ದೇಶದಲ್ಲಿ ಕಾರುಗಳ ಮಾರುಕಟ್ಟೆ ಕುಸಿತ, ಈಗ ಮಾರುತಿ ಸುಜುಕಿ ಸರದಿ
Team Udayavani, Aug 1, 2019, 7:00 PM IST
ಮುಂಬೈ: ಭಾರತದ ಅತೀ ದೊಡ್ಡ ಕಾರು ತಯಾರಿಕೆ ಕಂಪನಿ ಮಾರುತಿ ಸುಜುಕಿ ಜುಲೈ ತಿಂಗಳಲ್ಲಿ ಶೇ. 36.2 ರಷ್ಟು ಕಾರು ಮಾರಾಟ ಕುಸಿತ ಕಂಡಿರುವುದಾಗಿ ಸಂಸ್ಥೆ ಹೇಳಿದೆ. ಸಂಸ್ಥೆಯ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷ ಭಾರೀ ಕುಸಿತ ಕಂಡು ಬಂದಿದೆ. 1,54,150 ಯೂನಿಟ್ನಿಂದ 98,210 ಕ್ಕೆ ಕುಸಿತ ಕಂಡಿದ್ದು, ಕುಸಿತದ ಪ್ರಮಾಣ 36.3ರಷ್ಟಿದೆ.
ವಿಶೇಷವಾಗಿ ಪುಟ್ಟ ಕಾರುಗಳತ್ತ ಜನರು ಮನಸ್ಸು ಮಾಡುತ್ತಿದ್ದರು. ಆದರೆ ಈಗ ಅವುಗಳನ್ನು ಕೊಂಡುಕೊಳ್ಳಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಸಣ್ಣ ಗಾತ್ರದ ಕಾರುಗಳಾದ ಆಲ್ಟೋ, ಹಳೆ ಮಾದರಿಯ ವ್ಯಾಗ್ನರ್ಗಳು ಸೇರಿದಂತೆ ಶೇ .69.3 ಇಳಿಕೆ ಕಂಡು ಬಂದಿದೆ. ಇನ್ನು ಇತ್ತೀಚೆಗೆ ಮಾರುಕಟ್ಟೆ ಕಂಡ ಹೊಸ ವ್ಯಾಗ್ನರ್, ಇಗ್ನಿಸ್, ಬಲೆನೋ ಮತ್ತು ಸ್ವಿಫ್ಟ್ ಕಾರುಗಳ ಮಾರುಕಟ್ಟೆಯಲ್ಲೂ ಶೇ.23ರಷ್ಟು ಇಳಿಕೆ ಕಂಡಿದೆ.
ಏನು ಕಾರಣ?
ಇತ್ತೀಚೆಗೆ ಕಾರುಗಳ ಜಿಎಸ್ಟಿ ಏರಿಕೆಯಾಗಿದ್ದು ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಹಕರು ಜಿಎಸ್ಟಿ ಮೊತ್ತ ಕಡಿಮೆಯಾಗಲು ಕಾಯುತ್ತಿದ್ದಾರೆ. ಮಾತ್ರವಲ್ಲದೇ ವಾಹನಗಳನ್ನು ಕೊಂಡುಕೊಳ್ಳುವಾಗ ಈ ಹಿಂದೆ ಇದ್ದ ವಿಮೆ ನೀತಿ ಈಗ ಬದಲಾಗಿದೆ. ವಿಮೆಯ ದರಗಳೂ ಹೆಚ್ಚಾಗಿದ್ದು ಒಟ್ಟಾರೆಯಾಗಿ ದುಂದು ವೆಚ್ಚಗಳು ಎಂಬ ಧೋರಣೆ ಗ್ರಾಹಕರಲ್ಲಿದೆ. ಈ ಎಲ್ಲಾ ಕಾರಣಗಳಿಂದ ಇಂದು ದೇಶದ ಕಾರು ಮಾರುಕಟ್ಟೆ ಕುಸಿತದ ಹಾದಿ ಕಂಡಿದೆ.
ಕೇವಲ ಮಾರುತಿ ಸುಜುಕಿ ಮಾತ್ರ ನಷ್ಟದ ಹಾದಿಯಲ್ಲಿ ಇಲ್ಲ. ಅದರ ಸಾಲಿನಲ್ಲಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಕಾರು ತಯಾರಕ ಸಂಸ್ಥೆಗಳಿವೆ. ಭಾರತದಲ್ಲಿ ಮಾರುತಿ ಅತೀ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದ ಕಾರಣ ಮಾರುತಿ ಸಂಸ್ಥೆ ಹೆಚ್ಚು ನಷ್ಟಗೊಳಗಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.