ಗರಿಷ್ಠ ನೆರವಿನ ಪ್ರಾಮಾಣಿಕ ಪ್ರಯತ್ನ
Team Udayavani, May 17, 2020, 6:23 AM IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೂಕ್ಷ್ಮ ಸಂವೇದನೆಯ ಮನಸ್ಥಿತಿಯೊಂದಿಗೆ ಜವಾಬ್ದಾರಿಯಿಂದ ಕೋವಿಡ್- 19 ವೈರಸ್ ನಿಯಂತ್ರಣಕ್ಕೆ ಒತ್ತು ನೀಡುವ ಜತೆಗೆ ಅದರಿಂದ ಸಂಕಷ್ಟಕ್ಕೆ ಸಿಲುಕಿರುವ ಜನ ಹಾಗೂ ನಾನಾ ವಲಯದವರಿಗೆ ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಲು ಮುಂದಾಗಿರುವುದು ಶ್ಲಾಘನೀಯ. ಮುಖ್ಯವಾಗಿ ಕೊರೊನಾ ಸೋಂಕು ಹರಡುವಿಕೆ, ಲಾಕ್‌ಡೌನ್, ಸಡಿಲಿಕೆ, ಕಾರ್ಮಿಕರ ವಲಸೆ, ಕಚ್ಚಾ ಸಾಮಗ್ರಿ ಕೊರತೆ ಜತೆಗೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ ಪ್ರಧಾನಿಯವರು ವಿಶೇಷ ಆದ್ಯತೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ ಉಪಕ್ರಮಗಳು ಉಪಯುಕ್ತವಾಗಿವೆ.
ಘೋಷಿತ ಕೊಡುಗೆ ಸದ್ಬಳಕೆಗೆ ಕೆಲ ಸಲಹೆ: ಕೇಂದ್ರ ಸರ್ಕಾರವು ಎಂಎಸ್‌ಎಂಇ ಉದ್ಯಮಗಳಿಗೆ ನೆರವಾಗುವ ಉದ್ದೇಶದಿಂದ ದೇಶಾದ್ಯಂತ 5 ಲಕ್ಷ ಎಂಎಸ್ ಎಂಇ ಉದ್ಯಮಗಳಿಗೆ ಸಾಲ ಮಿತಿಯ ಶೇ. 20ರಷ್ಟು ಹೆಚ್ಚುವರಿ ಸಾಲಕ್ಕೆ ಇ- ಮೇಲ್ ಮೂಲಕವೇ ಮಂಜೂರಾತಿ ನೀಡಿರುವು ದು ಮಹತ್ವದ್ದಾಗಿದೆ. ಆದರೆ ಈಗಾಗಲೇ ಎಂಎಸ್‌ಎಂಇಗಳು ಗರಿಷ್ಠ ಸಾಲ ಪಡೆದಿದ್ದು, ಬ್ಯಾಂಕ್‌ಗಳ ಮಾನದಂಡದ ಪ್ರಕಾರ ಹೆಚ್ಚುವರಿ ಸಾಲಕ್ಕೆ ಅವಕಾಶವೇ ಇಲ್ಲದ ಕಾರಣ ಪ್ರಯೋಜನವಾ ಗದಂತಾ ಗಿದೆ. ಹಾಗಾಗಿ ಬ್ಯಾಂಕ್‌ಗಳು ಮಾನದಂಡ ಸಡಿಲಿಸಿದರೆ ಉದ್ಯಮಗಳಿಗೆ ಅನುಕೂಲವಾಗಲಿದ್ದು, ಕೇಂದ್ರ ಸರ್ಕಾರ ಇತ್ತ ಗಮನ ಹರಿಸಬೇಕು.
50 ದಿನ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಕೊರತೆ, ಕಚ್ಚಾ ಮಗ್ರಿ ಅಭಾವ, ಆರ್ಥಿಕ ಮುಗ್ಗಟ್ಟು ಇತರೆ ಸಮಸ್ಯೆಗಳಿಂದ ಎಂಎಸ್‌ಎಂಇ ಉದ್ಯಮಗಳು ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಉದ್ಯಮ ಪುನರಾರಂಭಿಸಿ ತಯಾರಿಕೆ ಶುರು ಮಾಡುವುದೇ ಕಷ್ಟ. ಉತ್ಪಾದನೆ ಯಾದರೂ ಯಾರಿಗೆ ಮಾರುವುದು ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಹೊತ್ತಿನಲ್ಲಿ ಸಾಲ ಪಡೆದು ಪರಿಸ್ಥಿತಿ ನಿಭಾಯಿಸಿಕೊಳ್ಳಿ ಎಂದು ಹೇಳುವುದು ಸರಿಯಲ್ಲ. ಸಾಲ ಪಡೆದು ಅದನ್ನು ಕಾರ್ಮಿಕರ ವೇತನ, ಇತರೆ ವೆಚ್ಚಕ್ಕೆ ಬಳಸಿದರೆ ಪ್ರಯೋಜನವಾಗದು. ಬದಲಿಗೆ ದುಡಿಮೆ ಬಂಡವಾಳವಾಗಿ ವಿನಿಯೋಗವಾದರೆ ವ್ಯವಹಾರಕ್ಕೆ ಅನುಕೂಲವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರವೇ ನೇರವಾಗಿ ಎಂಎಸ್‌ಎಂಇ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಮೊತ್ತ ಪಾವತಿಸಿದರೆ ಎಂಎಸ್‌ಎಂಇಗಳಿಗೆ ಅನುಕೂಲವಾಗಲಿದೆ. ವಿದೇಶಗಳಲ್ಲಿ ಈ ವ್ಯವಸ್ಥೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತಿಸಬೇಕು.
* ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್‌ಎಂಇಗಳ ಬ್ಯಾಂಕ್ ಖಾತೆಯನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಪರಿಗಣಿಸದಂತೆ ತಡೆಯಲು 20,000 ಕೋಟಿ ರೂ. ಕಾಯ್ದಿರಿಸಿ ರುವುದಾಗಿ ಪ್ರಕಟಿಸಿರುವುದು ಸಾಕಷ್ಟು ಅನುಕೂಲಕರವಾಗಿದೆ. ಹಾಗೆಯೇ ವ್ಯವಹಾರದ ವಿಸ್ತರಣೆ, ಸ್ಟಾರ್ಟ್‌ಅಪ್ ಬಳಕೆ ಇತರೆ ಉತ್ತೇಜನ ಕ್ರಮಗಳಿಗೆ “ಫಂಡ್ ಆಫ್ ಫಂಡ್ಸ್’ ಹೆಸರಿನಲ್ಲಿ 10,000 ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಿ ಈಕ್ವಿಟಿ ನೀಡುವುದಾಗಿ ಹೇಳಿಯುವುದು ಉಪಯುಕ್ತ.
* ಇನ್ನು ಮುಂದೆ 200 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಕಚ್ಚಾ ಸಾಮಗ್ರಿಗಳ ಪೂರೈಕೆಗೆ ಜಾಗತಿಕ ಟೆಂಡರ್ ಆಹ್ವಾನಿಸುವ ಬದಲಿಗೆ ಎಂಎಸ್‌ಎಂಇ ಉದ್ಯಮಗಳಿಂದಲೇ ಖರೀದಿಸುವುದಾಗಿ ಘೋಷಿಸಿರುವುದು ಸಣ್ಣ ಉದ್ಯಮಗಳ ಚೇತರಿಕೆಗೆ ಸಾಕಷ್ಟು ನೆರವಾಗಲಿದೆ. ಎಂಎಸ್‌ಎಂಇ ಉದ್ಯಮಗಳ ವ್ಯಾಖ್ಯಾನ ಬದಲಾವಣೆ ಮಾಡಿ ಹೂಡಿಕೆ ಜತೆಗೆ ವಹಿವಾಟು ಆಧರಿಸಿ ಉದ್ಯಮವನ್ನು ವರ್ಗೀಕರಿಸಲು ಮುಂದಾಗಿರುವುದು ತುಂಬ ಮಹತ್ವದ್ದು.
* ಇ- ಮಾರುಕಟ್ಟೆ ಸಂಪರ್ಕ, ರೈಲ್ವೆ- ರಸ್ತೆ ಕಾಮಗಾರಿ, ಸರಕು- ಸೇವೆಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆರು ತಿಂಗಳ ಅವಧಿ ವಿಸ್ತರಣೆ. ಸಾಕಷ್ಟು ತೆರಿಗೆ ವಿನಾಯ್ತಿ, ನಾನಾ ಶುಲ್ಕ ಪಾವತಿಗೆ ಅವಧಿ ವಿಸ್ತರಣೆ, ವಿದ್ಯುತ್ ವಿತರಣಾ ಸಂಸ್ಥೆಗಳಿಗೆ (ಡಿಸ್ಕಾಂ) 90,000 ಕೋಟಿ ರೂ. ನಗದು ಪೂರೈಸುವುದಾಗಿ ಘೋಷಣೆಯಾಗಿದ್ದು, ಇದರಿಂದ ಎಸ್ಕಾಂಗಳು ಎಂಎಸ್‌ಎಂಇ ಮೇಲೆ ಒತ್ತಡ ಹೇರುವುದು ಕಡಿಮೆಯಾಗಲಿದೆ.
* ಲಾಕ್‌ಡೌನ್ ಘೋಷಿಸಿದ ಕೇಂದ್ರ ಸರ್ಕಾರ ಸುಮ್ಮನೆ ಕೂರದೆ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಪ್ರತಿ ಜನ ಹಾಗೂ ವಲಯದ ಸಮಸ್ಯೆ, ಸವಾಲುಗಳನ್ನು ಆಮೂಲಾಗ್ರವಾಗಿ ಗ್ರಹಿಸಿ ಅವರಿಗೆ ಸ್ಪಂದಿಸುವ ಜತೆಗೆ ಆರ್ಥಿಕತೆ ಬೆಳವಣಿಗೆ ಉತ್ತೇಜನ ನೀಡಲು ಪ್ಯಾಕೇಜ್ ಘೋಷಿಸಿದೆ. ಸಂಕಷ್ಟಕ್ಕೆ ಸಿಲುಕಿದ ಪ್ರತಿಯೊಬ್ಬರಿಗೂ ಗರಿಷ್ಠ ಮಟ್ಟದಲ್ಲಿ ಸ್ಪಂದಿಸಿ ನೆರವಾಗುವ ಪ್ರಯತ್ನ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸೂಕ್ಷ್ಮ ಸಂವೇದನೆ ಹಾಗೂ ಉತ್ತರದಾಯಿತ್ವದ ಉಪಕ್ರಮ ಅಭಿನಂದನೀಯ.
* ಎಸ್. ಸಂಪತ್‌ರಾಮನ್, ಅಖೀಲ ಭಾರತ ಉತ್ಪಾದನಾ ಸಂಸ್ಥೆಗಳ ಒಕ್ಕೂಟದ ಕರ್ನಾಟಕ ಶಾಖೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.