Manisha Padhi: ಭಾರತದ ಮೊದಲ ಮಹಿಳಾ ಸಹಾಯಕಿ ಡಿ ಕ್ಯಾಂಪ್ ಆಗಿ ನೇಮಕಗೊಂಡ ಮನಿಶಾ ಪಾಧಿ
Team Udayavani, Dec 6, 2023, 11:57 AM IST
ಐಜ್ವಾಲ್: 2015ರ ಬ್ಯಾಚ್‌ನ ಭಾರತೀಯ ವಾಯುಪಡೆಯ (IAF) ಅಧಿಕಾರಿ ಮನಿಶಾ ಪಾಧಿ ಅವರನ್ನು ಮಿಜೋರಾಂ ರಾಜ್ಯಪಾಲ ಡಾ.ಹರಿಬಾಬು ಕಂಬಂಪತಿ ಅವರ ಸಹಾಯಕ-ಡಿ-ಕ್ಯಾಂಪ್ ಆಗಿ ನೇಮಿಸಲಾಯಿತು.
ಇದರೊಂದಿಗೆ ಅವರು ದೇಶದಲ್ಲಿ ರಾಜ್ಯಪಾಲರಿಗೆ ಸಹಾಯಕ-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡ ಮೊದಲ ಮಹಿಳಾ ಭಾರತೀಯ ಸಶಸ್ತ್ರ ಪಡೆ ಅಧಿಕಾರಿ ಎನಿಸಿಕೊಂಡಿದ್ದಾರೆ .
ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ನವೆಂಬರ್ 29 ರಂದು ರಾಜ್ಯದ ರಾಜಧಾನಿ ಐಜ್ವಾಲ್‌ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಎಡಿಸಿಯಾಗಿ ಸ್ಕ್ವಾಡ್ರನ್ ಲೀಡರ್ ಪಾಧಿ ಅವರನ್ನು ನೇಮಿಸಿದರು.
ನವೆಂಬರ್ 29 ರಂದು ರಾಜ್ಯಪಾಲರಿಗೆ ವರದಿ ಮಾಡುವ ಮೂಲಕ ಎಡಿಸಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಐಜ್ವಾಲ್‌ನಲ್ಲಿರುವ ರಾಜಭವನದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪಾಧಿ ಅವರನ್ನು ಪರಿಚಯಿಸಲಾಯಿತು.
ಮನಿಶಾ ಪಾಧಿ ಅವರ ನೇಮಕವು ಕೇವಲ ಮೈಲಿಗಲ್ಲು ಮಾತ್ರವಲ್ಲ, ಇದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮಹಿಳೆಯರ ಶಕ್ತಿಗೆ ಸಾಕ್ಷಿಯಾಗಿದೆ. ಈ ಗಮನಾರ್ಹ ಸಾಧನೆಯನ್ನು ಆಚರಿಸೋಣ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣವನ್ನು ಮುಂದುವರಿಸೋಣ ಎಂದು ಗವರ್ನರ್ ಹರಿಬಾಬು ಕಂಬಂಪಾಟಿ ಅವರು ಹೇಳಿದ್ದಾರೆ.
Squadron Leader Manisha Padhi appointed as Aide-De-Camp(ADC) to the Governor of Mizoram. Sqn Leader Manisha is India’s first Woman Indian Armed Forces officer to be appointed as Aide-De-Camp(ADC) to the Governor in the country: Governor of Mizoram
(Source: Office of Governor of… pic.twitter.com/3wsWuI5hBW
— ANI (@ANI) December 4, 2023
ಮನಿಶಾ ಪಾಧಿ ಅವರು ಒಡಿಶಾದ ಗಂಜಾಂ ಜಿಲ್ಲೆಯ ಬರ್ಹಾಂಪುರದವಳು. ಅವರು ಭುವನೇಶ್ವರದ ಸಿವಿ ರಾಮನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದರು. ಸದ್ಯ ಆಕೆಯ ಪೋಷಕರು ಕೂಡ ಭುವನೇಶ್ವರದಲ್ಲಿ ನೆಲೆಸಿದ್ದಾರೆ.
ಒಡಿಶಾ ಮೂಲದ ಮನೀಶಾ ಅವರು ಇದಕ್ಕೂ ಮೊದಲು ವಾಯುಪಡೆ, ಪುಣೆ, ಬೀದರ್ ಮತ್ತು ಭಟಿಂಡಾದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಮನಿಷಾ ಅವರ ಈ ಸಾಧನೆಗೆ ಇಡೀ ಊರೇ ಸಂಭ್ರಮಪಟ್ಟಿದೆ.
ಈ ವಿಶೇಷ ಸಂದರ್ಭದಲ್ಲಿ ಅಭಿನಂದಿಸಿದ ರಾಜ್ಯಪಾಲ ಡಾ. ಹರಿ ಬಾಬು ಕುಂಭಪತಿ, “ಸ್ಕಾಡ್ರನ್ ಲೀಡರ್ ಮನೀಶಾ ಪಾಧಿ ಅವರನ್ನು ಸಹಾಯಕಿಯಾಗಿ ನೇಮಕ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬರೆದಿದ್ದಾರೆ. ಮತ್ತಷ್ಟು ಶುಭ ಹಾರೈಸಿರುವ ಅವರು, ಮನಿಷಾಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
Hats off to PM Sri @narendramodi Ji and @DrHariBabuK Garu, Hon’ble Governor of Mizoram, for pioneering change with the appointment of Sqn. Leader Manisha Padhi as India’s first Woman Aide-De-Camp.
This landmark initiative not only showcases women’s empowerment but also reflects… pic.twitter.com/LNSHEIP6Ek
— Geetha Kothapalli (@Geethak_MP) November 29, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.