Manmohan Singh Funeral: ಮುಂದುವರಿದ ಬಿಜೆಪಿ-ಕಾಂಗ್ರೆಸ್ ರಾಜಕೀಯ ಜಟಾಪಟಿ!
ಸಿಂಗ್ಗೆ ಬಿಜೆಪಿ ಅವಮಾನ: ಕಾಂಗ್ರೆಸ್ ; ಸಾವಿನಲ್ಲೂ ಕೈ ರಾಜಕೀಯ: ಬಿಜೆಪಿ
Team Udayavani, Dec 30, 2024, 6:45 AM IST
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವಿನ ರಾಜಕೀಯ ಕೆಸರೆರ ಚಾಟ ಮುಂದುವರಿದಿದೆ.
“ಸಿಂಗ್ ಅಂತ್ಯಕ್ರಿಯೆ ನಡೆದ ನಿಗಮಬೋಧ್ ಘಾಟ್ ಅವ್ಯವಸ್ಥೆಗಳ ಆಗರವಾಗಿತ್ತು. ಅಂತಿಮ ವಿಧಿ ನಡೆಸಲು ಅವರ ಕುಟುಂಬಸ್ಥರಿಗೂ ಸರಿ ಯಾಗಿ ಆಸ್ಪದ ನೀಡದೇ ಬಿಜೆಪಿ ಸಿಂಗ್ರನ್ನು ಅವಮಾನಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನಾಚಿಕೆಗೇಡಿನ ರಾಜಕೀಯ ನಡೆಸುತ್ತಿದೆ. ಸಿಂಗ್ ಅವರ ಸಾವಿನಲ್ಲೂ ಅವರನ್ನು ಶೋಷಿಸುತ್ತಿದೆ. ನಮ್ಮಿಂದ ಅವ್ಯವಸ್ಥೆಯೂ ಜರಗಿಲ್ಲ” ಎಂದಿದ್ದಾರೆ.
ಕಾಂಗ್ರೆಸ್ ಆರೋಪ
-ಮೊದಲ ಸಾಲಲ್ಲಿ ಸಿಂಗ್ ಕುಟುಂಬಕ್ಕೆ ಬರೀ 3 ಕುರ್ಚಿ.
-ಸಿಂಗ್ ಪತ್ನಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವಾಗ ಮೋದಿ ನಿಂತು ಗೌರವ ಸಲ್ಲಿಸಲಿಲ್ಲ.
-ಡಾ| ಸಿಂಗ್ ಅಂತಿಮ ಯಾತ್ರೆಗೆ ಅಮಿತ್ ಶಾ ಬೆಂಗಾವಲು ಪಡೆ ಅಡ್ಡಿ. ಕುಟುಂಬಸ್ಥರ ಕಾರ್ ಪಾರ್ಕಿಂಗ್ಗೂ ಸ್ಥಳ ನೀಡಿಲ್ಲ.
-ಡಿಡಿ ಬಿಟ್ಟು ಬೇರೆ ಮಾಧ್ಯಮ ಗಳಿಗೆ ಪ್ರವೇಶ ನೀಡಲಿಲ್ಲ.
ಬಿಜೆಪಿ ತಿರುಗೇಟು?
-ಮೊದಲ ಸಾಲಿನಲ್ಲಿ 5 ಕುರ್ಚಿ, 2ನೇ ಸಾಲಲ್ಲಿ 8, 3 ಮತ್ತು 4ನೇ ಸಾಲು ಪೂರ್ಣ ಕುಟುಂಬಕ್ಕೆ ಮೀಸಲಿತ್ತು.
-ಸಕಲ ಸರಕಾರಿ ಗೌರವ ನೀಡಲಾಗಿತ್ತು. -ಕುಟುಂಬಕ್ಕೆ ಹಾಗೂ ಕ್ರಿಯಾ ವಿಧಿ ನಡೆಸುವವರಿಗೆ ಜಾಗ ನೀಡಲಾಗಿತ್ತು.
-ಮೆರವಣಿಗೆಗೂ ಯಾವುದೇ ತೊಡಕಾ ಗಿಲ್ಲ, ಕಾರ್ ಪಾರ್ಕಿಂಗ್ಗೂ ಜಾಗ ನಿಗದಿಪಡಿಸಿ, ಪಾಸ್ ವಿತರಿಸಲಾಗಿತ್ತು.
-ಸರಕಾರಕ್ಕೂ ಡಿಡಿ ಪ್ರಸಾರಕ್ಕೂ ಸಂಬಂಧ ಇಲ್ಲ. ಹಿಂದೆಯೂ ಸರಕಾರಿ ಕಾರ್ಯಕ್ರಮ ಡಿಡಿ ಮಾತ್ರವೇ ಪ್ರಸಾರ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.