Mangaluru: ಕರಾವಳಿ ಕೆಥೋಲಿಕರಿಂದ ಮೃತರು, ಸಂತ ಭಕ್ತರ ವಿಶಿಷ್ಟ ಸ್ಮರಣೆ
ನ.1: ಸಮಸ್ತ ಸಂತಭಕ್ತರು; ನ.2: ಆಲ್ ಸೋಲ್ಸ್ ಡೇ ಆಚರಣೆ
Team Udayavani, Nov 1, 2024, 2:31 PM IST
ಮಂಗಳೂರು: ಗತಿಸಿದ ಕುಟುಂಬಸ್ಥರನ್ನು ಸ್ಮರಿಸುವ ಸಂಪ್ರದಾಯ ಎಲ್ಲ ಸಮುದಾಯದಲ್ಲೂ ಇದ್ದು, ಕೆಥೋಲಿಕರು ಇದನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ನ.2ರಂದು ಧರ್ಮಸಭೆಯಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ(ಆಲ್ ಸೋಲ್ಸ್ ಡೇ)ವನ್ನು ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಸಮಾಧಿಯಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಆಚರಿಸಲಾಗುತ್ತದೆ. ನಮ್ಮೊಂದಿಗಿದ್ದು ನಮ್ಮನ್ನು ಅಗಲಿದವರು ಅನೇಕರು ದೇವರ ವಾಕ್ಯದಂತೆ ನಡೆಯದೆ ಸ್ವರ್ಗಸ್ಥರಾಗದೇ ಶುದ್ಧೀಕರಣದ ಸ್ಥಳದಲ್ಲಿದ್ದು, ಅಂತಹ ಆತ್ಮಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ನ. 2ರಂದು ಪವಿತ್ರ ಸಭೆ, ಸಮಸ್ತ ಕೆಥೋಲಿಕರು ಪ್ರಾರ್ಥನೆ ಸಲ್ಲಿಸುತ್ತಾರೆ.
ಮರಣ ಹೊಂದಿದ ತಮ್ಮ ಕುಟುಂಬಸ್ಥರ ಸಮಾಧಿ (ಸಿಮೆಟ್ರಿ) ಸ್ಥಳಗಳನ್ನು ಶುಚಿಗೊಳಿಸಿ, ಅವುಗಳಿಗೆ ಹೂ ಅರ್ಪಿಸುವುದು, ದೀಪ, ಮೊಂಬತ್ತಿಗಳನ್ನಿಟ್ಟು ಸಾರ್ವತ್ರಿಕ ಪ್ರಾರ್ಥನೆ, ಧರ್ಮಗುರುಗಳಿಂದ ಆಶೀರ್ವಚನ ಹಾಗೂ ಶುದ್ಧೀಕರಣದ ಮೂಲಕ ಆತ್ಮಗಳನ್ನು ಸ್ಮರಿಸಲಾಗುತ್ತದೆ.
ಸಮಾಜದಲ್ಲಿ ಬಾಳಿ ಬದುಕಿದ ಸಂದರ್ಭದಲ್ಲಿ ಆದರ್ಶ ಜೀವನ ನಡೆಸಿದವರು ಸ್ವರ್ಗಸ್ಥರಾಗುತ್ತಾರೆ. ಉಳಿದ ಆತ್ಮಗಳು ಶುದ್ಧೀಕರಣ(ಪರ್ಗೆಟರಿ) ಸ್ಥಳದಲ್ಲಿರುತ್ತವೆ ಎನ್ನುವುದು ಕೆಥೋಲಿಕರ ನಂಬಿಕೆೆ. ಅಂಥ ಆತ್ಮಗಳು ಸ್ವರ್ಗ ಸೇರಲು ಅವರಿಗಾಗಿ ಸಮೂಹ ಪ್ರಾರ್ಥನೆ ನಡೆಸುವ ದಿನ.
ನ. 1 ಸಮಸ್ತ ಸಂತ ಭಕ್ತರ ದಿನ
ಪವಿತ್ರ ಸಭೆಯಿಂದ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ದೇವರ ಸಾಮ್ರಾಜ್ಯದಲ್ಲಿರುವ ಎಲ್ಲ ಸಂತ ಭಕ್ತರನ್ನು ನ.1ರಂದು ಸಾಮೂಹಿಕ ಪ್ರಾರ್ಥನೆ ಮೂಲಕ ಸ್ಮರಿಸುವ ದಿನವಾಗಿದ್ದು, ಅವರೊಡದೆ ದೇವರಿಗೆ ಸ್ತುತಿ ಸ್ತೋತ್ರ ಅರ್ಪಿಸಲಾಗುತ್ತದೆ. ಕೆಥೋಲಿಕ ಪವಿತ್ರ ಸಭೆಯಲ್ಲಿ ಅನೇಕ ಸಂತರನ್ನು ಪ್ರತ್ಯೇಕವಾಗಿ ಸ್ಮರಿಸಲಾಗುತ್ತದೆ. ಆದಾಗ್ಯೂ ಸ್ವರ್ಗಸ್ಥರಾಗಿ ಪ್ರತ್ಯೇಕ ದಿನದಂದು ಸ್ಮರಿಸದೇ ಇರುವ ಸಂತ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಜತೆಯಾಗಿ ಸ್ಮರಿಸುವ ದಿನವೇ ಸಮಸ್ತ ಸಂತಭಕ್ತರ ದಿನವಾಗಿದೆ. ಕೆಥೋಲಿಕರ ಪಾಲಿಗೆ ಇದು ಮಹಾ ಹಬ್ಬವೂ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.