ಸಾಗರದ ಪಾಲಾಗಲಿದೆಯೇ ಮಂಗಳೂರು?
Team Udayavani, Nov 17, 2017, 6:00 AM IST
ಹೊಸದಿಲ್ಲಿ: ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ನೀರಿನ ಮಟ್ಟ ಏರಿಕೆ ಯಾದರೆ ಭಾರತದಲ್ಲಿ ಮೊದಲು ಮುಳುಗುವ ನಗರವೆಂದರೆ ಅದು ಮಂಗಳೂರು!
ತಾಪಮಾನ ಏರಿಕೆಯಿಂದ ಅಂಟಾರ್ಟಿಕಾ ಮತ್ತು ಗ್ರೀನ್‌ಲಾÂಂಡ್‌ನಲ್ಲಿರುವ ನೀರ್ಗಲ್ಲು ಕರಗಲು ಶುರುವಾಗಿದ್ದು, ಇದು ಹೀಗೆಯೇ ಮುಂದುವರಿದರೆ ಇಡೀ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನಾಸಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ದಿಂದಾಗಿ ಮೊದಲು ಮುಳುಗುವ ನಗರಗಳನ್ನು ಪತ್ತೆಹಚ್ಚುವುದಕ್ಕಾಗಿಯೇ ನಾಸಾ ಗ್ರೇಡಿಯಂಟ್ ಫಿಂಗರ್‌ಪ್ರಿಂಟ್ ಮ್ಯಾಪಿಂಗ್ (ಜಿಎಫ್ಎಂ) ಎಂಬ ಸಾಧನ ರೂಪಿಸಿದೆ. ಇದರಲ್ಲಿ ಜಗತ್ತಿನ ಪ್ರತಿ ಯೊಬ್ಬರು ತಮ್ಮ ತಮ್ಮ ನಗರಗಳ ಮುಳುಗಡೆ ಸ್ಥಿತಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದನ್ನು ಸಂಶೋಧಿಸಿದ ತಂಡದಲ್ಲಿ ಭಾರತದ ವಿಜ್ಞಾನಿ ಡಾ| ಸುರೇಂದ್ರ ಅಧಿಕಾರಿ ಅವರೂ ಇದ್ದು, ನಗರಗಳಿಗೆ ಇರುವ ಅಪಾಯದ ಬಗ್ಗೆ ಸ್ವತಃ ಅವರೇ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರೇ ಏಕೆ?: ಅಂಟಾರ್ಟಿಕಾ ಮತ್ತು ಗ್ರೀನ್‌ಲಾÂಂಡ್‌ನಲ್ಲಿ ಹಿಮ ಕರಗಿದೊಡನೆಯೇ ಇಡೀ ಭೂಮಿಯಲ್ಲಿರುವ ಎಲ್ಲ ಕರಾವಳಿ ನಗರಗಳು ಒಮ್ಮೆಗೇ ಮುಳುಗುವುದಿಲ್ಲ. ಇದಕ್ಕೆ ಸ್ಥಳೀಯ ಸಂಗತಿಗಳೂ ಕಾರಣವಾಗುತ್ತವೆ. ಭಾರತದ ಲೆಕ್ಕಾಚಾರದಲ್ಲಿ ಸ್ಥಳೀಯವಾಗಿ ಸಮುದ್ರದ ಮಟ್ಟ ಹೆಚ್ಚಿರುವುದು ಮಂಗಳೂರಿ ನಲ್ಲೇ. ಇಲ್ಲಿನ ಸಮುದ್ರ ಮಟ್ಟ 1.598 ಎಂ.ಎಂ. ಇದೆ. ಅದೇ ಮುಂಬಯಿಯಲ್ಲಿ ಸ್ಥಳೀಯವಾಗಿ ಸಮುದ್ರದ ಮಟ್ಟ 1.526 ಎಂ.ಎಂ. ಇದೆ. ಹೀಗಾಗಿ ಮುಂಬಯಿಗಿಂತ ಮೊದಲು ಮಂಗಳೂರು ನೀರು ಪಾಲಾಗುತ್ತದೆ ಎಂಬುದು ಈ ತಂಡದ ತಜ್ಞರ ಮಾತು.
ಜತೆಗೆ ಅಂಟಾರ್ಟಿಕಾ ಇರಲಿ ಅಥವಾ ಗ್ರೀನ್‌ಲಾÂಂಡೇ ಇರಲಿ, ಇಲ್ಲಿನ ಹಿಮ ಕರಗುವುದರಿಂದ ಮಂಗಳೂರಿಗೆ ಅಪಾಯ ಖಾತ್ರಿ. ಆದರೆ ಅಂಟಾರ್ಟಿಕಾದ ಪಶ್ಚಿಮ ಭಾಗ ಮತ್ತು ಗ್ರೀನ್‌ಲಾÂಂಡ್‌ನ ದಕ್ಷಿಣ ಭಾಗದ ಹಿಮ ಪದರಗಳು ಕರಗಿದರೆ ಮಾತ್ರ ಇನ್ನೂ ಹೆಚ್ಚಿನ ಅಪಾಯ ಕಾದಿದೆ ಎಂಬುದು ಈ ಸಂಶೋಧನೆಯ ಸಾರಾಂಶ.
ಮುಳುಗಡೆ ಹೇಗೆ?
ತಾಪಮಾನ ಏರಿಕೆಯಿಂದಾಗಿ ಹಿಮ ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗು ತ್ತದೆ ಎಂಬುದು ಈಗಾಗಲೇ ಗೊತ್ತಿರುವ ಸತ್ಯ. ಅಂದರೆ ಇಡೀ ಭೂಮಿಯ ಶೇ. 75 ರಷ್ಟು ಶುದ್ಧ ನೀರಿನ ಮಂಜುಗಡ್ಡೆ ಸಾಂದ್ರೀಕರಿಸಿರುವುದು ಗ್ರೀನ್‌ಲಾÂಂಡ್ ಮತ್ತು ಅಂಟಾರ್ಟಿಕಾದಲ್ಲೇ. ಈ ಹಿಮ ಈಗಾಗಲೇ ಕರಗಲು ಶುರುವಾಗಿದ್ದು ನಿಧಾನ ಗತಿಯಲ್ಲಿ ಸಮುದ್ರದ ನೀರೂ ಹೆಚ್ಚುತ್ತಿದೆ. ಆದರೆ ಗ್ರೀನ್‌ಲಾÂಂಡ್ ನಲ್ಲಿರುವ ಹಿಮ ಕರಗಿದರೆ ಯಾವ ಭಾಗ ಮುಳುಗುತ್ತದೆ ಅಥವಾ ಅಂಟಾರ್ಟಿಕಾ ದಲ್ಲಿರುವ ಹಿಮ ಕರಗಿದರೆ ಯಾವ ನಗರ ಗಳು ಮೊದಲು ಮುಳುಗುತ್ತವೆ ಎಂಬುದನ್ನು ಈ ಜಿಎಫ್ಎಂ ಸಾಧನ ತಿಳಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.