ಓಮ್ನಿ ಬಳಿಕ ಜಿಪ್ಸಿ ಉತ್ಪಾದನೆ ಸ್ಥಗಿತಕ್ಕೆ ಮಾರುತಿ ನಿರ್ಧಾರ
Team Udayavani, Nov 15, 2018, 6:59 AM IST
ಹೊಸದಿಲ್ಲಿ: ಓಮ್ನಿ ವ್ಯಾನ್ ಉತ್ಪಾದನೆ ಸ್ಥಗಿತಗೊಳಿಸುವುದಕ್ಕೆ ಈಗಾಗಲೇ ನಿರ್ಧರಿಸಿರುವ ಮಾರುತಿ ಸುಜುಕಿ ಮತ್ತೂಂದು ಮಹತ್ವ ಕ್ರಮಕ್ಕೆ ಮುಂದಾಗಿದೆ. 2019ರ ಏಪ್ರಿಲ್ ಬಳಿಕ ತನ್ನ ಮತ್ತೂಂದು ಜನಪ್ರಿಯ ವಾಹನ ಮಾರುತಿ ಜಿಪ್ಸಿ ಮಾರಾಟ ಸ್ಥಗಿತ ಗೊಳಿಸಲಿದೆ. “ದ ಕಿಂಗ್ ಆಫ್ ರೋಡ್ಸ್’ ಎಂಬ ಹೆಗ್ಗಳಿಕೆಯನ್ನು ಅದರ ಬಳಕೆದಾರರಿಂದ ಪಡೆದುಕೊಂಡ ಈ ವಾಹನ 1985ರಲ್ಲಿ ಉತ್ಪಾದನೆ ಆರಂಭವಾಗಿತ್ತು. ಜಪಾನ್ ಮತ್ತು ದಕ್ಷಿಣ ಏಷ್ಯಾ ಮಾರುಕಟ್ಟೆಗಳಲ್ಲಿ ಜನಪ್ರಿಯತೆ ಪಡೆದಿತ್ತು. ಸದ್ಯ ಮಾರುತಿ ಜಿಪ್ಸಿ ಬಿಎಸ್ 4, 1.3 ಲೀಟರ್ ಲೀಟರ್ ಡಿರೈವೇಟಿವ್ ಜಿ.13 ಬಿಎ ಎಂಜಿನ್ ಹೊಂದಿದೆ.
2019ರಲ್ಲಿ ವಾಹನಗಳಲ್ಲಿ ಬಿಎಸ್ 6 ಪರಿಸರಾತ್ಮಕ ಕ್ರಮ, ಎಬಿಎಸ್ ಮತ್ತು ಇತರ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂಬ ನಿಮಯಗಳ ಹಿನ್ನೆಲೆಯಲ್ಲಿ ಜಿಪ್ಸಿಯನ್ನು ಅಪ್‌ಡೇಟ್ ಮಾಡದೆ ಇರಲು ನಿರ್ಧರಿಸಲಾಗಿದೆ. ಹೀಗಾಗಿ ಅದನ್ನು ಖರೀದಿಸಬೇಕೆಂದು ಬಯಸುವವರು ಡಿಸೆಂಬರ್ ಅಥವಾ ಜನವರಿ ಒಳಗಾಗಿ ಬುಕಿಂಗ್ ಮಾಡಬೇಕು. ಕಳೆದ ವರ್ಷದ ಏಪ್ರಿಲ್‌ನಿಂದ ಅದರ ಮಾರಾಟವೂ ಇಳಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.