![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 26, 2022, 8:16 PM IST
ತಿರುವನಂತಪುರ: ಕೇರಳದ ಸಿಎಸ್‌ಐ ಚರ್ಚ್‌ನ ನಿರ್ವಾಹಕ ಮತ್ತು ದಕ್ಷಿಣ ಕೇರಳ ಡಯೋಸಿಸ್ (ಎಸ್‌ಕೆಡಿ) ಬಿಷಪ್ ಎ.ಧರ್ಮರಾಜ್ ರಸಲಂ ಅವರ ಮನೆ ಮತ್ತು ಕಚೇರಿಗಳ ಮೇಲೆ ಕೊಚ್ಚಿಯ ಜಾರಿ ನಿರ್ದೇಶನಾಲಯ ಕಚೇರಿಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಡಯೋಸಿಸ್‌ನ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡಲು ಕ್ಯಾಪಿಟೇಶನ್ ಶುಲ್ಕವನ್ನು ಪಡೆದಿರುವ ಮತ್ತು ದತ್ತಿಗಾಗಿ ಸಂಗ್ರಹಿಸಲಾದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಬಿಷಪ್ ಮನೆ, ಕಚೇರಿಗಳಲ್ಲಿ ಮ್ಯಾರಥಾನ್ ಶೋಧ ಕಾರ್ಯ ನಡೆಸಲಾಗಿದೆ.
ಒಟ್ಟು 13 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು, ಇವರ ಮನೆ, ಕಚೇರಿ ಮಾತ್ರವಲ್ಲದೇ, ಏಕಕಾಲಕ್ಕೆ ಸಿಎಸ್‌ಐ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಬೆನ್ನೆಟ್ ಅಬ್ರಹಾಂ, ಡಯೋಸಿಸ್ ಆಡಳಿತಾತ್ಮಕ ಕಾರ್ಯದರ್ಶಿ ಟಿಟಿ ಪ್ರವೀಣ್ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಬಿಷಪ್ ಪರ ಮತ್ತು ವಿರೋಧಿಗಳ ಗುಂಪು ಅವರ ಮನೆಯ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದು, ಪರಸ್ಪರ ಪರ-ವಿರೋಧ ಘೋಷಣೆಗಳನ್ನೂ ಕೂಗಿದ್ದಾರೆ.
ಆರ್ಚ್‌ಬಿಷಪ್ ರಾಜೀನಾಮೆ ಕೇಳಿದ ವ್ಯಾಟಿಕನ್
ಸಾಮೂಹಿಕ ಪ್ರಾರ್ಥನೆ(ಮಾಸ್) ವೇಳೆ ಸಮಾನ ವಿಧಾನವನ್ನು ಪಾಲಿಸುವಂತೆ ಸೂಚಿಸಿದ್ದರೂ ಅದನ್ನು ಜಾರಿ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಾಟಿಕನ್ ಕೇರಳದ ಎರ್ನಾಕುಳಂ ಆರ್ಚ್‌ಬಿಷಪ್ ಆ್ಯಂಟನಿ ಕರಿಯಿಲ್ ಅವರ ರಾಜೀನಾಮೆ ಕೇಳಿದೆ. ವ್ಯಾಟಿಕನ್‌ನಡಿ ಬರುವ ಪ್ರಮುಖ ಚರ್ಚುಗಳಲ್ಲಿ ಒಂದಾದ ಕೇರಳ ಮೂಲದ ಸೈರೋ ಮಲಬಾರ್ ಚರ್ಚ್ ಕಳೆದ ವರ್ಷದ ನವೆಂಬರ್‌ನಿಂದಲೇ ಎಲ್ಲ ಡಯೋಸಿಸ್‌ನಲ್ಲೂ ಸಮಾನ ಮಾದರಿಯ ಮಾಸ್ ಅನ್ನು ಪರಿಚಯಿಸಿತ್ತು. ಆದರೆ, ಅದನ್ನು ಪಾಲಿಸದ ಕಾರಣ ಕರಿಯಿಲ್‌ರನ್ನು ತೆಗೆದುಹಾಕಲು ವ್ಯಾಟಿಕನ್ ನಿರ್ಧರಿಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.