ಸ್ನೇಹಿತನನ್ನು ಕೊಂದು 200 ಪೀಸ್, ಟಾಯ್‌ಲೆಟ್‌ನಲ್ಲಿ ಫ್ಲಶ್ ಔಟ್
Team Udayavani, Jan 24, 2019, 11:30 AM IST
ಮುಂಬಯಿ : ಅತ್ಯಂತ ಅಮಾನುಷ ರೀತಿಯ ಕೊಲೆ ಕೃತ್ಯವೊಂದರಲ್ಲಿ ಮಹಾರಾಷ್ಟ್ರದ 40ರ ಹರೆಯದ ಪಿಂಟು ಶರ್ಮಾ ಎಂಬಾತ ತನ್ನ 53ರ ಹರೆಯದ ಗಣೇಶ್ ಕೋಲ್ಹಾಟ್‌ಕರ್ ಎಂಬ ಸ್ನೇಹಿತನನ್ನು ಕೊಂದು ಆತನ ದೇಹವನ್ನು 200ಕ್ಕೂ ಅಧಿಕ ತುಂಡುಗಳನ್ನಾಗಿ ಮಾಡಿ ಅವುಗಳನ್ನು ಟಾಯ್‌ಲೆಟ್‌ನಲ್ಲಿ ಫ್ಲಶ್ ಔಟ್ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಎಲ್ಲವೂ ಸರಿ ಹೋಗಿದ್ದರೆ ಪಿಂಟು ಶರ್ಮಾನ ಈ ಕೊಲೆ ಕೃತ್ಯ ಬಹಿರಂಗವಾಗುತ್ತಲೇ ಇರಲಿಲ್ಲ. ಆದರೆ ಆತನ ದುರದೃಷ್ಟಕ್ಕೆ ಆತ ಫ್ಲಶ್ ಔಟ್ ಮಾಡಿದ್ದ ಟಾಯ್‌ಲೆಟ್‌ನ ಒಳಚರಂಡಿ ಪೈಪು ಹೊರಗಿಂದ ಬ್ಲಾಕ್ ಆದಾಗ ಅದನ್ನು ತೆರವುಗೊಳಿಸುವ ಕೆಲಸದಲ್ಲಿ ಮೃತ ದೇಹದ 200ಕ್ಕೂ ಹೆಚ್ಚು ತುಂಡುಗಳ ದರ್ಶನವಾಯಿತು ಎಂದು ಪೊಲೀಸರು ಹೇಳಿದರು.
ಡಿವೈಎಸ್‌ಪಿ ಜಯಂತ ಬಜಬಲೆ ಅವರು ಪತ್ರಿಕಾ ಗೋಷ್ಠಿಯಲ್ಲಿ ಈ ಕೊಲೆ ಕೃತ್ಯದ ಬಗ್ಗೆ ನೀಡಿದ ಮಾಹಿತಿ ಹೀಗಿದೆ :
ಪಿಂಟು ಮತ್ತು ಗಣೇಶ್ ನಡುವೆ ಹಣಕಾಸು ವ್ಯವಹಾರದಲ್ಲಿ ವಿವಾದ ಇತ್ತು. ಪಿಂಟು ಶರ್ಮಾ ಶೇರುಗಳಲ್ಲಿ ಹಣ ಹೂಡುತ್ತಿದ್ದ. ಗಣೇಶ್ ಮೀರಾ ರೋಡ್ ನಲ್ಲಿ ಒಂದು ಪ್ರಿಂಟಿಂಗ್ ಪ್ರಸ್ ನಡೆಸುತ್ತಿದ್ದ.
ಪಿಂಟು ಶರ್ಮಾ ತನ್ನ ಗೆಳೆಯ ಗಣೇಶ್ ಗೆ ಆತನ ಉದ್ಯಮಕ್ಕೆಂದು 1 ಲಕ್ಷ ರೂ. ಸಾಲ ನೀಡಿದ್ದ. ಇದರಲ್ಲಿ 40,000 ರೂ.ಗಳನ್ನು ಗಣೇಶ್ ಹಿಂದಿರುಗಿಸಿದ್ದ. ಆದರೆ ಉಳಿದ 60,000 ರೂ. ಬಾಕಿ ಇರಿಸಿದ್ದ. ಇದರ ತತ್‌ಕ್ಷಣ ಮರುಪಾವತಿಗೆ ಹಠ ಹಿಡಿದ ಪಿಂಟು ಶರ್ಮಾ, ಕಳೆದ ಜನವರಿ 15ರಂದು ಗೆಳೆಯ ಗಣೇಶ್‌ನನ್ನು ತನ್ನ ಬಾಡಿಗೆ ಫ್ಲ್ಯಾಟ್ ಗೆ ಕರೆಸಿಕೊಂಡು ಜಗಳವಾಡಿದ್ದ.
“ಈ ಜಗಳದಲ್ಲಿ ನಾನು ಗಣೇಶ್ ನನ್ನು ಬಲವಾಗಿ ದೂಡಿದೆ; ಆತನ ತಲೆಗೆ ಜೋರಾಗಿ ಏಟು ಬಿದ್ದಿತ್ತು; ಆತ ಬಿದ್ದವನೇ ಮೃತಪಟ್ಟ. ಇದನ್ನು ಮುಚ್ಚಿ ಹಾಕಲು ನಾನು ಆತನ ಮೃತ ದೇಹವನ್ನು 200 ತುಂಡು ಮಾಡಿ ಟಾಯ್‌ಲೆಟ್ ಗಟಾರಕ್ಕೆ ಫ್ಲಶ್ ಔಟ್ ಮಾಡಿದೆ’ ಎಂದು ಪಿಂಟು ಶರ್ಮಾ ಪೊಲಿಸರಲ್ಲಿ ತಾನೆಸಗಿದ ಕೊಲೆ ಕೃತ್ಯವನ್ನು ಒಪ್ಪಿಕೊಂಡ.
ಪಿಂಟು ಶರ್ಮಾ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್ ಇದ್ದ ಅಪಾರ್ಟ್‌ಮೆಂಟ್‌ನ ಎಲ್ಲ ಮನೆಗಳನ್ನು ಕೂಲಂಕಷವಾಗಿ ನಾವು ಶೋಧಿಸಿದೆವು. ಕೊನೆಗೆ ಪಿಂಟು ಶರ್ಮಾ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟಿನೊಳಗಿಂದ ದುರ್ನಾತ ಬರುತ್ತಿರುವುದು ಗೊತ್ತಾಗಿ ಆತನನ್ನು ನಾವು ಬಂಧಿಸಿದೆವು ಎಂದು ಡಿವೈಎಸ್‌ಪಿ ಜಯಂತ ಬಜಬಲೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.