ಭೂಮಿಪೂಜೆಗಾಗಿ ಮುಸ್ಲಿಂ ವ್ಯಕ್ತಿ 800 ಕಿ.ಮೀ. ಪಯಣ
ಕೌಸಲ್ಯೆ ಹುಟ್ಟೂರಿನಿಂದ ಮೃತ್ತಿಕೆ ಹೊತ್ತು ತರುತ್ತಿರುವ ಮೊಹ್ಮದ್ ಫೈಝ್ಖಾನ್
Team Udayavani, Jul 28, 2020, 6:28 AM IST
ಮೊಹ್ಮದ್ ಫೈಝ್ ಖಾನ್ ಅಯೋಧ್ಯೆ ಮಂದಿರದ ಭೂಮಿಪೂಜೆಗೆ ಪವಿತ್ರ ಮೃತ್ತಿಕೆಯನ್ನು ಹೊತ್ತು ತರುತ್ತಿದ್ದಾರೆ.
ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆ ಭಾವೈಕ್ಯ ಧಾಮವಾಗಿಯೂ ಸೆಳೆಯುತ್ತಿದೆ.
ಆಗಸ್ಟ್ 5ರಂದು ನಡೆಯಲಿರುವ ಐತಿಹಾಸಿಕ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಮುಸ್ಲಿಂ ವ್ಯಕ್ತಿಯೊಬ್ಬರು 800 ಕಿ.ಮೀ. ದೂರದಿಂದ ಆಗಮಿಸುತ್ತಿದ್ದಾರೆ.
ಶ್ರೀರಾಮನ ತಾಯಿ ಕೌಸಲ್ಯೆಯ ಹುಟ್ಟೂರು ಎಂದೇ ಕರೆಯಲ್ಪಡುವ ಛತ್ತೀಸ್‌ಗಢದ ಚಾಂದ್ಖರಿಯಿಂದ ಮೊಹ್ಮದ್ ಫೈಝ್ ಖಾನ್ ಅಯೋಧ್ಯೆ ಮಂದಿರದ ಭೂಮಿಪೂಜೆಗೆ ಪವಿತ್ರ ಮೃತ್ತಿಕೆಯನ್ನು ಹೊತ್ತು ತರುತ್ತಿದ್ದಾರೆ.
ರಾಮನ ಭಕ್ತ!: ‘ನನ್ನ ಹೆಸರು ಧರ್ಮದ ಕಾರಣಕ್ಕಾಗಿ ಇಸ್ಲಾಂನಂತಿದ್ದರೂ ನಾನು ರಾಮನ ಪರಮಭಕ್ತ. ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಅವರ ಹೆಸರು ರಾಮ್‌ಲಾಲ್ ಅಥವಾ ಶಾಮ್‌ಲಾಲ್ ಇದ್ದಿರಬಹುದೆಂದು ನನ್ನ ಹಳ್ಳಿಯವರಿಂದ ಕೇಳಲ್ಪಟ್ಟೆ.
ನಾವು ಚರ್ಚಿಗೆ ಹೋಗಲಿ, ಮಸೀದಿಗೇ ಹೋಗಲಿ, ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ’ ಎಂದು ಆಂಗ್ಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಸೀದಿಗಳ ಕೋಮು ಸೌಹಾರ್ದ: ಭೂಮಿ ಪೂಜೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿನ ಮಸೀದಿಗಳು ಕೋಮು ಸೌಹಾರ್ದದ ಸಂದೇಶ ಸಾರುತ್ತಿವೆ.
‘ಇಲ್ಲಿ ಮುಸ್ಲಿಮರ ಧಾರ್ಮಿಕ ಕಾರ್ಯಗಳನ್ನು ಅನ್ಯಧರ್ಮೀಯರು ಗೌರವಿಸುತ್ತಾರೆ. ನಾವು ಕೂಡ ಕೋಮು ಸೌಹಾರ್ದತೆಯನ್ನು ಸಾರುತ್ತಿದ್ದೇವೆ. ರಾಮ ದೇಗುಲದ ಸುತ್ತಮುತ್ತಲಿನ ಮಸೀದಿಗಳ ಕೋಮು ಸೌಹಾರ್ದ ನಿಲುವು ಅಯೋಧ್ಯೆಯ ಶ್ರೇಷ್ಠತೆಗೆ ಸಾಕ್ಷಿ’ ಎಂದು ರಾಮ್‌ಕೋಟ್ ವಾರ್ಡ್‌ನ ಕಾರ್ಪೊರೇಟರ್ ಹಾಜಿ ಅಸಾದ್ ಅಹ್ಮದ್ ‘ಪಿಟಿಐ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.