ಆಗಸ ಅವಘಡ: ಹಾರಾಡುತ್ತಲೇ ಪ್ರಾಣ ಪಕ್ಷಿ ಹಾರಿ ಹೋದ ಹಲವು ಘಟನೆಗಳು…
Team Udayavani, Dec 9, 2021, 6:40 AM IST
ತ್ವರಿತ ಪ್ರಯಾಣಕ್ಕೆ ಆಗಸ ಯಾನ’ ಸೂಕ್ತ. ಮೋಡ ಸೀಳಿ ಮೇಲೇರುವ ವಿಮಾನ, ಹೆಲಿಕಾಪ್ಟರ್ ಪಯಣದ ಅನುಭವವೇ ವಿಶಿಷ್ಟ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಅವಘಡಗಳು ಎದೆ ಝಲ್ಲೆನಿಸುತ್ತಿವೆ. ನಭಕ್ಕೆ ಹಾರಿದ ಲೋಹದ ಹಕ್ಕಿಗಳು ಮರಳಿ ಭುವಿಗೆ ತಾಗುವವರೆಗೂ ಜೀವ ಕೈಯಲ್ಲೇ ಹಿಡಿದಿಡುವ ಸ್ಥಿತಿ ನಿರ್ಮಾಣವಾಗಿದೆ. ಏರ್ ಟ್ರಾಫಿಕ್’ ಮಧ್ಯೆಯೂ ಸುರಕ್ಷಿತವಾಗಿ ಗೂಡು ಸೇರುವುದು ಪ್ರಯಾಸ ಎನಿಸಿದೆ. ಆಗಸದಲ್ಲಿ ಹಾರಾಡುತ್ತಲೇ ಪ್ರಾಣ ಪಕ್ಷಿ ಹಾರಿ ಹೋದ ಹಲವು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.
ಸಂಜಯ ಗಾಂಧಿ
ಕಾಂಗ್ರೆಸ್ ಸಂಸದ, ಇಂದಿರಾ ಹಾಗೂ ಫಿರೋಜ್ ಗಾಂಧಿ ಪುತ್ರ ಸಂಜಯ ಗಾಂಧಿ 1980, ಜೂ.23ರಂದು ನವದೆಹಲಿಯ ಸಫªರ್‌ಜಂಗ್ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಆಗಸ ದುರಂತ’ದಲ್ಲಿ ಮೃತಪಟ್ಟಿದ್ದರು. ಸ್ವತಃ ವಿಮಾನ ಚಲಾಯಿಸುವ ಸಾಮರ್ಥ್ಯ ಹೊಂದಿದ್ದ ಸಂಜಯ ಗಾಂಧಿ, ದೆಹಲಿ ಫ್ಲೈಯಿಂಗ್ ಕ್ಲಬ್‌ನಿಂದ ಹೊಸ ಏರ್‌ಕ್ರಾಫ್ಟ್ ನಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ದುರಂತ ಸಂಭವಿಸಿತ್ತು. 8 ಸರ್ಜನ್‌ಗಳು ಸತತ ನಾಲ್ಕು ಗಂಟೆಗಳ ಕಾಲ ಅವರ ಮೃತದೇಹವನ್ನು ಹೊಂದಿಸಿ ಹೊಲಿಗೆ ಹಾಕಿದ್ದು ದುರಂತದ ಭೀಕರತೆಗೆ ಸಾಕ್ಷಿಯಾಗಿತ್ತು.
ವೈ.ಎಸ್.ರಾಜಶೇಖರ ರೆಡ್ಡಿ
ಅಖಂಡ ಆಂಧ್ರಪ್ರದೇಶ ಸಿಎಂ ಆಗಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ 2009, ಸೆ.2ರಂದು ಪಕ್ಷದ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು. ಕರ್ನೂಲ್ ಸಮೀ ಪದ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಬೆಲ್ 430 ಹೆಲಿಕಾಪ್ಟರ್ ಹವಾಮಾನ ವೈಪರೀತ್ಯ, ತಾಂತ್ರಿಕ ತೊಂದರೆಯಿಂದ ಪತನವಾ ಗಿತ್ತು. ದಟ್ಟ ಕಾನನದಲ್ಲಿ ದುರಂತ ಸಂಭವಿಸಿದ್ದರಿಂದ ಸತತ ಕಾರ್ಯಾಚರಣೆ ನಡೆಸಿ 27 ಗಂಟೆ ಬಳಿಕ ವೈಎಸ್‌ಆರ್ ಮೃತದೇಹ ಪತ್ತೆಯಾಗಿತ್ತು. ಜತೆಗಿದ್ದ ಮೂವರು ಕೂಡ ಅಸುನೀಗಿದ್ದರು.
ಜಿಎಂಸಿ ಬಾಲಯೋಗಿ
ಗಂಟಿ ಮೋಹನ ಚಂದ್ರ ಬಾಲಯೋಗಿ ಲೋಕಸಭೆ ಸ್ಪೀಕರ್ ಆಗಿದ್ದರು. 2002, ಮಾ.3ರಂದು ಆಂಧ್ರದ ಕೃಷ್ಣಾ ಜಿಲ್ಲೆಯ ಕೈಕಲೂರ್ ಬಳಿ ಬಳಿ ಸಂಭವಿಸಿದ ಬೆಲ್ 2006 ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟಿದ್ದಾರೆ.
