ಕಾಪ್ಟರ್‌ಗಳಿಗೆ “ವೈದ್ಯಕೀಯ’ ಸ್ಪರ್ಶ
ನಕ್ಸಲ್ ಪೀಡಿತ ಪ್ರದೇಶಗಳ ಯೋಧರ ನೆರವಿಗಾಗಿ ಕ್ರಮ
Team Udayavani, Mar 2, 2020, 9:11 PM IST
ನವದೆಹಲಿ: ಇದೇ ಮೊದಲ ಬಾರಿಗೆ, ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಗಸ್ತು ನಡೆಸುವ ಸೇನಾ ಹೆಲಿಕಾಪ್ಟರ್‌ಗಳಲ್ಲಿ ಮಿನಿ ಆಸ್ಪತ್ರೆಯಂಥ ಸೌಲಭ್ಯಗಳನ್ನು ಕಲ್ಪಿಸಲು (ಏರ್ ಆ್ಯಂಬುಲೆನ್ಸ್ ಮಾದರಿಯಲ್ಲಿ) ನಿರ್ಧರಿಸಲಾಗಿದೆ. ಈ ಮೂಲಕ, ನಕ್ಸಲ್ ದಾಳಿಗಳಲ್ಲಿ ಗಾಯಗೊಂಡವರಿಗೆ, ಕಾರ್ಯಾಚರಣೆ ವೇಳೆ ಅಸ್ವಸ್ಥರಾದವರಿಗೆ, ತಕ್ಷಣದ ಚಿಕಿತ್ಸೆ ನೀಡಲು ಇದು ಸಹಾಯವಾಗಲಿದೆ.
ಇಂಥ ಏರ್ ಆ್ಯಂಬುಲೆನ್ಸ್ ಮಾದರಿಯ ಹೆಲಿಕಾಪ್ಟರ್‌ಗಳ ನಿರ್ವಹಣೆಗಾಗಿ ವಿಶೇಷ ವೈದ್ಯರು ಹಾಗೂ ಸಹಾಯಕರ ತಂಡವನ್ನು ನೇಮಿಸಲಾಗಿದ್ದು, ಇವರಿಗೆ ಛತ್ತೀಸ್‌ಗಡದ ಜಗದಲ್ಪುರದ ಸಿಆರ್‌ಪಿಎಫ್ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
“”ಅಗತ್ಯ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ತ್ವರಿತವಾಗಿ ಆಸ್ಪತ್ರೆಗೆ ರವಾನೆಯಂಥ ಸೇವೆಗಳು ಈ ಏರ್ ಆ್ಯಂಬುಲೆನ್ಸ್‌ಗಳಿಂದ ಸಿಗುವುದರಿಂದ ಯೋಧರಿಗೆ ಹೆಚ್ಚು ಅನುಕೂಲವಾಗುತ್ತದೆ” ಎಂದು ಸಿಆರ್‌ಪಿಎಫ್ ಮುಖ್ಯಸ್ಥರಾದ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.