ಬಾಪುವನ್ನು ರಕ್ಷಿಸಿದ್ದ ವ್ಯಕ್ತಿ ನಿಧನ
Team Udayavani, Jul 21, 2017, 5:15 AM IST
ಹೊಸದಿಲ್ಲಿ: ಇವರ ಹೆಸರು ಭಿಕು ದಾಜಿ ಭಿಲಾರೆ. ವಯಸ್ಸು 98 ವರ್ಷ. ಇವರು ಬುಧವಾರ ಮಹಾರಾಷ್ಟ್ರ ದಲ್ಲಿ ನಿಧನ ಹೊಂದಿದರು. ಭಿಕು ಅವರ ಸಾವು ಮುಖ್ಯವೆನಿಸಲು ಕಾರಣ- ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಭಿಕು ಅವರಿಗಿರುವ ನಂಟು. ಒಂದು ವೇಳೆ ಅಂದು ಭಿಕು ದಾಜಿ ಅವರು ಇಲ್ಲದೇ ಹೋಗಿದ್ದರೆ, ಬಾಪು ನಾಲ್ಕು ವರ್ಷ ಮೊದಲೇ ನಮ್ಮಿಂದ ದೂರಾಗಿರುತ್ತಿದ್ದರು!
1948ರ ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯ ವರನ್ನು ಗುಂಡಿಕ್ಕಿ ಕೊಂದ ಎಂಬುದಷ್ಟೇ ನಮಗೆ ಗೊತ್ತು. ಆದರೆ ಈ ಘಟನೆಗೂ ವರ್ಷಗಳ ಹಿಂದೆ ಇದೇ ಗೋಡ್ಸೆ, ಬಾಪುವನ್ನು ಕೊಲ್ಲಲು ಯತ್ನಿಸಿದ್ದ ಎಂಬುದು, ಈ ವೇಳೆ ಭಿಕು ಅವರು ಗೋಡ್ಸೆಯನ್ನು ತಡೆದು ಗಾಂಧೀಜಿಯ ಜೀವ ಉಳಿಸಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
“ಕ್ವಿಟ್ ಇಂಡಿಯಾ ಚಳವಳಿ ವೇಳೆ ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಮಹಾತ್ಮಾ ಗಾಂಧಿ, ಪುಣೆಯಲ್ಲಿನ ಅಗಾ ಖಾನ್ ಅರಮನೆಯ ಜೈಲಿನಿಂದ ಬಿಡುಗಡೆಯಾದ ಅನಂತರ 1944ರ ಜುಲೈ ತಿಂಗಳಲ್ಲಿ ಪಂಚಗಾನಿಗೆ ಭೇಟಿ ನೀಡಿ, ಅಲ್ಲೇ ತಂಗಿದ್ದರು. ಅಂದು ಸಂಜೆ ಶಾಲೆಯೊಂದರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸಭೆ ನಡೆಯಲಿತ್ತು. ಈ ವೇಳೆ ಚೂರಿ ಹಿಡಿದುಕೊಂಡು ತನ್ನ ಸಹಚರರೊಂದಿಗೆ ಗಾಂಧೀಜಿಯತ್ತ ನುಗ್ಗುತ್ತಿದ್ದ ಗೋಡ್ಸೆ ಯನ್ನು 25 ವರ್ಷದ ಯುವಕ ಭಿಕು ತಡೆದಿದ್ದರು. ಜತೆಗೆ ಬಾಪುವನ್ನು ಕೊಲ್ಲುವ ಗೋಡ್ಸೆ ಮತ್ತವನ ಸಹಚರರ ಸಂಚನ್ನು ವಿಫಲಗೊಳಿಸಿದ್ದರು. ಹೀಗೆ ಬಾಪುವನ್ನು ರಕ್ಷಿಸಿದ್ದ ಭಿಕು ಬುಧವಾರ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಕಷ್ಟು ಜನಪ್ರತಿನಿಧಿಗಳು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.