ಸರಕಾರ ಭರಿಸಲಿದೆ ಏಳು ವಾರದ ಹೆರಿಗೆ ರಜೆ ಸಂಬಳ
Team Udayavani, Nov 16, 2018, 7:40 AM IST
ಹೊಸದಿಲ್ಲಿ: ಇನ್ನು ಮುಂದೆ ಮಹಿಳೆಯರಿಗೆ ನೀಡಲಾಗುವ ಇಪ್ಪತ್ತಾರು ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ರಜೆಯ ವೇತನದ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ. ಸರಕಾರಿ ಸಂಸ್ಥೆಗಳು ಮಾತ್ರವಲ್ಲದೆ, ಖಾಸಗಿ ಸಂಸ್ಥೆ ಗಳಿಗೂ ಈ ನಿಯಮ ಅನ್ವಯ ವಾಗಲಿದ್ದು, ಉದ್ಯೋಗದಾತರಿಗೆ ಕೇಂದ್ರ ಸರಕಾರವು 7 ವಾರಗಳ ವೇತನದ ಮೊತ್ತವನ್ನು ಪಾವತಿಸಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯ ಗುರುವಾರ ಘೋಷಣೆ ಮಾಡಿದೆ.
ಆದರೆ, ಮಾಸಿಕ 15 ಸಾವಿರ ರೂ.ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿರುವಂಥ ಮಹಿಳೆಯರ ಹೆರಿಗೆ ರಜೆಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ತಿಳಿಸಿದ್ದಾರೆ. 12 ರಿಂದ 26 ವಾರಗಳ ಕಾಲ ಹೆರಿಗೆ ರಜೆ ವಿಸ್ತರಿಸಿದ ಬಳಿಕ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯ ಸರಕಾರಗಳ ಬಳಿ ಲೇಬರ್ ಸೆಸ್ ಎಂದು ಸಂಗ್ರಹಿಸಲಾಗುವ ಮೊತ್ತ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಹೀಗಾಗಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಪ್ರತಿ ತಿಂಗಳು 15 ಸಾವಿರ ರೂ.ಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯರ 26 ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ವೇತನವನ್ನು ಭರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ. 2017ರ ಮಾರ್ಚ್‌ವರೆಗೆ ಈ ನಿಧಿಯಲ್ಲಿ 32,632 ಕೋಟಿ ರೂ.ಗಳಿದ್ದವು. ಈ ಪೈಕಿ 7,500 ಕೋಟಿ ರೂ. ಮೊತ್ತವನ್ನು ಮಾತ್ರ ಬಳಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.