ಸಂದರ್ಶನದಲ್ಲಿ ಸೋತ ಮಗನಿಗೆ ತಂದೆಯಿಂದ ಹೃದಯಸ್ಪರ್ಶಿ ಪತ್ರ! ಸಾಧನೆಗೆ ಮುಖ್ಯವಾಗಿರುವುದೇನು ?

ದಯವಿಟ್ಟು ಇತರರೊಂದಿಗೆ  ನಿನ್ನನ್ನು ನೀನು ಹೋಲಿಕೆ ಮಾಡಿಕೊಳ್ಳುವುದರೊಂದಿಗೆ ಜೀವನವನ್ನು ಹಾಳು ಮಾಡಿಕೊಳ್ಳಬೇಡ.

Team Udayavani, Jul 12, 2020, 10:52 AM IST

e-mail

ನವದೆಹಲಿ: ಸೋಲು ಮಾನವ ಜೀವನದ ಒಂದು ಭಾಗ, ಜೀವನದಲ್ಲಿ ಒಮ್ಮೆ ಸೋತಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಜೊತೆಗೆ ನಿಮಗೆ ಬೆಂಬಲವಾಗಿ ಪ್ರೋತ್ಸಾಹದ ಮಾತನಾಡಿ ಹುರಿದುಂಬಿಸುವರಿದ್ದರಂತೂ ಸಾಧನೆಯ ಮೈಲಿಗಲ್ಲನ್ನು ಸುಲಭವಾಗಿ ತಲುಪಬಹುದು.  ಇಲ್ಲೊಂದು ಘಟನೆ ಮನಸೆಳೆಯುವಂತಿದೆ. ಸಂದರ್ಶನದಲ್ಲಿ ತಿರಸ್ಕರಿಸಲ್ಪಟ್ಟ ಯುವಕನೊಬ್ಬನಿಗೆ ಆತನ ತಂದೆ  ಕಳುಹಿಸಿದ  ಇಮೇಲ್ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.

ಜಾಕ್ ಅಲ್ಟ್ ಮನ್ ಎಂಬ ಟ್ವಿಟ್ಟರ್ ಬಳಕೆದಾರ, ನಿಮ್ಮ ಅಭಿವೃದ್ದಿಗೆ ಪೋಷಕರು ನೀಡಿರುವ ಅತೀ ಮುಖ್ಯ ಕೊಡುಗೆ ಯಾವುದೆಂದು ಭಾವಿಸುವಿರಾ? ಎಂಬ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆಸುದರ್ಶನ್ ಕಾರ್ತಿಕ್ ಎಂಬ ಯುವಕ ಪ್ರತಿಕ್ರಿಯೆ ನೀಡಿದ್ದು ಪ್ರೇರಕದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.

ಟಿಸಿಎಸ್ ಗೆ 1000 ಜನ ಆಯ್ಕೆಯಾದರೂ ನಾನು ತಿರಸ್ಕರಿಸಲ್ಪಟ್ಟೆ.  ಬೇಸರದಿಂದಲೇ ಹಾಸ್ಟೆಲ್ ರೂಂ ಗೆ ಹಿಂದಿರುಗಿದೆ. ಮರುದಿನ ಎದ್ದಾಗ ತಂದೆಯಿಂದ ಒಂದು ಇ-ಮೇಲ್ ಬಂದಿತ್ತು. ಅದನ್ನು ತೆರದು ನೋಡಿದಾಗ ‘ಚಿಂತಿಸಬೇಡ, ಸೋಲು ಎಂಬುದು ಸಾಧನೆಯ ಮೊದಲ ಮೆಟ್ಟಿಲು. ಮತ್ತೊಂದೆಡೆ ಸಂದರ್ಶನ ಎದುರಿಸುವ ಮುನ್ನ ಕೊಂಚ ಕಾಲಾವಕಾಶ ತೆಗೆದುಕೋ. ಮೊದಲು ನಿನ್ನನ್ನು ನೀನು ಅರಿತುಕೋ. ಖುಷಿಯಾಗಿರು, ಹಿಂದಿನ ಘಟನೆ ಮರೆತಬಿಡು, ಚೆನ್ನಾಗಿ ಊಟ ಮಾಡು, ಸುಖವಾಗಿ ನಿದ್ರಿಸು, ಇದು ನಿನ್ನ ಜೀವನದ ಅತೀ ಮುಖ್ಯ ಘಟ್ಟ, ಮತ್ತೊಬ್ಬರೊಡನೆ ನಿನ್ನನ್ನು ಹೋಲಿಕೆ ಮಾಡಿಕೊಳ್ಳಬೇಡ’ ಎಂದು ತಿಳಿಸಿ ಪತ್ರ ಕೊನೆಗೊಳಿಸಿದ್ದರು.

