ಅಗ್ನಿಕುಂಡ,ಶಿರಚ್ಛೇದ.. ದೇವರಿಗಾಗಿ ತಮ್ಮ ಶಿರವನ್ನೇ ಅರ್ಪಿಸಿ ದೈವ ಭಕ್ತಿ ಮೆರೆದ ದಂಪತಿ.!
Team Udayavani, Apr 17, 2023, 8:59 AM IST
ರಾಜ್ ಕೋಟ್: ಅಪಾರ ದೈವ ಭಕ್ತಿಯ ಹೊಂದಿದ್ದ ದಂಪತಿಯೊಂದು ತಮ್ಮ ಶಿರವನ್ನೇ ದೇವರಿಗೆ ಅರ್ಪಿಸಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹೇಮುಭಾಯಿ ಮಕ್ವಾನಾ (38) ಮತ್ತು ಅವರ ಪತ್ನಿ ಹಂಸಾಬೆನ್ (35) ಮೃತ ದಂಪತಿ.
ಹೇಮುಭಾಯಿ ಮಕ್ವಾನಾ ಮತ್ತು ಅವರ ಪತ್ನಿ ಹಂಸಾಬೆನ್ ಅಪಾರ ದೈವ ಭಕ್ತಿಯನ್ನು ಹೊಂದಿದ್ದರು. ದೇವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದವಿದ್ದ ದಂಪತಿ, ತಮ್ಮ ಜೀವವನ್ನೇ ದೇವರಿಗಾಗಿ ಅರ್ಪಿಸಿದ್ದಾರೆ.
ತಮ್ಮ ಗುಡಿಸಲಿನಲ್ಲಿ ದಂಪತಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದರು. ದೇವರಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದ್ದಾರೆ. ತಮ್ಮ ಮನೆಯಲ್ಲೇ ಒಂದು ಶಿರಚ್ಛೇದ ಯಂತ್ರವನ್ನು ತಯಾರಿಸಿದ್ದಾರೆ. ಆ ಬಳಿಕ ಒಂದು ಅಗ್ನಿಕುಂಡವನ್ನು ಮಾಡಿದ್ದಾರೆ. ಶಿರಚ್ಛೇದದ ಯಂತ್ರಕ್ಕೆ ಒಂದು ಹಗ್ಗವನ್ನು ಕಟ್ಟಿದ್ದಾರೆ. ಹಗ್ಗ ಎಳೆದರೆ ಕಟ್ಟಿದ್ದ ಬ್ಲೇಡ್ ತಮ್ಮ ಶಿರಕ್ಕೆ ಬೀಳುತ್ತದೆ. ತಮ್ಮ ಶಿರ ಅಗ್ನಿಕುಂಡಕ್ಕೆ ಬೀಳಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಗಳು ಹಗ್ಗವನ್ನು ಎಳೆದಿದ್ದಾರೆ. ಆಗ ಚೂಪಾದ ಬೃಹತ್ ಬ್ಲೇಡ್ ವೊಂದು ಅವರ ಕುತ್ತಿಗೆಗೆ ಬಂದು ತಾಗಿದ ಪರಿಣಾಮ ಅವರ ಶಿರ ದೇಹದಿಂದ ಬೇರ್ಪಟ್ಟು ನೇರವಾಗಿ ಅಗ್ನಿಕುಂಡಕ್ಕೆ ಹೋಗಿ ಉರುಳಿ ಬಿದ್ದಿದೆ. ಆ ಮೂಲಕ ದಂಪತಿಗಳು ತಮ್ಮ ಪ್ರಾಣವನ್ನೇ ದೇವರ ಆಚರಣೆಯ ನೆಪದಲ್ಲಿ ಅರ್ಪಿಸಿದ್ದಾರೆ.
ಘಟನೆ ಶನಿವಾರ ರಾತ್ರಿ ಅಥವಾ ಭಾನುವಾರ ಮಧಾಹ್ನದ ವೇಳೆ ನಡೆದಿರಬಹುದು. ಸ್ಥಳದಿಂದ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬದವರಿಗೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಂಪತಿಯ ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.