ಮಾಧವರಾವ್ ಸಿಂಧಿಯಾ
ಗ್ವಾಲಿಯರ್ ಮಹಾರಾಜನ ಪುತ್ರ, ಸೋಲರಿಯದ ಸರದಾರ, ಸತತ 9 ಬಾರಿ ಲೋಕಸಭೆಗೆ ಆಯ್ಕೆಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದ ಮಾಧವರಾವ್ ಸಿಂಧಿಯಾ ಕಾಂಗ್ರೆಸ್ ಪಕ್ಷದ ಭಾವಿ ಪ್ರಧಾನಿ’ ಎಂದೇ ಪ್ರಸಿದ್ಧಿಯಾಗಿದ್ದರು. ಆದರೆ, 2002, ಸೆ.30ರಂದು ಪಕ್ಷದ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಖಾಸಗಿ ವಿಮಾನ (ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ90)ದಲ್ಲಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿ ಅಸುನೀಗಿದ್ದರು. ಜತೆಗಿದ್ದ ಮೂವರು ಪತ್ರಕರ್ತರು, ಆಪ್ತ ಕಾರ್ಯದರ್ಶಿ ಸೇರಿ ಎಂಟು ಜನ ಮೃತಪಟ್ಟಿದ್ದರು. ಮಾಧವರಾವ್ ಸಿಂಧಿಯಾ ಕೊರಳಲ್ಲಿ ಧರಿಸುತ್ತಿದ್ದ ದುರ್ಗಾ ಮಾತೆ ಲಾಕೆಟ್‌ನಿಂದ ಅವರ ಮೃತದೇಹ ಗುರುತಿಸಲಾಗಿತ್ತು!
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
ಮೋಹನ ಕುಮಾರಮಂಗಲಂ
ಕಾಂಗ್ರೆಸ್ ಹಾಗೂ ಸಿಪಿಐ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಮೋಹನ ಕುಮಾರಮಂಗಲಂ 1973, ಮೇ 31ರಂದು ಸಂಭವಿಸಿದ ಇಂಡಿಯನ್ ಏರ್‌ಲೈನ್ಸ್ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಅವಘಡದ ಭೀಕರತೆಗೆ ಹಲವರ ಮೃತದೇಹ ಕೂಡ ಪತ್ತೆಯಾಗಿರಲಿಲ್ಲ. ಕುಮಾರಮಂಗಲಂ ಅವರು ಧರಿಸುತ್ತಿದ್ದ ಶ್ರವಣ ಯಂತ್ರ ಹಾಗೂ ಬಳಸುತ್ತಿದ್ದ ಪಾರ್ಕರ್ ಪೆನ್‌ನಿಂದ ಗುರುತಿಸಲಾಗಿತ್ತು.
ನಟಿ ಸೌಂದರ್ಯ
ಪಂಚಭಾಷಾ ತಾರಾ ನಟಿ ಕೆ.ಎಸ್.ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಬೆಂಗಳೂರು ಮೂಲದ ಮೋಹಕ ನಟಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಸಿನಿಮಾ ಜತೆಗೆ ರಾಜಕೀಯ ನಂಟು ಹೊಂದಿದ್ದರು. 2004, ಏ.17ರಂದು ಬೆಂಗಳೂರಿನಿಂದ ಆಂಧ್ರದ ಕರೀಂನಗರಕ್ಕೆ ಬಿಜೆಪಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಜತೆಗಿದ್ದ ಅವರ ಸೋದರ ಅಮರನಾಥ ಕೂಡ ಮೃತಪಟ್ಟಿದ್ದರು.
ಡೋರ್ಜಿ ಖಂಡು
ಭಾರತೀಯ ಸೇನೆಯ ಗುಪ್ತಚರ ವಿಭಾಗದಲ್ಲಿ ಸುಮಾರು ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಡೋರ್ಜಿ ಖಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2011, ಏ.30ರಂದು ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಅವಘಡದಲ್ಲಿ ಅಸುನೀಗಿದ್ದರು. ದಟ್ಟ ಅರಣ್ಯದಲ್ಲಿ ದುರಂತ ಸಂಭವಿಸಿದ್ದರಿಂದ ಸತತ ಐದು ದಿನಗಳ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು.
ಹೋಮಿ ಜಹಾಂಗೀರ್ ಬಾಬಾ
ಭಾರತಕ್ಕೆ ಪರಮಾಣು ಶಕ್ತಿ’ ತುಂಬಿದ ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಬಾಬಾ ಸಾಧನೆಗಳ ಶಿಖರವನ್ನೇ ಏರಿದವರು. ಬ್ರಿಟನ್‌ನಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಎರಡನೇ ವಿಶ್ವ ಸಮರ ವೇಳೆ ಭಾರತಕ್ಕೆ ಬಂದವರು ವಾಪಸ್ ತೆರಳಲಿಲ್ಲ. ಐಐಎಸ್‌ಸಿಯಲ್ಲಿ ಕೆಲಸ ಆರಂಭಿಸಿ ಇಲ್ಲಿಯೇ ವಿವಿಧ ಹಂತಗಳಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದರು. 1966, ಜ|24ರಂದು ಪಶ್ಚಿಮ ಯುರೋಪ್‌ನ ಮೌಂಟ್ ಬ್ಲಾಂಕ್ ಬಳಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟರು. ಜಿನಿವಾ ಏರ್‌ಪೋರ್ಟ್ ಹಾಗೂ ಪೈಲಟ್ ನಡುವಿನ ಸಂಪರ್ಕ ಕೊರತೆಯಿಂದ ಈ ಅವ ಘಡ ಸಂಭವಿಸಿತು ಎನ್ನುವುದು ಘಟನೆ ಬಳಿಕ ಸಿಕ್ಕ ವಿವರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.