ಫೇಸ್ಬುಕ್ ಪ್ರಿಯತಮೆ ಕೊಂದು ಸಮಾಧಿ ಕಟ್ಟಿದ ಭೂಪ!
Team Udayavani, Feb 4, 2017, 3:45 AM IST
ಭೋಪಾಲ್: ಸಾಮಾಜಿಕ ಜಾಲತಾಣದಲ್ಲಿ ಚಿಗುರಿದ ಸಂಬಂಧ ಪ್ರಿಯಕರನ ಮನೆಯಲ್ಲೇ ಸಮಾಧಿಯಾದ ಘಟನೆಯಿದು! ಭೋಪಾಲ್ ಹುಡುಗನೊಂದಿಗೆ ಲಿವಿಂಗ್ ಟುಗೆದರ್ ಆಗಿದ್ದ ಕೋಲ್ಕತ್ತಾದ ಆಕಾಂಕ್ಷಾ (28), ಪ್ರಿಯಕರನ ಮನೆಯಲ್ಲಿ ಹೂತು ಹೋಗಿ ಎರಡು ತಿಂಗಳೇ ಆಗಿವೆ! ಆದರೆ, ಆಕೆಯ ಹೆತ್ತವರು ಮಾತ್ರ ಮಗಳು ಅಮೆರಿಕಕ್ಕೆ ಹೋಗಿದ್ದಾಳೆಂದೇ ನಂಬಿ ಕುಳಿತಿದ್ದಾರೆ!
ಫೇಸ್ಬುಕ್ಕಲ್ಲಿ ಪರಿಚಯವಾದ ಉದಯನ್ ದಾಸ್ ಜತೆ ಆಕಾಂಕ್ಷಾ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ, ಕಳೆದ ಡಿಸೆಂಬರ್ನಲ್ಲಿ ಪ್ರೀತಿಯಲ್ಲಿ ಬಿರುಕು ಮೂಡಿ, ಉದಯನ್ ಈಕೆಯನ್ನು ಬರ್ಬರವಾಗಿ ಕೊಂದು ತನ್ನ ಮೊದಲನೇ ಮಹಡಿಯ ಮನೆಯೊಳಗೆ ಸಮಾಧಿ ಮಾಡಿದ್ದ. ಈ ಪ್ರಕರಣ ಭೇದಿಸಿದ ಪಶ್ಚಿಮ ಬಂಗಾಳ ಪೊಲೀಸರು ಉದಯನ್ನನ್ನು ಬಂಧಿಸಿದ್ದಾರೆ.
6 ತಾಸು ಕಾರ್ಯಾಚರಣೆ: ಆಕಾಂಕ್ಷ ಶವವನ್ನು ಉದಯನ್ ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ, ಮತ್ತೂಂದು ಪೆಟ್ಟಿಗೆಯಲ್ಲಿ ಭದ್ರ ಮಾಡಿ, ಅದರ ಮೇಲೆ ಸಿಮೆಂಟ್ ಕಟ್ಟೆ ಕಟ್ಟಿ, ಅಮೃತಶಿಲೆ ಸಮಾಧಿ ನಿರ್ಮಿಸಿದ್ದ. ಇದನ್ನು ಒಡೆಯಲು ಪೊಲೀಸರಿಗೆ 6 ತಾಸು ಬೇಕಾಗಿತ್ತು. ಆಕಾಂಕ್ಷಳ ಬಗ್ಗೆ ಶೋಧ ನಡೆಸಿದ್ದ ಪೊಲೀಸರು ಫೇಸ್ಬುಕ್ ಮೂಲಕವೇ ಜಾಗ ಮತ್ತೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.