ಆ ಪತ್ರದ ಸಂಪೂರ್ಣ ಅನುವಾದ ಇಲ್ಲಿದೆ. ಇದು ಜೀವನಕ್ಕೆ ಸ್ಪೂರ್ತಿಯಾದರೂ ಅಚ್ಚರಿಯಿಲ್ಲ.

ಪ್ರೀತಿಯ ಸುದರ್ಶನ್,

ಚಿಂತಿಸಬೇಡ, ನಿನ್ನ ಕೈಲಾದ ಪ್ರಯತ್ನ ಮಾಡಿರುತ್ತೀಯಾ ಎಂದು ನನಗೆ ತಿಳಿದಿದೆ. ಎರಡು ದಿನಗಳಲ್ಲಿ 1500 ಅಭ್ಯರ್ಥಿಗಳನ್ನು ಸಂದರ್ಶಿಸಿದಾಗ ಈ ರೀತಿಯ ಘಟನೆಗೆಳು ಸಂಭವಿಸುತ್ತವೆ. ಅದು ಸಾಮಾನ್ಯ ಕೂಡ. ನಿನ್ನ ಶೈಕ್ಷಣಿಕ ಪ್ರಗತಿ/ದಾಖಲೆ ಅತ್ಯುತ್ತಮವಾಗಿದೆ. ಒಂದು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರು ಮತ್ತು ಆ ದೇವರು ನಿನಗೆ ಉತ್ತಮವಾದುದನ್ನೇ ನೀಡುತ್ತಾನೆ. ನಿನ್ನ ಮನದಲ್ಲಿ ಪ್ರೆಶ್ನೆಗಳಿರಬಹುದು. ಇತರರಿಗಿಂತ ನಾನೇಗೆ ಹಿಂದುಳಿದೆ? ಎಂದು.  ಯಾರಿಗೆ ತಿಳಿದಿದೆ-ಇದು ನಿನ್ನ ಜೀವನದ ತಿರುವು ಪಡೆಯುವ ವೇದಿಕೆಗಳಾಗಿರಲೂಬಹುದು. ನಿನಗೆ ಉತ್ತಮ ಉದ್ಯೋಗ ಬೇಕಾದರೆ ಮುಂದಿನ ಕ್ಯಾಂಪಸ್ ನಲ್ಲಿ ಪ್ರಯತ್ನ ಮಾಡು. ಇಲ್ಲವಾದಲ್ಲಿ ಉನ್ನತ ಶಿಕ್ಷಣ ಮಾಡುವತ್ತ ಗಮನ ಹರಿಸು. ಯಾವುದೇ ರೀತಿಯ ಹಣದ ಸಮಸ್ಯೆಯಿಲ್ಲ. ಜೀವನದಲ್ಲಿ ಒಂದು ಬ್ರೇಕ್ ಬೇಕಾದರೆ ಮನೆಗೆ ಬಾ. ಬರುತ್ತೀಯಾ ? ಬರುವುದಾದರೆ ತಿಳಿಸು !. ಜಗತ್ತಿನ ಯಾವುದೇ ವ್ಯಕ್ತಿಯೊಡನೇ ನಿನ್ನನನ್ನು ನೀನು ಹೋಲಿಸಿಕೊಳ್ಳಬೇಡ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಜೀವನ ಮೌಲ್ಯವನ್ನು ಹೊಂದಿರುತ್ತಾನೆ. ಇದನ್ನು ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ. ನಿನಗೆ ಮುಂದೊಂದು ದಿನ ಉತ್ತಮ ಅವಕಾಶ ಸಿಕ್ಕೆ ಸಿಗುತ್ತದೆ. ದಯವಿಟ್ಟು ವಿಶ್ರಾಂತಿ ತೆಗೆದುಕೊ, ಚೆನ್ನಾಗಿ ಊಟ ಮಾಡು, ಅನ್ಯಾಯವನ್ನು ಮರೆತುಬಿಡು, ಜೀವನವನ್ನು ಆನಂದಿಸು. ಈ ಮೊದಲು ನಾನು ಕೂಡ ನನ್ನ ಮಗನಿಗೇನಾಯಿತು ಎಂದು ಆಲೋಚಿಸಿದೆ. ನಂತರ ನನ್ನ ಅನುಭವದ ಮೂಲಕ ತಿಳಿಯಿತು, ಆ ದೇವರು ಉತ್ತಮ ಅವಕಾಶ ನೀಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆ ಎಂದು. ನೀನೀಗ ವಿದ್ಯಾರ್ಥಿ ಜೀವನದಿಂದ ಜಗತ್ತಿಗೆ ಪ್ರವೇಶಿಸುತ್ತಿದ್ದಿಯಾ. ನಿನಗೀಗ ತಾಳ್ಮೆ ಮತ್ತು ಪರಿಣಾಮಕಾರಿ ಪ್ರಯತ್ನ ಬಹುಮುಖ್ಯವಾಗಿ ಬೇಕು. ಸೆಪ್ಟೆಂಬರ್ 30 ರ ಮೊದಲು ನಿನಗೆ ಉತ್ತಮ ಕೆಲಸ ಸಿಗುವುದು ಖಚಿತ.

