ಕುರುಕಲು ತಿಂಡಿಗೆ ಶೀಘ್ರ ಜಂಕ್‌ಫುಡ್ ಲೇಬಲ್ ಕಡ್ಡಾಯ
Team Udayavani, Jan 22, 2017, 9:41 AM IST
ಹೊಸದಿಲ್ಲಿ: ಇನ್ನು ಮುಂದೆ ನೀವು ಜನಪ್ರಿಯ ಬ್ರಾಂಡ್‌ನ ಪ್ಯಾಕೆಟ್‌ಗಳಲ್ಲಿರುವ ಚಿಪ್ಸ್ ಮತ್ತು ಇತರ ಕುರುಕುಲು ತಿಂಡಿಗಳನ್ನು ಖರೀದಿಸುವ ಮೊದಲು “ಜಂಕ್ ಫುಡ್’ ಎಂಬ ಲೇಬಲ್ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ.
ಹೆಚ್ಚಿನ ಪ್ರಮಾಣದಲ್ಲಿ ಫ್ಯಾಟ್, ಉಪ್ಪು, ಸಕ್ಕರೆ ಇರುವ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಇಂಥ ಲೇಬಲ್ ಅಳವಡಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಶೀಘ್ರ ಆದೇಶ ಹೊರಡಿಸಲಿದೆ. ಈ ಮೂಲಕ ಪೌಷ್ಟಿಕ ಆರೋಗ್ಯಪೂರ್ಣ ಆಹಾರ ಮತ್ತು ಆರೋಗ್ಯಕ್ಕೆ ಪೂರಕವಲ್ಲದ ಆಹಾರ ಎಂಬುದನ್ನು ವರ್ಗೀಕರಿಸಲು ನೆರವಾಗಲಿದೆ. “ಉಪ್ಪು, ಫ್ಯಾಟ್, ಸಕ್ಕರೆ ಪ್ರಮಾಣಗಳನ್ನು ಆಧರಿಸಿ ತಂಪು ಪಾನೀಯ, ಆಹಾರಗಳಿಗೆ ಇಂಥ ವರ್ಗೀಕರಣ ನೀಡಲಾಗುತ್ತದೆ. ಭಾರತೀಯ ಆಹಾರ ಪದ್ಧತಿ ಮತ್ತು ಅಂತಾರಾಷ್ಟ್ರೀಯ ಆಹಾರ ವ್ಯವಸ್ಥೆಯನ್ನು ಅನುಸರಿಸಿ ನಿಯಮ ಜಾರಿ ಮಾಡಲಾಗುತ್ತದೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಅಗರ್ವಾಲ್ ಹೇಳಿದ್ದಾರೆ. ಪ್ರಾಧಿಕಾರ ಯಾವ ಉತ್ಪನ್ನಗಳು ಎಷ್ಟು ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸುತ್ತಿದೆ. ಆಯಾ ಆಹಾರದ ಉತ್ಪನ್ನಗಳನ್ನು ಉತ್ಪಾದಿಸುವ ಕಂಪೆನಿಗಳು ಫ್ಯಾಟ್ ಪ್ರಮಾಣ ಎಷ್ಟಿದೆ ಎಂಬ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಬೇಕಾಗುತ್ತದೆ. ಯಾವ ಆಹಾರ ಜಂಕ್ ಪುಡ್ ಆಗಿದೆ ಎಂಬ ಬಗ್ಗೆ ಪ್ರಕಟಣೆ ಹೊರಡಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.