ಅಳಿಲು ಈ ವ್ಯಕ್ತಿಯ ಜೊತೆ ಎಷ್ಟು ಸಲುಗೆಯಿಂದ ಇದೆ ನೋಡಿ..!
Team Udayavani, Mar 21, 2021, 4:18 PM IST
ನವದೆಹಲಿ : ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಬಂಧ ಪುರಾತನ ಕಾಲದಿಂದಲೂ ಉಳಿದುಕೊಂಡು ಬಂದಿದೆ. ಪ್ರಾಣಿಗಳು ಒಮ್ಮೆ ಮನುಷ್ಯರನ್ನು ನಂಬಿದರೆ ಅವರನ್ನು ಬಿಟ್ಟು ಹೋಗುವುದಿಲ್ಲ. ಅಷ್ಟೇ ಅಲ್ಲದೆ ಅವರುಗಳ ಜೊತೆಯಲ್ಲೇ ಭಯವಿಲ್ಲದೆ ಜೀವಿಸುತ್ತವೆ. ಇದಕ್ಕೆ ಉದಾಹರಣೆಯಂತೆ ಇದೆ ಈ ಒಂದು ವಿಡಿಯೋ.
ವ್ಯಕ್ತಿಯೊಬ್ಬ ಅಳಿಲಿಗೆ ನೀರು ಕುಡಿಸುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಹಲವರು ಇದು ಸಾಧ್ಯನಾ ಅಂತಿದ್ದಾರೆ.
ಡ್ಯಾನಿ ಡಾರ್ನೆ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ವ್ಯಕ್ತಿಯೊಬ್ಬ ಚಿಕ್ಕ ಅಳಿಲಿಗೆ ನೀರನ್ನು ಕುಡಿಸುತ್ತಿದ್ದಾರೆ. ಬಾಟೆಲ್ ನಿಂದ ನೀರನ್ನು ಕುಡಿಸಿದ್ದು, ನಂತರ ಅದರ ತಲೆ ಸವರಿ ಮಲಗಿಸಿದ್ದಾರೆ.
ಈ ವಿಡಿಯೋವನ್ನು ನೋಡಿದ ಹಲವರು ಆ ಅಳಿಲು ಇದೀಗ ಎಲ್ಲಿದೆ, ಆ ವ್ಯಕ್ತಿ ಮತ್ತು ಅಳಿಲು ಈಗಲೂ ಜೊತೆಯಲ್ಲೇ ಇದ್ದಾರಾ?, ಮುಂದೆ ಏನಾಯ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಆದ್ರೆ ಇನ್ನು ಕೆಲವರು ಕಮೆಂಟ್ ಮಾಡಿದ್ದು, ಇದು ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುತ್ತದೆ. ಅಳಿಲುಗಳಿಗೆ ಹಸಿವಾದಾಗ ಅಥವಾ ದಣಿವಾದಾಗ ಮನುಷ್ಯರ ಬಳಿ ಬರುತ್ತವೆ ಎಂದಿದ್ದಾರೆ.
ಅದು ಏನೇ ಇರಲಿ ಈ ವಿಡಿಯೋ ನೋಡಿದ ಮೇಲೆ ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಎಂತಹದ್ದು ಎಂಬುದು ತಿಳಿಯುತ್ತದೆ
Because you want to see a man give water to a baby squirrel. pic.twitter.com/D1TgFYI7DT
— Danny Deraney (@DannyDeraney) March 18, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.