ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಇಳಿಕೆ?
Team Udayavani, Dec 8, 2019, 7:52 PM IST
– ಗವರ್ನರ್‌ಗಳ ಮಂಡಳಿಯಿಂದ (ಒಬಿಜಿ) ಕೇಂದ್ರಕ್ಕೆ ಶಿಫಾರಸು
– ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ ನೇಮಿಸಲ್ಪಟ್ಟಿರುವ ಬಿಒಜಿ
– ಖಾಸಗಿ ಕಾಲೇಜು, ಡೀಮ್ಡ್ ವಿವಿಗಳಲ್ಲಿನ ಶುಲ್ಕ ಇಳಿಕೆಗೆ ಶಿಫಾರಸು
– ಈಗಿರುವ ಶುಲ್ಕಕ್ಕಿಂತ ಶೇ. 50ರಷ್ಟು ಕಡಿಮೆ ಶುಲ್ಕಕ್ಕೆ ಸಲಹೆ
ನವದೆಹಲಿ: ಖಾಸಗಿ ವೈದ್ಯ ಕಾಲೇಜುಗಳ ಬೋಧನಾ ಶುಲ್ಕವನ್ನು ಶೇ 70ರಿಂದ 90ರಷ್ಟು ಇಳಿಸುವ ಪ್ರಸ್ತಾವನೆಯನ್ನು “ಬೋರ್ಡ್ ಆಫ್ ಗವರ್ನರ್ಸ್’ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಶಿಫಾರಸು ಜಾರಿಗೆ ಬಂದರೆ, ಅತ್ಯಂತ ದುಬಾರಿ ಎನಿಸಿಕೊಂಡಿರುವ ವೈದ್ಯಕೀಯ ಶಿಕ್ಷಣ ಜನಸಾಮಾನ್ಯರ ಕೈಗೆಟುಕಲಿದೆ.
ಶುಲ್ಕ ರಚನೆಗಾಗಿ ರೂಪಿಸಿರುವ ಈ ಸಮಿತಿಯ ಸಲಹೆಗಳು ಅಂಗೀಕೃತಗೊಂಡರೆ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶುಲ್ಕ ಇಳಿಕೆಯನ್ನು ನಿರೀಕ್ಷಿಸಬಹುದಾಗಿದೆ. ಇದು ವೈದ್ಯಕೀಯ ವಿದ್ಯಾರ್ಥಿಗಳಿಗೆ ದೊಡ್ಡಮಟ್ಟದ ರಿಲೀಫ್ ನೀಡಲಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವ ಶೇ.50ರಷ್ಟು ಸೀಟುಗಳ ಶುಲ್ಕವನ್ನು ಈ ವ್ಯಾಪ್ತಿಗೆ ತರಬೇಕೆನ್ನುವುದು ಸಮಿತಿಯ ಪ್ರಸ್ತಾವನೆ. ಸ್ನಾತಕ ಹಾಗೂ ಸ್ನಾತಕೋತ್ತರದ ಅರ್ಧದಷ್ಟು ಸೀಟುಗಳ ಶುಲ್ಕವನ್ನು ಕ್ರಮವಾಗಿ ಶೇ.70 ಮತ್ತು ಶೇ.90ರಷ್ಟು ಇಳಿಕೆ ಮಾಡುವ ಕುರಿತು ಶಿಫಾರಸು ಮಾಡಲಾಗಿದೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಖಾಸಗಿ ಕಾಲೇಜುಗಳೊಡನೆ ಒಡಂಬಡಿಕೆ ಮಾಡಿಕೊಂಡು ರಿಯಾಯ್ತಿ ದರದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತಿದೆ.ಕೇಂದ್ರದ ಹೊಸ ನೀತಿ ಜಾರಿಗೆ ಬಂದಲ್ಲಿ ದೇಶಾದ್ಯಂತ ಏಕರೂಪದ ಶುಲ್ಕ ವ್ಯವಸ್ಥೆ ಜಾರಿಗೆ ಬರಲಿದೆ.
ಸದ್ಯಕ್ಕೆ ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್‌ನ ವ್ಯಾಸಂಗಕ್ಕೆ ವಾರ್ಷಿಕ 25 ಲಕ್ಷ ರೂ. ಶುಲ್ಕ ಪಾವತಿಸಬೇಕಿದ್ದು, ಹೊಸ ನಿಯಮ ಜಾರಿಗೆ ಬಂದರೆ, ಇದು ವಾರ್ಷಿಕ 6ರಿಂದ 10 ಲಕ್ಷ ರೂ.ಗೆ ಇಳಿಯಲಿದೆ. ಇನ್ನು, ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ವಾರ್ಷಿಕವಾಗಿ 3 ಕೋಟಿ ರೂ.ಗಳಿದ್ದು, ಇದು 1 ಕೋಟಿ ರೂ.ಗಳಿಗೆ ಇಳಿಯಬಹುದೆಂದು ನಿರೀಕ್ಷಿಸಲಾಗಿದೆ.
ದೇಶದಲ್ಲಿರುವ ಒಟ್ಟು ಎಂಬಿಬಿಎಸ್ ಸೀಟುಗಳ ಪೈಕಿ ಶೇ.50ರಷ್ಟು ಸೀಟುಗಳು ಇರುವುದು ಸರ್ಕಾರಿ ಕಾಲೇಜುಗಳಲ್ಲಿ. ಇಲ್ಲಿ ಅತ್ಯಲ್ಪ ಶುಲ್ಕ ವಿಧಿಸಲಾಗುತ್ತದೆ.
2018ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಅದರ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ. ಆ ಪ್ರಕ್ರಿಯೆಯಿನ್ನೂ ಪ್ರಗತಿ ಹಂತದಲ್ಲಿರುವುದರಿಂದ ದೇಶದ ವೈದ್ಯಕೀಯ ಶಿಕ್ಷಣದ ಮೇಲುಸ್ತುವಾರಿಗಾಗಿ ಬಿಒಜಿಯನ್ನು ನೇಮಿಸಿದೆ. ಜತೆಗೆ, ಶುಲ್ಕ ನಿಗದಿಗೆ ಸಂಬಂಧಿಸಿದ ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನೂ ಬಿಒಜಿಗೆ ವಹಿಸಲಾಗಿದೆ.
ಎಷ್ಟಿದೆ, ಎಷ್ಟಾಗಬಹುದು?
ಸ್ನಾತಕ ಕೋರ್ಸ್‌ಗಳ ಹಾಲಿ ಶುಲ್ಕ- 25 ಲಕ್ಷ ರೂ.
ಹೊಸ ನಿಯಮ ಜಾರಿಯಾದರೆ ಶುಲ್ಕ- 6-10 ಲಕ್ಷ ರೂ.
ಸ್ನಾತಕೋತ್ತರ ಕೋರ್ಸ್‌ಗಳ ಹಾಲಿ ಶುಲ್ಕ – 3 ಕೋಟಿ ರೂ.
ಹೊಸ ನಿಯಮ ಜಾರಿಯಾದರೆ – 1 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.