ನಕ್ಸಲರಿಂದ ರೈಲು ನಿಲ್ದಾಣಕ್ಕೆ ಬೆಂಕಿ; ಇಬ್ಬರು ಅಧಿಕಾರಿಗಳ ಅಪಹರಣ
Team Udayavani, Dec 20, 2017, 11:39 AM IST
ಮಸೂದನ್ : ನಕ್ಸಲರು ತಮ್ಮ ಅಟ್ಟಹಾಸವನ್ನು ಮತ್ತೆ ಮೆರೆದಿದ್ದು ಮಸೂದನ್ ರೈಲು ನಿಲ್ದಾಣದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿ ನಿಲ್ದಾಣಕ್ಕೆ ಹಾನಿ ಉಂಟುಮಾಡಿರುವ ಘಟನೆ ನಿನ್ನೆ ಮಂಗಳವಾರ ತಡ ರಾತ್ರಿ ನಡೆದಿದೆ.
ಈ ರೀತಿ ತಮ್ಮ ಉಗ್ರ ಕೃತ್ಯವನ್ನು ಮೆರೆದಿರುವ ನಕ್ಸಲರು ಸಹಾಯಕ ಸೇಶನ್ ಮಾಸ್ಟರ್ ಮತ್ತು ನಿಲ್ದಾಣದ ಇನ್ನೋರ್ವ ಅಧಿಕಾರಿಯನ್ನು ಅಪಹರಿಸಿರುವುದಗಿ ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಮಾಲ್ಡಾ ವಿಭಾಗೀಯ ರೈಲ್ವೇ ಅಧಿಕಾರಿಗೆ ಅಪಹೃತ ಸಹಾಯಕ ಸ್ಟೇಶನ್ ಮಾಸ್ಟರ್ ರಿಂದ ದೂರವಾಣಿ ಕರೆ ಬಂದಿದ್ದು ಅವರು ನೆರವಿಗೆ ಮೊರೆ ಇಟ್ಟಿದ್ದಾರೆ,
ಮಸೂದನ್ನಲ್ಲಿ ರೈಲು ಓಡಾಟ ನಡೆದರೆ ಅಪಹೃತ ಅಧಿಕಾರಿಯನ್ನು ತಾವು ಕೊಲ್ಲುವುದಾಗಿ ನಕ್ಸಲರು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರು ಬೇರೆ ಮಾರ್ಗವಾಗಿ ಪ್ರಯಾಣ ಕೈಗೊಳ್ಳುವಂತೆ ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.