![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 15, 2022, 10:32 AM IST
ಭುವನೇಶ್ವರ: ಏಳು ರಾಜ್ಯಗಳಲ್ಲಿ 14 ವಿವಾಹವಾಗಿದ್ದ 48 ವರ್ಷದ ಬಹುಪತ್ನಿ ಪ್ರೇಮಿಯನ್ನು ಸೋಮವಾರ ಒಡಿಶಾದ ಭುವನೇಶ್ವರದಲ್ಲಿ ಬಂಧಿಸಲಾಗಿದೆ.
ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಈ ವ್ಯಕ್ತಿ ಮಹಿಳೆಯರಿಂದ ಹಣ ದೋಚಿ ಓಡಿಹೋಗುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಬಂಧಿತ ವ್ಯಕ್ತಿ ಆರೋಪವನ್ನು ನಿರಾಕರಿಸಿದ್ದಾನೆ.
ಆರೋಪಿಯು 1982 ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದು, 2002 ರಲ್ಲಿ ಎರಡನೇ ವಿವಾಹವಾಗಿದ್ದ. ಈ ಎರಡು ಮದುವೆಗಳಿಂದ ಐದು ಮಕ್ಕಳನ್ನೂ ಪಡೆದಿದ್ದಾನೆ ಎಂದು ಭುವನೇಶ್ವರ ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ. 2002 ಮತ್ತು 2020 ರ ನಡುವೆ, ಅವರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಿದ್ದಾನೆ ಎಂದು ದಾಸ್ ಹೇಳಿದ್ದಾರೆ.
ಸದ್ಯ ಈ ಬಹುಪತ್ನಿ ವಲ್ಲಭ ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ತನ್ನ ಕೊನೆಯ ಪತ್ನಿಯೊಂದಿಗೆ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನೆಲೆಸಿದ್ದಾನೆ. ಆಕೆಗೆ ಹೇಗೋ ಆತನ ಹಿಂದಿನ ಮದುವೆಗಳ ಬಗ್ಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ:ಸಿನಿಮೀಯ ರೀತಿ ಕಳ್ಳತನ: ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ ಕಳವು
ಅವನು ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ, ಹೆಚ್ಚಾಗಿ ಮ್ಯಾಟ್ರಿಮೋನಲ್ ವೆಬ್‌ಸೈಟ್‌ಗಳಲ್ಲಿ ವಿಚ್ಛೇದಿತರಿಗೆ ಗಾಳ ಹಾಕಿ, ನಂತರ ಅವರನ್ನು ವಿವಾಹವಾಗಿ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.