ಮುಂಬಯಿ ಬಾಂದ್ರಾ ರೈಲ್ವೇ ಸ್ಟೇಶನ್ ಆವರಿಸಿದ ಭಾರೀ ಬೆಂಕಿ
Team Udayavani, Oct 26, 2017, 7:10 PM IST
ಮುಂಬಯಿ : ಇಂದು ಗುರುವಾರ ಸಂಜೆ ಜನ ದಟ್ಟನೆಯ ವೇಳೆಯಲ್ಲಿ ಬಾಂದ್ರಾ ರೈಲು ನಿಲ್ದಾಣದ ಕಾಲು ಸೇತುವೆಯನ್ನು ಭಾರೀ ಬೆಂಕಿ ಆವರಿಸಿಕೊಂಡಿತು.
ಸಮೀಪದ ಬೆಹರಾಮ್‌ಪಾಡದ ಕೊಳೆಗೇರಿಯಲ್ಲಿ ಕಾಣಿಸಿಕೊಂಡ ಬೆಂಕಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಗರದ ತೀವ್ರ ಚಟುವಟಿಕೆಯ ಬಾಂದ್ರಾ ರೈಲು ನಿಲ್ದಾಣಕ್ಕೂ ವ್ಯಾಪಿಸಿಕೊಂಡಿತು.
ಇಲ್ಲಿನ ಕೊಳೆಗೇರಿಯೊಂದರಲ್ಲಿನ ಅನಧಿಕೃತ ನಿಮಾರ್ಣವನ್ನು ನೆಲಸಮ ಮಾಡುವ ಕಾರ್ಯಾಚರಣೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಉಂಟಾದ ಬೃಹತ್ ಬೆಂಕಿ ಅನಾಹುತದಲ್ಲಿ ಓರ್ವ ಅಗ್ನಿ ಶಾಮಕ ಸಿಬಂದಿ ಸೇರಿಂತೆ ಇಬ್ಬರು ಗಾಯಗೊಂಡರು.
ವರದಿಗಳ ಪ್ರಕಾರ ಸುಮಾರು 16 ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಅನೇಕ ಕಿಲೋ ಮೀಟರ್ ದೂರದಿಂದಲೂ ಆಗಸದಲ್ಲಿ ಬಹು ಎತ್ತರಕ್ಕೆ ದಟ್ಟನೆಯ ಕಪ್ಪು ಹೊಗೆ ಎದ್ದಿರುವುದು ಕಂಡು ಬರುತ್ತಿದೆ.
ಈ ತನಕ ಯಾವುದೇ ಜೀವ ಹಾನಿ ಆಗಿರುವ ವರದಿಗಳಿಲ್ಲ.
ಮುನಿಸಿಪಲ್ ಕಾರ್ಪೊರೇಶನ್‌ನವರು ಕೊಳೆಗೇರಿಯಲ್ಲಿನ ಅನಧಿಕೃತ ನಿರ್ಮಾಣಗಳನ್ನು ನೆಲಸಮ ಮಾಡುವಾಗ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬಾಂದ್ರಾ ಲೋಕಲ್ ಸ್ಟೇಶನ್‌ನ ಪೂರ್ವ ಭಾಗದಲ್ಲಿ ಬೆಂಕಿ ಹಬ್ಬತೊಡಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಈ ಲೈನಿಲ್ಲಿ ಹಲವು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.