ಅಂಚೆ ಮೂಲಕ ಮತಹಾಕಿದ ದೇಶದ ಮೊದಲ ಮತದಾರ ನೇಗಿ
Team Udayavani, Nov 4, 2022, 7:15 AM IST
ಶಿಮ್ಲಾ: ಶ್ಯಾಮಶರಣ್ ನೇಗಿ ಹೆಸರಿನ ಈ ವ್ಯಕ್ತಿಗೆ 106 ವರ್ಷ. ಇವರು ಬುಧವಾರ ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪ ಎಂಬ ಊರಿನಲ್ಲಿರುವ ತಮ್ಮ ನಿವಾಸದಲ್ಲಿ ಅಂಚೆಯ ಮೂಲಕ, ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದರು!
1951ರ ದೇಶದ ಮೊದಲ ಚುನಾವಣೆಗೆ ಮತ ಚಲಾಯಿಸಿದ ಇವರ ಹೆಗ್ಗಳಿಕೆ ಏನು ಗೊತ್ತಾ? ಇವರು ಭಾರತದ ಮೊದಲ ಮತದಾರ. ಇದುವರೆಗೆ ಒಟ್ಟು 34 ಬಾರಿ ಮತ ಹಾಕಿದ್ದಾರೆ. ಈ ಬಾರಿಯೂ ಮತಗಟ್ಟೆಗೇ ಹೋಗಿ ಮತ ಹಾಕಬೇಕೆಂದು ಬಯಸಿದ್ದರು. ಆದರೆ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಅಂಚೆ ಮೂಲಕ ಮತಹಾಕಲು ನಿರ್ಧರಿಸಿದರು.
ಇದನ್ನು ನೋಡಿದ ಜಿಲ್ಲಾ ಚುನಾವಣಾ ಆಯೋಗ ಇವರ ಮನೆಗೆ ಅಂಚೆ ಮತಗಟ್ಟೆಯನ್ನು ತಂದು, ಮತ ಹಾಕಿಸಿಕೊಂಡಿತು. 2020ರಿಂದ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಅಂಚೆಯ ಮೂಲಕವೇ ಮತ ಹಾಕಲು ಅವಕಾಶ ಕೊಟ್ಟಿದೆ. ನ.12ರಂದು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.