಪನ ಕೃತ್ಯವನ್ನು ಕಂಡು ಹೌಹಾರಿದ ಆತನ ಪತ್ನಿಯು ಆತನನ್ನು ಅತ್ತ ದೂಡಿ ಮಗಳನ್ನು ಪಾರುಗೊಳಿಸಿದಳಲ್ಲದೆ ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಕಾಮುಕ ಅಪ್ಪನು ಮನೆಯಿಂದ ಪರಾರಿಯಾಗುವ ಮುನ್ನ ಪತ್ನಿ – ಮಗಳು ಇದ್ದ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ. ನಿನ್ನೆಯ ದಿನ ಇವರ ಬೊಬ್ಬೆ ಕೇಳಿದ ನೆರೆಕರೆಯವರು ತಾಯಿ – ಮಗಳನ್ನು ಪಾರುಗೊಳಿಸಿದರು.
ಅಪ್ಪನಿಂದ ಅತ್ಯಾಚಾರಕ್ಕೆ ಗುರಿಯಾದ ಮಗಳು 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಬಾಲಕಿಯು ಹೇಳಿರುವ ಪ್ರಕಾರ ಆಕೆಯ ಕಾಮುಕ ಅಪ್ಪನು ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.