ಹಿಮದ ಮಡಿಲಲ್ಲಿ ಸ್ತ್ರೀ ಶಕ್ತಿ
Team Udayavani, Mar 20, 2018, 6:00 AM IST
ನವದೆಹಲಿ: ಹಿಮಚ್ಛಾದಿತ ಪ್ರದೇಶದಲ್ಲಿ ಒಂದು ದಿನವನ್ನೂ ಕಳೆಯದ ಭಾರತದ ಮಹಿಳಾ ವಿಜ್ಞಾನಿ ಮಂಗಳಾ ಮಣಿ, ನಿರ್ದಿಷ್ಟ ಪ್ರಯೋಗಕ್ಕಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಅಂಟಾರ್ಟಿಕಾದಲ್ಲಿ ಉಳಿಯುವ ಮೂಲಕ ಸ್ತ್ರೀ ಶಕ್ತಿಯ ಹೊಸ ಸಾಧ್ಯತೆಯನ್ನೂ ಸಾಬೀತುಪಡಿಸಿದ್ದಾರೆ.
ಭೂ ಮಂಡಲದಲ್ಲೇ ಅತ್ಯಂತ ಕಡಿಮೆ ಅಂದರೆ, ಉಷ್ಣಾಂಶ “- 90 ಡಿಗ್ರಿ ಸೆಲ್ಸಿಯಸ್’ ಇರುವ ಅಂಟಾರ್ಟಿಕಾದ ಚಳಿಗಾಲದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಲೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ), 23 ಜನರ ವಿಜ್ಞಾನಿಗಳ ತಂಡವನ್ನು ಕಳುಹಿಸಿಕೊಟ್ಟಿತ್ತು. ಆ ತಂಡದಲ್ಲಿದ್ದ ಏಕೈಕ ಮಹಿಳೆ ಮಂಗಳಾ. 2016ರಿಂದ ಮಧ್ಯಭಾಗದಿಂದ 2017ರ ಅಂತ್ಯದವರೆಗೆ, 403 ದಿನಗಳ ಕಾಲ ಮಂಗಳಾ ತಮ್ಮ ತಂಡದ ಜತೆಯಲ್ಲಿದ್ದರು.
“ಅಂಟಾರ್ಟಿಕಾದ ಇಸ್ರೋದ ಕೇಂದ್ರವಾದ “ಭಾರತಿ’ಯಲ್ಲೇ ತಂಡವನ್ನು ಉಳಿಸಲಾಗಿತ್ತು. ಪ್ರತಿನಿತ್ಯ ಹೊರಗಡೆ ಹೋಗುವುದೇ ಕಷ್ಟವಾಗಿತ್ತು. ಪೋಲಾರ್ ಜ್ಯಾಕೆಟ್‌ಗಳನ್ನು ಧರಿಸಿ, ಅಧ್ಯಯನಕ್ಕಾಗಿ 2-3 ಗಂಟೆಗಳ ಕಾಲ ಹೋಗಿದ್ದರೂ, ಬೇಗನೇ ಕೇಂದ್ರಕ್ಕೆ ಹಿಂದಿರುಗಿ “ವಾರ್ಮ್-ಅಪ್’ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ. ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ರಷ್ಯಾ, ಚೀನಾದ ತಂಡಗಳು ಅಲ್ಲಿಗೆ ಬಂದಿದ್ದರೂ, ಮಹಿಳಾ ಸದಸ್ಯರೇ ಇರಲಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.