ಜೀವಂತ ನವಜಾತ ಶಿಶು ಸತ್ತಿದೆ ಎಂದಿದ್ದ ಆಸ್ಪತ್ರೆ ಲೈಸನ್ಸ್ ರದ್ದು
Team Udayavani, Dec 8, 2017, 4:42 PM IST
ಹೊಸದಿಲ್ಲಿ : ‘ನವಜಾತ ಅವಳಿ ಶಿಶುಗಳು ಸತ್ತಿವೆ’ ಎಂದು ಸುಳ್ಳು ಘೋಷಣೆ ಮಾಡಿ ಮಗುವಿನ ಹೆತ್ತವರಿಗೆ ಅವುಗಳನ್ನು ಪೊಟ್ಟಣದಲ್ಲಿ ಕಟ್ಟಿಕೊಟ್ಟಿದ್ದ ಇಲ್ಲಿನ ಶಾಲಿಮಾರ್ ಬಾಗ್ನಲ್ಲಿರುವ ಮ್ಯಾಕ್ಸ್ ಹಾಸ್ಪಿಟಲ್ನ ಲೈಸನ್ಸನ್ನು ರದ್ದು ಮಾಡಲಾಗಿದೆ.
“ನಾವು ಮ್ಯಾಕ್ಸ್ ಆಸ್ಪತ್ರೆಯ ಲೈಸನ್ಸ್ ರದ್ದು ಮಾಡಿದ್ದೇವೆ; ನವಜಾತ ಅವಳಿ ಶಿಶುಗಳು ಸತ್ತಿವೆ ಎಂದು ಸುಳ್ಳು ಘೋಷಣೆ ಮಾಡಿದ ಆಸ್ಪತ್ರೆಯ ನಿರ್ಲಕ್ಷ್ಯವು ಸ್ವೀಕಾರಾರ್ಹವಾದುದಲ್ಲ’ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಅಸ್ಪತ್ರೆಯ ಘೋಷಣೆ ಪ್ರಕಾರ ಸತ್ತಿರುವುದಾಗಿ ತಿಳಿಯಲಾದ ಅವಳಿ ಶಿಶುಗಳನ್ನು ಮನೆಗೊಯ್ದ ಹೆತ್ತವರಿಗೆ ಒಂದು ಮಗುವಿನಲ್ಲಿ ಚಲನೆ ಇದ್ದುದು ಕಂಡು ಬಂತು. ಒಡನೆಯೇ ಅವರು ಅದನ್ನು ಸಮೀಪದ ಆಸ್ಪತ್ರೆಗೆ ಒಯ್ದರು. ಅಲ್ಲಿನ ವೈದ್ಯರು ಆ ಮಗು ಜೀವಂತ ಇದೆ ಎಂದು ಹೇಳಿದರು.
ಪೀತಾಂಪುರ ಆಸ್ಪತ್ರೆಗೆ ಸೇರಿಸಲಾದ ಮಗು ಅನಂತರ ಚಿಕಿತ್ಸೆ ವೇಳೆ ಮೃತಪಟ್ಟಿತು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.