ರಾಜೀವ್ ರೀತಿಯಲ್ಲಿ ಮೋದಿ ಹತ್ಯೆಗೆ ಮಾವೋ ಸಂಚು ? ಪತ್ರ ಬಹಿರಂಗ
Team Udayavani, Jun 8, 2018, 3:55 PM IST
ಪುಣೆ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ರಾಜಕೀಯ ರೋಡ್ ಶೋ ಕಾರ್ಯಕ್ರಮದಲ್ಲಿ ಹತ್ಯೆಗೈಯುವ ಯೋಜನೆಯೊಂದನ್ನು ಮಾವೋ ಉಗ್ರರು ಚರ್ಚಿಸುತ್ತಿದ್ದಾರೆ ಎಂಬ ವಿಷಯ ಪುಣೆ ಪೊಲೀಸರಿಗೆ ದೊರಕಿರುವ ಪತ್ರವೊಂದರ ಭಾಗವಾಗಿ ಕಂಡುಬಂದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಪುಣೆ ಪೊಲೀಸರು ತಮ್ಮ ಕೈವಶವಾಗಿರುವ ಮಾವೋ ಉಗ್ರರ ಪತ್ರವೊಂದನ್ನು ಇಂದು ಶುಕ್ರವಾರ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದರು. ಮಾವೋ ಉಗ್ರರು ಬರೆದದ್ದನ್ನೆಲಾದ ಈ ಪತ್ರ 2017 ಎಪ್ರಿಲ್ 18ರ ದಿನಾಂಕವನ್ನು ಹೊಂದಿದ್ದು ಮಾವೋ ನಾಯಕ ಪ್ರಕಾಶ್ ಎಂಬಾತನನ್ನು ಸಂಬೋಧಿಸಿ ಬರೆಯಲಾಗಿದೆ ಮತ್ತು ‘R’ ಎಂಬ ಸಹಿಯನ್ನು ಹೊಂದಿದೆ.
ಪತ್ರದಲ್ಲಿ ಪ್ರಧಾನಿ ಮೋದಿ ಅವರ ಹತ್ಯಾ ಯೋಜನೆಯನ್ನು ಉಲ್ಲೇಖೀಸಲಾಗಿದ್ದು “ಮೋದಿ-ರಾಜ್’ ಕೊನೆಗೊಳಿಸುವ ಉದ್ದೇಶ ಹೊಂದಿದೆ. ಈಚಿನ ವಿದಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಗೆಲುವು ಸಾಧಿಸುತ್ತಿರುವುದೇ ಇದಕ್ಕೆ ಕಾರಣವೆಂದು ಪತ್ರದಲ್ಲಿ ಹೇಳಲಾಗಿದೆ.
ಈ ಪತ್ರವನ್ನು ವರ್ಷಕ್ಕೂ ಹಿಂದೆ ಬರೆಯಲಾಗಿದೆ ಮತ್ತು ಅನಂತರದಲ್ಲಿ ಪ್ರಧಾನಿ ಮೋದಿ ಅವರು ಮಾವೋ ಪೀಡಿತ ರಾಜ್ಯಗಳಾಗಿರುವ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವೆಡೆಗಳಲ್ಲಿ ರಾಜಕೀಯ ರೋಡ್ ಶೋ, ಸಭೆ, ಸಾರ್ವಜನಿಕ ಭಾಷಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.