ಮತೊಮ್ಮೆ ದಯವಿಟ್ಟು ಹಿಂದಿನ ಘಟನೆ ಮರೆತುಬಿಡು, ಖುಷಿಯಾಗಿರು, ಇಷ್ಟಪಟ್ಟಿದ್ದನ್ನು ತಿನ್ನು. ಚೆನ್ನಾಗಿ ಯೋಚಿಸು, ಅರಾಮಾದಾಯಕವಾಗಿ ನಿದ್ರಿಸು, ಇದು ನಿನ್ನ ಜೀವನದ ಅತೀ ಮುಖ್ಯ ಘಟ್ಟ, ಇತರರೊಂದಿಗೆ  ನಿನ್ನನ್ನು ನೀನು ಹೋಲಿಕೆ ಮಾಡಿಕೊಳ್ಳುವುದರೊಂದಿಗೆ ಜೀವನವನ್ನು ಹಾಳು ಮಾಡಿಕೊಳ್ಳಬೇಡ.

ಶುಭವಾಗಲಿ.

ಟ್ವೀಟ್ಟರ್ ನಲ್ಲಿ ಈ ಪೋಸ್ಟ್ ಶೇರ್ ಅದ ತಕ್ಷಣ 4500 ಕ್ಕಿಂತ ಹೆಚ್ಚು ಲೈಕ್ ಪಡೆದಿದ್ದು, ಹಲವರು ಕಮೆಂಟ್ಸ್ ಮೂಲಕ ಸುದರ್ಶನ್  ಅವರನ್ನು ಅಭಿನಂದಿಸಿದ್ದಾರೆ, ಈ ರೀತಿಯ ಬೆಂಬಲ ನೀಡುವ ತಂದೆ ಅಥವಾ ಸ್ನೇಹಿತರಿದ್ದಾಗ ನೀನು ಜೀವನದಲ್ಲಿ ಜಯಿಸಿದ್ದೀಯಾ ಎಂದೇ ಅರ್ಥ. ಉತ್ತಮ ವ್ಯಕ್ತಿಗಳು ನಮ್ಮ ಜೊತೆಗಿದ್ದಾಗ ಯಶಸ್ಸೆಂಬುದು ಹುಡುಕಿಕೊಂಡು ಬರುವುದು ಎಂದು ಒಬ್ಬರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.